Advertisement
ಉದುಮ 13, ಕಾಸರಗೋಡು 9, ಮಂಜೇಶ್ವರ, ವರ್ಕಾಡಿ ತಲಾ 11, ಚೆಮ್ನಾಡ್, ಅಜಾನೂರು ತಲಾ 7, ಕಾಂಞಂಗಾಡ್ 5, ಕಾರಡ್ಕ, ಪಳ್ಳಿಕ್ಕರೆ ತಲಾ 3, ನೀಲೇಶ್ವರ 2, ಮಂಗಲ್ಪಾಡಿ, ಕುಂಬಳೆ, ಮಧೂರು, ಮೀಂಜ, ಚೆಂಗಳ, ಕೋಡೋಂ ಬೇಳೂರು, ಬೇಡಡ್ಕ, ಪುಲ್ಲೂರು ಪೆರಿಯ, ಕಳ್ಳಾರ್, ಪಿಲಿಕೋಡ್‌ಗಳಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿದ್ದ ನಾಲ್ವರು ಶನಿವಾರ ಬಿಡುಗಡೆಗೊಂಡಿದ್ದಾರೆ.
ಮೂಲ್ಕಿ: ಪರಿಸರದಲ್ಲಿ ಶನಿವಾರ ಕೊರೊನಾದಿಂದ ಒಂದು ಸಾವು ಹಾಗೂ 7 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕಿನ್ನಿಗೋಳಿ ಮೆನ್ನಬೆಟ್ಟಿನ 59 ವರ್ಷದ ಪುರುಷ ಮೃತಪಟ್ಟವರು. ಹೊಸಕಾಡು ಕೆಮ್ರಾಲ್‌ನ ಪುರುಷ, ಕಾರ್ನಾಡು ಸದಾಶಿವ ನಗರ ನಾಗಬನ ಬಳಿಯ ಇಬ್ಬರು ಪುರುಷರು, ಕಿನ್ನಿಗೋಳಿ, ಏಳಿಂಜೆ, ಕರ್ನಿರೆ ಮತ್ತು ಕರಿತೋಟದ ಪುರುಷ ಬಾಧಿತರು. ಕೊಡಗು ಜಿಲ್ಲೆ: 29 ಪಾಸಿಟಿವ್
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶನಿವಾರ 29 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ವರೆಗೆ ಒಟ್ಟು 951 ಪ್ರಕರಣಗಳು ದಾಖಲಾಗಿವೆ. 12 ಸಾವು ಸಂಭವಿಸಿವೆ.