Advertisement

ರಾಜ್ಯದಲ್ಲಿ ಬುಧವಾರ 9,265 ಮಂದಿಗೆ ಕೋವಿಡ್ ಸೋಂಕು ದೃಢ; 75 ಮಂದಿ ಸಾವು

10:22 PM Oct 14, 2020 | mahesh |

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಹೊಸದಾಗಿ 9,265 ಮಂದಿಗೆ ಕೋವಿಡ್ ಸೋಂಕು ತಗಲಿದೆ. ಜತೆಗೆ 8,662 ಮಂದಿ ಗುಣಮುಖರಾಗಿದ್ದು, 75 ಮಂದಿ ಮೃತಪಟ್ಟಿದ್ದಾರೆ.

Advertisement

ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 7.35 ಲಕ್ಷಕ್ಕೆ ಹೆಚ್ಚಳವಾಗಿದ್ದು, ಈಗಾಗಲೇ 6.11 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 10,198ಕ್ಕೇರಿದೆ. ಇಂದಿಗೂ ಸುಮಾರು 1.13 ಲಕ್ಷ ಮಂದಿ ಚಿಕಿತ್ಸೆಯಲ್ಲಿದ್ದು, ಈ ಪೈಕಿ 925 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸತತವಾಗಿ ಎರಡು ದಿನ 10 ಸಾವಿರ ಗಡಿದಾಟಿದ್ದ ಗುಣಮುಖರ ಸಂಖ್ಯೆ ಬುಧವಾರ ಎಂಟು ಸಾವಿರಕ್ಕೆ ಕುಸಿದಿದೆ. ಮಂಗಳವಾರಕ್ಕೆ ಹೋಲಿಸಿದರೆ ಹೊಸ ಪ್ರಕರಣಗಳು 1074 ಏರಿಕೆಯಾಗಿವೆ. ಗುಣಮುಖರ ಸಂಖ್ಯೆ 1759 ಇಳಿಕೆಯಾಗಿದೆ. ಇನ್ನು ಸೋಂಕಿತರ ಸಾವು 12 ಕಡಿಮೆಯಾಗಿದೆ. ಸೋಂಕು ಪರೀಕ್ಷೆಗಳು ಆರು ಸಾವಿರದಷ್ಟು ಹೆಚ್ಚಳವಾಗಿದ್ದು, 1.13 ಲಕ್ಷ ಪರೀಕ್ಷೆಗಳು ನಡೆದಿವೆ. ಒಟ್ಟಾರೆ ಈವರೆಗೂ ನಡೆದ ಪರೀಕ್ಷೆಗಳ ಸಂಖ್ಯೆ 61.37 ಲಕ್ಷಕ್ಕೆ ತಲುಪಿವೆ.

ಬುಧವಾರ ಅತಿ ಹೆಚ್ಚು ಬೆಂಗಳೂರಿನಲ್ಲಿ 4574, ಮೈಸೂರು 641, ಬೆಂಗಳೂರು ಗ್ರಾಮಾಂತರ 344, ತುಮಕೂರು 341 ಪ್ರಕರಣಗಳು ವರದಿಯಾಗಿವೆ. ಇನ್ನು ಬೆಂಗಳೂರಿನಲ್ಲಿ 27, ಮೈಸೂರಿನಲ್ಲಿ 11 ಸೋಂಕಿತರ ಸಾವು ವರದಿಯಾಗಿದೆ. ಸದ್ಯ ರಾಜ್ಯದ ಗುಣಮುಖ ದರ ಶೇ.83.1 ಮತ್ತು ಮರಣದರ 1.4ರಷ್ಟಿದೆ. ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಸಕ್ರಿಯ (ಪಾಸಿಟಿವ್‌) ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next