Advertisement
ಹೀಗಾಗಿ ಶುಕ್ರವಾರ ನಡೆಯುವ ಸಭೆಯಲ್ಲಿ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಿದ್ದು, ಸೋಂಕು ನಿಯಂತ್ರಣದ ಜವಾಬ್ದಾರಿಯನ್ನು ಜಿಲ್ಲಾಡಳಿತದ ಹೆಗಲಿಗೆ ಏರಿಸುವ ಸಾಧ್ಯತೆ ಇದೆ.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಾರಾಂತ್ಯದ ಕರ್ಫ್ಯೂ ಸಡಿಲಿಕೆ ಮಾಡುವಂತೆ ಸಿಎಂ ಮೇಲೆ ಒತ್ತಡ ಹೇರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿ.ಟಿ.ರವಿ, ಪ್ರತಾಪ್ ಸಿಂಹ ಕೂಡಾ ಸರಕಾರದ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Related Articles
Advertisement
ಜನರ ಜೀವನ ಉಳಿಸೋದು ಕೂಡ ಗಮನದಲ್ಲಿದೆ
ಸುದ್ದಿಗಾರರೊಂದಿಗೆ ಮಾತನಾಡಿದ ಆರ್ ಅಶೋಕ್, ನಾಳೆ (ಶುಕ್ರವಾರ) ಕೋವಿಡ್, ಹೊಸ ಗೈಡ್‌ಲೈನ್ಸ್ ಬಗ್ಗೆ ಚರ್ಚೆಗೆ ಸಿಎಂ ನೇತೃತ್ವದಲ್ಲಿ 1ಗಂಟೆಗೆ ಸಭೆ ಕರೆದಿದ್ದು,ಕೋವಿಡ್ ತಜ್ಞರ ಸಮಿತಿ, ಸಚಿವರಾದ ಸುಧಾಕರ್, ಅಶ್ವಥ್ ನಾರಾಯಣ್, ಅರಗ ಮೊದಲಾದವರು ಭಾಗವಹಿಸುತ್ತಾರೆ.
ಈವರೆಗೆ ರಾಜಕೀಯವಾಗಿ ಮೂರು ಪಕ್ಷದವರು ವೈಯಕ್ತಿಕ ಹೇಳಿಕೆ ನೀಡಿದ್ದಾರೆ.ಸಂಘಸಂಸ್ಥೆಗಳು ಕೂಡ ಹೇಳಿಕೆ ನೀಡಿದಿವೆ.ಈ ನಡುವೆ ಕೇಂದ್ರ ಸರ್ಕಾರ ವಿದೇಶಿ ವಿಮಾನಯಾನ ರದ್ದು ಮಾಡಿದೆ ಎಂದರು.
ತಜ್ಞರು ವರದಿ ನೀಡಿರು ಬಗ್ಗೆಯೂ ಚರ್ಚೆ ಆಗಲಿದೆ.ಸೋಂಕು ಏರಿಕೆ ಆಗುತ್ತಾ ಇದೆ.ಬೆಂಗಳೂರು ನಗರದಲ್ಲಿ ಹೆಚ್ಚುತ್ತಿದ್ದು, ಒಮಿಕ್ರಾನ್ ಕೂಡ ಹೆಚ್ಚುತ್ತಿದೆ. ಸಚಿವ ಸುಧಾಕರ್ ಕೂಡ ಸೋಂಕು ಏರಿಕೆ ಬಗ್ಗೆ ಮಾತನಾಡಿದ್ದಾರೆ.
ಜೊತೆಯಲ್ಲಿ ಜನರ ಜೀವನ ಉಳಿಸೋದು ಕೂಡ ಗಮನದಲ್ಲಿದೆ, ಜೀವ, ಜೀವನ ಎರಡೂ ಗಮನದಲ್ಲಿಟ್ಟುಕೊಂಡು ಎಸ್ ಓ ಪಿ ಬಿಡುಗಡೆ ಮಾಡುತ್ತೇವೆ. ಬೀದಿ ವ್ಯಾಪಾರಿಗಳು, ಕಟ್ಟಡ ಕಾರ್ಮಿಕರ ವಿಚಾರವೂ ಗಮನದಲ್ಲಿದೆ. ನಾಳೆ ಮಧ್ಯಾಹ್ನ 2.30ರ ವೇಳೆಗೆ ನಿರ್ಧಾರ ಆಗಲಿದೆ ಎಂದರು.