ಹಾವೇರಿ: ಸರ್ಕಾರಿ ವೈದ್ಯ, ನೇತ್ರಾಧಿಕಾರಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಉದ್ಯೋಗಿಗಳು ಒಳಗೊಂಡಂತೆ ಜಿಲ್ಲೆಯಲ್ಲಿ ಗುರುವಾರ 155 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಹಾಗೂ 101 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾ ಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 4792 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಗುರುವಾರದ ವರೆಗೆ 3262 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಗುರುವಾರದ ನಾಲ್ಕು ಪ್ರಕರಣ ಸೇರಿ ಈವರೆಗೆ 119 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. 1411 ಸಕ್ರಿಯ ಪ್ರಕರಣಗಳಿವೆ. 1047 ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಹಾಗೂ 364 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಸವಣೂರು ತಾಲೂಕು-09, ಬ್ಯಾಡಗಿ ತಾಲೂಕು-12, ಹಿರೇಕೆರೂರು ತಾಲೂಕು-19, ಹಾವೇರಿ ತಾಲೂಕು-21, ಹಾನಗಲ್ಲ ಹಾಗೂ ಶಿಗ್ಗಾವಿ ತಾಲೂಕಿನಲ್ಲಿ ತಲಾ 24, ರಾಣೆಬೆನ್ನೂರು ತಾಲೂಕಿನಲ್ಲಿ-44 ಹಾಗೂ ಇತರೆ ಎರಡು ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಗುಣಮುಖರಾಗಿ ಹಿರೇಕೆರೂರು ತಾಲೂಕು-02, ಹಾನಗಲ್ ತಾಲೂಕು-08, ಸವಣೂರು ತಾಲೂಕು-09, ಹಾವೇರಿ ತಾಲೂಕು-15, ಬ್ಯಾಡಗಿ ತಾಲೂಕು-17, ರಾಣೆಬೆನ್ನೂರು ತಾಲೂಕು-18, ಶಿಗ್ಗಾವಿ ತಾಲೂಕಿನ 32 ಜನರು ಬಿಡುಗಡೆ ಹೊಂದಿದ್ದಾರೆ. ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ ಆಗಿ ಘೋಷಿಸಲಾಗಿದೆ. ಆಯಾ ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟಲ್ ಕಮಾಂಡರ್ ಆಗಿ ನೇಮಿಸಲಾಗಿದೆ.
ನಾಲ್ವರ ಸಾವು: ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮದ 70 ವರ್ಷದ ಮಹಿಳೆ(ಪಿ-377463), ಹಿರೇಕೆರೂರು ತಾಲೂಕು ದೊಡ್ಡಗುಬ್ಬಿ ಗ್ರಾಮದ 72 ವರ್ಷದ ಪುರುಷ(ಪಿ-311919), ಶಿಗ್ಗಾಂವ ತಾಲೂಕು ಚಾಕಾಪುರದ 45 ವರ್ಷದ ಪುರುಷ(ಪಿ-365115) ಹಾಗೂ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿಯ 70 ವರ್ಷದ ಪುರುಷ (ಪಿ-370786) ಸೇರಿದಂತೆ ನಾಲ್ಕು ಜನರ ಮರಣವನ್ನು ಗುರುವಾರ ದೃಢೀಕರಿಸಲಾಗಿದೆ. ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.