Advertisement

ಜಿಲ್ಲೆಯಲ್ಲಿ ಮತ್ತೆ ತ್ರಿಶತಕ ದಾಟಿದ ಸೋಂಕು

04:00 PM Aug 29, 2020 | Suhan S |

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಆರ್ಭಟ ದಿನೇ ದಿನೆ ಹೆಚ್ಚುತ್ತಿದೆ. ಗುರುವಾರ 325 ಜನರಿಗೆ ಸೋಂಕು ದೃಢಪಟ್ಟು ಭೀತಿ ಮೂಡಿಸಿತ್ತು. ಆದರೆ ಶುಕ್ರವಾರವೂ 358 ಜನರಿಗೆಸೋಂಕು ದೃಢಪಟ್ಟಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

Advertisement

ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಈಗ 7,214ಕ್ಕೆ ಏರಿಕೆಯಾಗಿದ್ದು, ಶುಕ್ರವಾರ ಅರಕಲಗೂಡು ಮತ್ತು ಹಾಸನ ತಾಲೂಕಿನ ತಲಾ ಒಬ್ಬರು ಸಾವಿನೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 177ಕ್ಕೇರಿದೆ. ಸಮಾಧಾನದ ಸಂಗತಿ ಯೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗುತ್ತಿದ್ದು, ಶುಕ್ರವಾರ 167 ಮಂದಿ ಗುಣಮುಖರಾಗುವುದರೊಂದಿಗೆ 4,782 ಮಂದಿ ಇದುವರೆಗೆ ಗುಣಮುಖರಾಗಿದ್ದಾರೆ. ಐಸಿಯುನಲ್ಲಿರುವ 57 ಮಂದಿ ಸೇರಿ ಇನ್ನೂ 2,255 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ಶುಕ್ರವಾರ ಹೊಸದಾಗಿ ಸೋಂಕು ದೃಢಪಟ್ಟ 358 ಜನರ ಪೈಕಿ 130 ಮಂದಿ ಹಾಸನ ತಾಲೂಕಿನವರಾಗಿದ್ದರೆ, 66 ಮಂದಿ ಅರಕಲಗೂಡು ತಾಲೂಕಿಗೆ ಸೇರಿದವರು. ಅರಸೀಕೆರೆ ತಾಲೂಕಿನ 50, ಬೇಲೂರು 41 ಮಂದಿ, ಚನ್ನರಾಯಪಟ್ಟಣ 36 ಮಂದಿ, ಹೊಳೆನರಸೀಪುರ ತಾಲೂಕಿನ 17 ಮಂದಿ, ಆಲೂರು ಮತ್ತು ಸಕಲೇಶಪುರ ತಾಲೂಕಿನ ತಲಾ 7 ಮಂದಿ ಹಾಗೂ ಹೊರ ಜಿಲ್ಲೆಯ ನಾಲ್ವರಿಗೆ ಸೋಂಕು ದೃಢಪಟ್ಟಿದೆ ಎಂದು ಡಿಎಚ್‌ಒ ಡಾ.ಕಾಂತರಾಜು ಮಾಹಿತಿ ನೀಡಿದ್ದಾರೆ.

…………………………………………………………………………………………………………………………………………………

ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ : ಡೀಸಿ ಮನವಿ  : ಹಾಸನ: ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಸೋಕು ಹರಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕು. ರೋಗ ಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಮನವಿ ಮಾಡಿದ್ದಾರೆ.

Advertisement

ಇತ್ತೀಚಿನ ದಿನಗಳಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಾರದಿದ್ದರೂ ಜನರು ಸಾವಿಗೆ ತುತ್ತಾಗುತ್ತಿದ್ದಾರೆ. ಆಮ್ಲಜನಕ ನಿಗದಿತ ಪ್ರಮಾಣಕ್ಕಿಂತಲೂ ಕಡಿಮೆಯಾದರೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ತಪ್ಪದೇ ಕೊರೋನಾ ಪರೀಕ್ಷೆಗೆ ಒಳಗಾಗಬೇಕು. ಕೋವಿಡ್ ಪರೀಕ್ಷೆ ಮಾಡಿದಾಗ ತಕ್ಷಣ ಅಥವಾ ಒಂದು ದಿನದ ಒಳಗೆ ವರದಿ ಬರುತ್ತದೆ ಆದ್ದರಿಂದ ಸಾವಜನಿಕರು ಸಹರಿಸಬೇಕೆಂದು ಹೇಳಿದ್ದಾರೆ. .

ರೋಗ ಲಕ್ಷಣಗಳು ಇದ್ದರೂ ಅಥವಾ ಇಲ್ಲದಿದ್ದರೂ ಪರೀಕ್ಷೆಗೆ ಒಳಗಾಗುವುದರಿಂದ ಸೋಂಕು ಇರುವುದು ದೃಢ ಪಟ್ಟರೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ನೀಡಬಹುದು. ಕೊರೋನಾ ಪರೀಕ್ಷೆಗೆ ತಾಲೂಕು ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ. ಕೊರೊನಾ ಪರೀಕ್ಷೆಗಳು ಹಾಗೂ ಸಲಹೆಗಳಿಗಾಗಿ ಸಹಾಯವಾಣಿ ತೆರೆಯಲಾಗಿದ್ದು, ಸಾರ್ವಜನಿಕರು 08172-246575 ಸಂಖ್ಯೆಗೆ ಕರೆ ಮಾಡಬಹುದೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next