Advertisement

ಹಾಸನ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 7,808ಕ್ಕೆ ಏರಿಕೆ

02:12 PM Aug 31, 2020 | Suhan S |

ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 269 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿಗೆ ನಾಲ್ವರು ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳು ತ್ರಿಶತಕ ದಾಖಲಾಗಿದ್ದ ಸೋಂಕಿನ ಪ್ರಮಾಣಕ್ಕೆ ಹೋಲಿಸಿದರೆ ಭಾನುವಾರ ಸೋಂಕಿನ ಸಂಖ್ಯೆ ತುಸು ಕಡಿಮೆಯಾಗಿದೆ.

Advertisement

ಜಿಲ್ಲೆಯಲ್ಲಿ ಈಗ ಸೋಂಕಿನ ಒಟ್ಟು ಸಂಖ್ಯೆ 7808ಕ್ಕೆ ಏರಿಕೆಯಾಗಿ ದ್ದರೆ, ಸಾವಿನ ಸಂಖ್ಯೆ 187ಕ್ಕೆ ಏರಿಕೆ ಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದವರ ಪೈಕಿ ಭಾನುವಾರ 190 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾಗಿದ್ದು, ಈವರೆಗೆ ಒಟ್ಟು 5194 ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದವರೂ ಸೇರಿ 2427 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.

ಭಾನುವಾರ ಸೋಂಕು ದೃಢಪಟ್ಟ 269 ಜನರ ಪೈಕಿ 67 ಮಂದಿ ಹಾಸನ ತಾಲೂಕಿಗೆ ಸೇರಿದವರಾಗಿದ್ದರೆ, 60 ಮಂದಿ ಅರಸೀಕೆರೆ ತಾಲೂಕಿನವರು. ಚನ್ನರಾಯ ಪಟ್ಟಣ ತಾಲೂಕಿನ 42 ಮಂದಿ, ಅರಕಲಗೂಡು ತಾಲೂಕಿನ 40 ಮಂದಿ, ಬೇಲೂರು ತಾಲೂಕಿನ 25 ಮಂದಿ, ಹೊಳೆನರಸೀ ಪುರ ತಾಲೂಕಿನ 13 ಮಂದಿ, ಆಲೂರು ತಾಲೂಕಿನ 12 ಮಂದಿ, ಸಕಲೇಶಪುರ ತಾಲೂಕಿನ 9 ಮಂದಿ ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಭಾನುವಾರ ಮೃತಪಟ್ಟಿರುವ ನಾಲ್ವರ ಪೈಕಿ ಹಾಸನ ತಾಲೂಕಿಗೆ ಮೂವರು ಸೇರಿದ್ದರೆ, ಬೇಲೂರು ತಾಲೂಕಿನ ಒಬ್ಬರು ಸಾವನ್ನಪ್ಪಿದ್ದಾರೆ.

 

6ಕ್ಕೆ ಕೋವಿಡ್ ವಾರಿಯರ್ಗೆ ಸನ್ಮಾನ : ಹಳೇಬೀಡು: ಕೋವಿಡ್ ಸೋಂಕು ಸಮುದಾಯಕ್ಕೂ ಹಬ್ಬುತ್ತಿರುವ ಪರಿಸ್ಥಿತಿಯಲ್ಲಿ ಜನರು ಭಯಪಡದೇ ಎಚ್ಚರಿಕೆಯಿಂದಿರುವುದು ಒಳ್ಳೆಯದು ಎಂದು ಲಯನ್ಸ್‌ ಕ್ಲಬ್‌ ಅಧ್ಯಕ್ಷ ದ್ಯಾವಪ್ಪನಹಳ್ಳಿ ಸೋಮಶೇಖರ್‌ ಹೇಳಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ವಾರಿಯರ್ಗೆ ಹೋಬಳಿ ಲಯನ್ಸ್‌ ಕ್ಲಬ್‌ ವತಿಯಿಂದ ಭಾನುವಾರ ನಡೆಯಲಿರುವ ಅನು ಸ್ಥಾಪನಾ ಸಮಾ ರಂಭದಲ್ಲಿ ಸನ್ಮಾನಿಸಲಾಗುವುದು. ಕೋವಿಡ್ ಆರ್ಭಟದ ನಡುವೆ ತಮ್ಮ ಪ್ರಾಣ ವನ್ನು ಲೆಕ್ಕಸದೇ ಸಮಾಜಿಕ ಸೇವೆ ಸಲ್ಲಿಸುತ್ತಿರುವವರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಲಯನ್ಸ್‌ ಕ್ಲಬ್‌ನಿಂದ ಚನ್ನಮ್ಮ ನಂಜೇಗೌಡ ಸಭಾಂ ಗಣದಲ್ಲಿ ಸನ್ಮಾನಿಸಲು ತೀರ್ಮಾನಿಸಲಾಗಿದೆ.

ಜಿಲ್ಲಾ ಲಯನ್ಸ್‌ ಅಧ್ಯಕ್ಷ ಚಂದ್ರಶೇಖರ್‌, ಲಯನ್ಸ್‌ ಗೌರ್ವನರ್‌ ವಸಂತ್‌ ಕುಮಾರ್‌ ಶೆಟ್ಟಿ, ಅನುಸ್ಥಾಪ ನಾಧಿಕಾರಿ ಸನ್‌ಜಿತ್‌ ಶೆಟ್ಟಿ ಭಾಗವಹಿಸ ಲಿದ್ದಾರೆ ಎಂದು ತಿಳಿಸಿದರು. ಲಯನ್ಸ್‌ ಕ್ಲಬ್‌ ಸದಸ್ಯರಾದ ಶರತ್‌, ದರ್ಶನ್‌, ಜೈಕುಮಾರ್‌, ಪ್ರಕಾಶ್‌, ರವಿ, ಮೂರ್ತಿ, ಬಾಬಣ್ಣ, ಶಿವನಾಗ್‌, ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next