Advertisement

ಜಿಲ್ಲೆಯಲ್ಲಿ 6000 ಗಡಿಗೆ ಕೋವಿಡ್

01:57 PM Aug 24, 2020 | Suhan S |

ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 195 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲೀಗ ಸೋಂಕಿ ತರ ಸಂಖ್ಯೆ 5,970ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 159 ಕ್ಕೇರಿದೆ.

Advertisement

ಹೊಸದಾಗಿ ಭಾನುವಾರ ಸೋಂಕು ದೃಢಪಟ್ಟ 143 ಮಂದಿಯ ಪೈಕಿ ಹಾಸನ ತಾಲೂಕಿಗೆ ಸೇರಿದವರು 88 ಮಂದಿಯಿದ್ದರೆ, 26 ಮಂದಿ ಬೇಲೂರು ತಾಲೂಕಿನವರು. ಹೊಳೆನರಸೀಪುರ ತಾಲೂಕಿನ 21 ಮಂದಿ, ಅರಸೀಕೆರೆ ತಾಲೂಕಿನ 17 ಮಂದಿ, ಅರಕಲಗೂಡು ತಾಲೂಕಿನ 21 ಮಂದಿ, ಅರಕಲಗೂಡು ಮತ್ತು ಚನ್ನರಾಯಪಟ್ಟಾಣ ತಾಲೂಕಿನ ತಲಾ 15 ಮಂದಿ, ಸಕಲೇಶಫ‌ುರ ತಾಲೂಕಿನ 9 ಮಂದಿ ಹಾಗೂ ಆಲೂರು ತಾಲೂಕಿನ 4 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ಕುಮಾರ್‌ ತಿಳಿಸಿದ್ದಾರೆ.

ಭಾನುವಾರ ಮೃಪಟ್ಟಿರುವ ಮೂವರಲ್ಲಿ ಹಾಸನ ತಾಲೂಕಿನ 55 ವರ್ಷದ ಪುರುಷ , ಆಲೂರು ತಾಲೂಕಿನ 72 ವರ್ಷದ ಪುರುಷ ಹಾಗೂ ಬೇಲೂರು ತಾಲೂಕಿನ 28 ವರ್ಷ ಮಹಿಳೆ ಹಾಸನ ಹಿಮ್ಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭಾನುವಾರ 128 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು 3946 ಮಂದಿ ಈವರೆಗೆ ಗುಣಮುಖರಾಗಿದ್ದಾರೆ. ಐಸಿಯು ನಲ್ಲಿರುವ 59 ಮಂದಿ ಸೇರಿ 1,865 ಮಂದಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next