Advertisement

141 ಜನರಲ್ಲಿ ಸೋಂಕು ಪತ್ತೆ

04:32 PM Aug 25, 2020 | Suhan S |

ಗದಗ: ಜಿಲ್ಲೆಯಲ್ಲಿ ಹೊಸದಾಗಿ 141 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 4217ಕ್ಕೆ ಏರಿಕೆಯಾಗಿದೆ. ಈ ಪೈಕಿ 2958 ಜನರು ಗುಣಮುಖರಾಗಿದ್ದು,1193 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈ ಪೈಕಿ ಜಿಲ್ಲೆಯ ಗದಗ-53, ಮುಂಡರಗಿ -31, ನರಗುಂದ-13, ರೋಣ -30, ಶಿರಹಟ್ಟಿ-10, ಹೊರಜಿಲ್ಲೆಯ ನಾಲ್ವರಿಗೆ ಸೋಂಕು ಪತ್ತೆಯಾಗಿದೆ. ಗದಗ ಬೆಟಗೇರಿ ನಗರದ ರೈಲ್ವೆ ಕ್ವಾರ್ಟರ್ಸ್‌, ಹುಡ್ಕೊ ಕಾಲನಿ 1ನೇ ಕ್ರಾಸ್‌, ಬ್ಯಾಂಕರ್‌ ಕಾಲನಿ, ಜಿಮ್ಸ್‌ ಹಾಸ್ಪಿಟಲ್‌ ಕ್ವಾರ್ಟರ್ಸ್‌, ಹುಬ್ಬಳ್ಳಿ ರಸ್ತೆ, ಒಕ್ಕಲಗೇರಿ ಓಣಿ, ಜಿಮ್ಸ್‌ ಹಾಸ್ಪಿಟಲ್‌, ಕಳಸಾಪುರ ರಸ್ತೆ, ಮುಳಗುಂದ ನಾಕಾ, ಬೆಟಗೇರಿಯ ಬಸವೇಶ್ವರ ನಗರ, ಬಸವನಬಾವಿ ಓಣಿ, ಶಹಪುರ ಪೇಟ, ಕಿಲ್ಲಾ ಓಣಿ, ಟ್ಯಾಗೋರ್‌ ರಸ್ತೆ, ಸಾಯಿಬಾಬಾ ದೇವಸ್ಥಾನದ ಹಿಂದುಗಡೆ,  ನಂದೀಶ್ವರನಗರ, ಲಕ್ಷ್ಮೀ ನಗರ, ಗದಗ ತಾಲೂಕಿನ ಹರ್ತಿ, ಕುರ್ತಕೋಟಿ, ಲಕ್ಕುಂಡಿ, ಕಣವಿ, ಹೊಸೂರು ಮುಳಗುಂದ, ಮುಂಡರಗಿ ಪಟ್ಟಣದ ಕದಾಂಪುರ ಸ್ಟಾಪ್‌, ಹುಡ್ಕೊ ಕಾಲನಿ, ದುರ್ಗಾದೇವಿ ನಗರ, ಮುಂಡರಗಿ ತಾಲೂಕಿನ ಡೋಣಿ, ಎಕ್ಲಾಸಪುರ, ಕಲಕೇರಿ, ಪೇಠಾಲೂರು, ಡಂಬಳ, ಮುಷ್ಟಿಕೊಪ್ಪ, ಬಾಗೇವಾಡಿ, ಹೆಸರೂರ, ಶಿರೋಳ, ಪಾಪನಾಶಿ, ಮುಂಡವಾಡ, ಹಮ್ಮಿಗಿ, ಕೊರ್ಲಳ್ಳಿ, ನರಗುಂದ ಪಟ್ಟಣದ ಸರಸ್ವತಿ ನಗರ, ಕಸಬಾ ಓಣಿ, ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ ಕೆಲವರಿಗೆ ಕೋವಿಡ್ ದೃಢಪಟ್ಟಿದೆ.

ರೋಣ ಪಟ್ಟಣದ ತಳವಾರ ಓಣಿ, ಆಶ್ರಯ ಪ್ಲಾಟ್‌, ಶಿವಪೇಟ 7ನೇ ಕ್ರಾಸ್‌, ಜನತಾ ಪ್ಲಾಟ್‌, ಹೊರಪೇಟೆ ಓಣಿ, ರೋಣ ತಾಲೂಕಿನ ಕೃಷ್ಣಾಪುರ, ಬೆಳವಣಕಿ, ಕಲ್ಲಿಗನೂರು, ಸರ್ಜಾಪುರ, ಹೊಸಳ್ಳಿ, ಸೂಡಿ, ಹಿರೇಹಾಳ, ಮುಶಿಗೇರಿ, ರಾಜೂರು, ಕುರಟ್ಟಿ, ಹೊಳೆ ಆಲೂರ, ಹಿರೇಮಣ್ಣೂರ, ಹೊಳೆಹಡಗಲಿ, ನರೇಗಲ್‌, ಶಿರಹಟ್ಟಿ ತಾಲೂಕಿನ ಉಳ್ಳಟ್ಟಿ, ಸೂರಣಗಿ, ಬೆಳ್ಳಟ್ಟಿ, ನಾರಾಯಣಪುರ, ಕೋಗನೂರ, ಗೋವನಕೊಪ್ಪ, ಲಕ್ಷ್ಮೇಶ್ವರ ಪಟ್ಟಣದ ಕೋರ್ಟ್‌ ಪ್ರದೇಶ, ಸುಗ್ನಳ್ಳಿ, ಗಜೇಂದ್ರಗಡ ಪಟ್ಟಣದ ಗಜೇಂದ್ರಗಡ , ಸರ್ಕಾರಿ ಶಾಲೆಯ ಹತ್ತಿರ, ಪತ್ತಾರಗಲ್ಲಿ, ಜವಳಿ ಪೇಟೆ ಭಾಗದ ಕೆಲವರಿಗೆ ಕೋವಿಡ್‌-19 ಸೋಂಕು ಇರುವುದು ಖಚಿತವಾಗಿದೆ.

ಮೂವರ ಸಾವು: ಗದಗಿನ ಬೆಟಗೇರಿ ನಿವಾಸಿಗಳಾದ 84 ವರ್ಷದ ವೃದ್ಧ(ಪಿ-235785), 64 ವರ್ಷದ ವೃದ್ಧ(ಪಿ-181741) ಹಾಗೂ 68 ವರ್ಷದ ವೃದ್ಧ(ಪಿ-237582) ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್‌ ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next