ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಸೋಮವಾರದ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 16 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತ ಮೂರು ಮಂದಿಯಲ್ಲಿ ಇಬ್ಬರು ಹೃದಯಾಘಾತ ಹಾಗೂ ಓರ್ವ ತೀವ್ರ ಉಸಿರಾಟದ ತೊಂದರೆ ಹಾಗೂ ಸಕ್ಕರೆ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.
ತಹಶೀಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂ ಕಿನ ಹೆಲ್ತ್ ಬುಲೆಟಿನ್ ಅನ್ವಯ, ಸೋಮವಾರದ ಸಂಜೆವರೆಗೆ. ದೊಡ್ಡಬಳ್ಳಾಪುರ ತಾಲೂಕಿನ 12 ಪುರುಷ, 4 ಮಹಿಳೆಯರು ಸೇರಿ 16 ಮಂದಿಗೆ ಸೋಂಕು ದೃಢಪಟ್ಟಿದೆ.ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಟೆ ಬೀದಿ 50 ವರ್ಷದ ಪುರುಷ, ದೊಡ್ಡ ಬಳ್ಳಾಪುರ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲೇಪೇಟೆ 76 ವರ್ಷದ ಪುರುಷ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ ತಾಲೂಕಿನಲ್ಲಿ 1395 ಮಂದಿಗೆ ಸೋಂಕು ತಗುಲಿದ್ದು, 894 ಮಂದಿ ಗುಣಮುಖರಾಗಿದ್ದರೆ 46 ಮಂದಿ ಸಾವನ್ನಪ್ಪಿದ್ದಾರೆ.
………………………………………………………………………………………………………………………………………………………
ತಪಾಸಣೆ ಹೆಚ್ಚಳ : ದೊಡ್ಡಬಳ್ಳಾಪುರ: ನಗರದಲ್ಲಿ ಹೆಚ್ಚುತ್ತಿರುವ ಸರಣಿ ಕಳವು ಪ್ರಕರಣಗಳ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ವೃತ್ತದಲ್ಲಿ ಪೊಲೀಸರು ವಾಹನಗಳ ದಾಖಲಾತಿಗಳ ಪರಿಶೀಲನೆ ನಡೆಸಿದರು.
ಈ ಬಗ್ಗೆ ಮಾಹಿತಿ ನೀಡಿದ ಡಿವೈಎಸ್ಪಿ ಟಿ.ರಂಗಪ್ಪ, ನಗರದಲ್ಲಿ ನಡೆಯುತ್ತಿರುವ ಸರಣಿ ಕಳವು ಪ್ರಕರಣಗಳಲ್ಲಿ ಸ್ಥಳೀಯರ ಕೈ ಚಳಕವೇ ಕಾಣುತ್ತಿದೆ. ಪೊಲೀ ಸರ ರಾತ್ರಿ ಗಸ್ತು ಹೆಚ್ಚಿ ಸುವುದು ಬೈಕ್, ಕಾರು ಸೇರಿ ಎಲ್ಲಾ ರೀತಿಯ ವಾಹನ ತಪಾಸಣೆ ತೀವ್ರ ಗೊಳಿಸಲಾಗಿದೆ. ವಾಹನಗಳ ಸವಾರರು ಸೂಕ್ತ ದಾಖಲೆ ಗಳನ್ನು ಸದಾ ತಮ್ಮ ಬಳಿ ಇಟ್ಟು ಕೊಂಡಿರಲೇ ಬೇಕು. ಇಲ್ಲವಾದರೆ ದಂಡ ವಿಧಿಸಲಾಗು ವುದು ಎಂದರು. ಒಂದೆರಡು ದಿನ ಮನೆಯಿಂದ ಹೊರ ಹೋಗುವ ಸಂದರ್ಭಗಳಲ್ಲಿ ಯಾರಾದರೂ ಒಬ್ಬರಿಗೆ ಜವಾಬ್ದಾರಿ ವಹಿಸಿ ಹೋಗುವುದು, ಮನೆಗಳ ಸಮೀಪ ಸಿಸಿ ಟಿವಿ ಕ್ಯಾಮರಾ ಅಳವಡಿಸ ಬೇಕು. ಇದರಿಂದ ಸಾಕಷ್ಟು ಅಪರಾಧ ಗಳನ್ನು ತಡೆಯಬಹುದಾಗಿದೆ ಎಂದರು.