ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾದಿಂದ 471 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕಿತರಗಿಂತಲೂ ಗುಣಮುಖರಾದವರೇ ಹೆಚ್ಚು ಎಂಬುದು ಗಮನಾರ್ಹ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 209, ಹರಿಹರದಲ್ಲಿ 28, ಜಗಳೂರಿನಲ್ಲಿ 12, ಚನ್ನಗಿರಿ ಯಲ್ಲಿ65, ಹೊನ್ನಾಳಿಯಲ್ಲಿ 41 ಹಾಗೂ ಹೊರ ಜಿಲ್ಲೆಯ 26 ಜನ ಒಳಗೊಂಡಂತೆ 471 ಸೋಂಕಿತರು ಗುಣಮುಖರಾಗಿದ್ದಾರೆ.
ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 110 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 60 , ಜಗಳೂರಿನಲ್ಲಿ 9 , ಚನ್ನಗಿರಿಯಲ್ಲಿ 103, ಹೊನ್ನಾಳಿಯಲ್ಲಿ 69 ಹಾಗೂ ಹೊರ ಜಿಲ್ಲೆಯ 12 ಜನರು ಒಳಗೊಂಡಂತೆ 369 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 20620, ಹರಿಹರದಲ್ಲಿ 5149, ಜಗಳೂರಿನಲ್ಲಿ1966, ಚನ್ನಗಿರಿಯಲ್ಲಿ 3905, ಹೊನ್ನಾಳಿಯಲ್ಲಿ4553, ಹೊರ ಜಿಲ್ಲೆಯ 1109 ಜನರು ಸೇರಿದಂತೆ ಈವರೆಗೆ ಒಟ್ಟು37102 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೊರೊನಾದಿಂದ ಗುಣಮುಖರಾದ ದಾವಣಗೆರೆ ತಾಲೂಕಿನಲ್ಲಿ 21649, ಹರಿಹರದಲ್ಲಿ 5793, ಜಗಳೂರಿನಲ್ಲಿ 2011, ಚನ್ನಗಿರಿಯಲ್ಲಿ 4203, ಹೊನ್ನಾಳಿಯಲ್ಲಿ 4545, ಹೊರ ಜಿಲ್ಲೆಯ 38,900 ಜನರು ಸೇರಿದಂತೆ 29,389 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಗುಣಮುಖರ ಸಂಖ್ಯೆಯೂ ಸೋಂಕಿತರ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಜಿಲ್ಲೆಯಲ್ಲಿ 4452 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಮೂವರು ಮೃತಪಟ್ಟಿದ್ದಾರೆ. ದಾವಣಗೆರೆಯ ನಿಟುವಳ್ಳಿಯ 63 ವರ್ಷದ ವೃದ್ಧೆ, ಎಸ್.ಎಸ್. ಬಡಾವಣೆಯ 65 ವರ್ಷದ ವೃದ್ಧೆ ಹಾಗೂ ಹರಿಹರ ತಾಲೂಕಿನ ಮಲೇಬೆನ್ನೂರು ಪಟ್ಟಣದ 53 ವರ್ಷದ ವ್ಯಕ್ತಿ ಮೃತಪಟ್ಟವರು. ಈವರೆಗೆ ಕೊರೊನಾದಿಂದ ಜಿಲ್ಲೆಯಲ್ಲಿ 329 ಜನರು ಸಾವನ್ನಪ್ಪಿದ್ದಂತಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 244 ಸೋಂಕಿತರು ಸಾಮಾನ್ಯ,691 ಸೋಂಕಿತರು ಆಕ್ಸಿಜನ್, 28 ಸೋಂಕಿತರು ಎಚ್‌ಎಫ್‌ಎನ್‌ಸಿ, 52 ಸೋಂಕಿತರು ವೆಂಟಿಲೇಟರ್ 38 ಸೋಂಕಿತರು ವೆಂಟಿಲೇಟರ್ ರಹಿತ,2453 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 600 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.