ಚಾಮರಾಜನಗರ: ಕೋವಿಡ್ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ಶನಿವಾರ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಹೊಸದಾಗಿ 28 ಜನರಿಗೆ ಸೋಂಕು ದೃಢಪಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 217ಕ್ಕೇರಿದೆ.
ಸೋಂಕಿನಿಂದ ಶನಿವಾರ 30 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇವರು ಮೂಲತಃ ಚಾಮರಾಜನಗರ ಪಟ್ಟಣದವರಾಗಿದ್ದು, ಮೈಸೂರಿನಲ್ಲಿ ವಾಸಿಸುತ್ತಿದ್ದರು. ಅನಾರೋಗ್ಯದ ಕಾರಣ ಚಾಮರಾಜನಗರಕ್ಕೆ ಬಂದಿದ್ದರು. ಶುಕ್ರವಾರ ರಾತ್ರಿ, ಉಸಿರಾಟದ ತೊಂದರೆಯಿಂದಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಎರಡು ತಿಂಗಳಿಂದ ಕೋವಿಡ್‌ನಿಂದಾಗಿ ಸಾವು ಸಂಭವಿಸಿರಲಿಲ್ಲ. ಫೆ. 2ರಂದು ಕೋವಿಡ್ ರೋಗಿಯೊಬ್ಬರು ಮೃತಪಟ್ಟಿದ್ದರು.
ಶನಿವಾರ ಹೊಸದಾಗಿ 28 ಪ್ರಕರಣ ದೃಢಪಟ್ಟಿವೆ. 14 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರ ಸಂಖ್ಯೆ 6965. ಒಟ್ಟು ಸೋಂಕಿತರ ಸಂಖ್ಯೆ 7,315.
ಪ್ರಸ್ತುತ 217 ಸಕ್ರಿಯ ಪ್ರಕರಣಗಳಿವೆ. 166 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. 32 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 3 ಮಂದಿ ವೆಂಟಿಲೇಟರ್ ಚಿಕಿತ್ಸೆ ಪಡೆಯುತ್ತಿದ್ದಾರೆ. 24 ಮಂದಿ ಆಕ್ಸಿಜನ್ ಅವಲಂಬಿಸಿದ್ದಾರೆ.
ಕೋವಿಡ್ ಅಂಕಿ ಅಂಶ
ಇಂದಿನ ಪ್ರಕರಣ: 28
ಇಂದು ಗುಣಮುಖ: 14
ಒಟ್ಟು ಗುಣಮುಖ: 6965
ಇಂದಿನ ಸಾವು: 01
ಒಟ್ಟು ಸಾವು: 113
ಸಕ್ರಿಯ ಪ್ರಕರಣಗಳು: 217
ಒಟ್ಟು ಸೋಂಕಿತರು: 7315