Advertisement

ಚಾಮರಾಜನಗರ: ಸೋಮವಾರ 65 ಕೋವಿಡ್ ಪ್ರಕರಣ ದೃಢ: 34 ಮಂದಿ ಗುಣಮುಖ

06:09 PM Oct 12, 2020 | mahesh |

ಚಾಮರಾಜನಗರ: ಜಿಲ್ಲೆಯಲ್ಲಿ ಸೋಮವಾರ 65 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. 34 ಮಂದಿ ಗುಣಮುಖರಾಗಿದ್ದಾರೆ. ಓರ್ವರು ಮೃತಪಟ್ಟಿದ್ದಾರೆ.

Advertisement

ಮೈಸೂರು ನಗರದ ನಿವಾಸಿ 57 ವರ್ಷದ ವ್ಯಕ್ತಿ ಅ.11ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಅಂದೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ 4991 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 4144 ಮಂದಿ ಗುಣಮುಖರಾಗಿದ್ದಾರೆ. 742 ಸಕ್ರಿಯ ಪ್ರಕರಣಗಳಿವೆ. ಇವರಲ್ಲಿ 36 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 221 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಕೋವಿಡ್ ಮತ್ತು ಕೋವಿಡೇತರ ಕಾರಣದಿಂದ ಒಟ್ಟು 105 ಮಂದಿ ಮೃತಪಟ್ಟಿದ್ದಾರೆ. ಸೋಮವಾರ 323 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಇಂದಿನ ಪ್ರಕರಣಗಳು: 65
ಇಂದು ಗುಣಮುಖ: 34
ಒಟ್ಟು ಗುಣಮುಖ: 4144
ಇಂದಿನ ಸಾವು: 01
ಒಟ್ಟು ಸಾವು: 105
ಸಕ್ರಿಯ ಪ್ರಕರಣಗಳು: 742
ಒಟ್ಟು ಸೋಂಕಿತರು: 4991

Advertisement

Udayavani is now on Telegram. Click here to join our channel and stay updated with the latest news.

Next