Advertisement

ಬೀದರ: ಕೋವಿಡ್ ಗೆ ಮತ್ತಿಬ್ಬರ ಬಲಿ; ಮೃತರ ಸಂಖ್ಯೆ 158ಕ್ಕೆ ಏರಿಕೆ

10:24 PM Oct 03, 2020 | mahesh |

ಬೀದರ: ಜಿಲ್ಲೆಯಲ್ಲಿ ಶನಿವಾರ ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪಿದ್ದು, 14 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

ಬೀದರ ನಗರದ ಹಾರೂರಗೇರಿಯ 80 ವರ್ಷದ ಮಹಿಳೆ ಮತ್ತು ಔರಾದ ತಾಲೂಕಿನ ಕಂದಗೂಳ ಗ್ರಾಮದ 75 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 158ಕ್ಕೆ ಏರಿಕೆ ಕಂಡಿದೆ.

ಜಿಲ್ಲೆಯಲ್ಲಿಗ ಸೋಂಕಿತರ ಸಂಖ್ಯೆ 6438ಕ್ಕೇರಿದೆ. ಶನಿವಾರ 95 ಜನ ಸೇರಿ ಈವರೆಗೆ 5838 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 438 ಸಕ್ರೀಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next