Advertisement

ಹೆಚ್ಚುತ್ತಲೇ ಇದೆ ಕೋವಿಡ್ : ಇಂದು 32,793 ಕೇಸ್, 07 ಮಂದಿ ಬಲಿ

06:47 PM Jan 15, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ದಾಖಲೆಯ ಅತಿ ಹೆಚ್ಚು 2.21 ಲಕ್ಷ ಪರೀಕ್ಷೆಗಳನ್ನೂ ನಡೆಸಿದ ಬೆನ್ನಲ್ಲೇ ಶನಿವಾರ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಇಂದು ರಾಜ್ಯದಲ್ಲಿ ಒಟ್ಟು 32,793 ಹೊಸ ಪ್ರಕರಣಗಳು ದೃಢ ಪಟ್ಟಿವೆ. ಬೆಂಗಳೂರು ನಗರದಲ್ಲಿ 22,284 ಪ್ರಕರಣಗಳು ಪತ್ತೆಯಾಗಿವೆ.

Advertisement

ರಾಜ್ಯದಲ್ಲಿ ಪಾಸಿಟಿವಿಟಿ ದರ 15% ಕ್ಕೆ ಏರಿಕೆಯಾಗಿದ್ದು, ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.

ಇಂದು 4,273 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.ರಾಜ್ಯದಲ್ಲಿ 1,69,850 ಸಕ್ರಿಯ ಪ್ರಕರಣಗಳಿದ್ದು, ರಾಜಧಾನಿಯಲ್ಲಿ1ಲಕ್ಷದ 29ಸಾವಿರ ಪ್ರಕರಣಗಳಿವೆ.

ಇಂದು ರಾಜ್ಯದಲ್ಲಿ ಒಟ್ಟು 07 ಮಂದಿ ಸೋಂಕಿತರು ಸಾವನ್ನಪ್ಪಿದ್ದು,05 ಮಂದಿ ಬೆಂಗಳೂರಿನವರಾಗಿದ್ದಾರೆ.

ಇಂದು2,18,479 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ನಾಳೆ ಹೆಚ್ಚಿನ ಪ್ರಕರಣಗಳ ಆತಂಕ ಎದುರಾಗಿದೆ.

Advertisement

ಶುಕ್ರವಾರ 28,723 ಹೊಸ ಪ್ರಕರಣಗಳು ದೃಢ ಪಟ್ಟಿದ್ದವು, ಪಾಸಿಟಿವಿಟಿ ದರ 12.98% ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next