Advertisement
ಕಳೆದ ಒಂದು ವಾರದಿಂದ ಏರುಗತಿಯಲ್ಲಿ ಸೋಂಕು ಹೆಚ್ಚಾಗುತ್ತಿದೆ. ಜು.12ರವರೆಗೂ ಯಾವುದೇ ಸೋಂಕುಕಂಡು ಬಂದಿರಲಿಲ್ಲ. ನಂತರ ನಿಧಾನವಾಗಿಯೇಒಂದೊಂದು ಪ್ರಕರಣ ದಾಖಲಾಗುತ್ತಿದೆ.
Related Articles
Advertisement
705 ಮಂದಿ ಸಾವು: ಮೊದಲ ಹಾಗೂ ಎರಡನೇ ಅಲೆಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೂ ಜಿಲ್ಲೆಯಲ್ಲಿ 705 ಮಂದಿ ಮೃತಪಟ್ಟಿದ್ದಾರೆ.ಮೊದಲ ಅಲೆಯಲ್ಲಿ 150ಮಂದಿ ಸಾವನ್ನಪ್ಪಿದ್ದರೆ, 2ನೇಅಲೆಯಲ್ಲಿ ಅತಿ ಹೆಚ್ಚು ಸೋಂಕಿಗೆ ಬಲಿಯಾದರು. ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಸಾವು ಸಂಭವಿಸಿಲ್ಲದಿರುವುದು ಸಮಾಧಾನಕರವಾಗಿದೆ.
ಶೇ.100 ಕೊರೊನಾ ಲಸಿಕೆ: ಜಿಲ್ಲಾದ್ಯಂತ ಮೊದಲ ಹಾಗೂ ಎರಡನೇ ಕೊರೊನಾ ಲಸಿಕೆ ಶೇ.100ರಷ್ಟು ನೀಡಲಾಗಿದೆ. ಪ್ರಸ್ತುತ 18 ವರ್ಷ ಮೇಲ್ಪಟ್ಟ ಎಲ್ಲರಿಗೂಬೂಸ್ಟರ್ ಡೋಸ್ ನೀಡಲಾಗಿದೆ. ಇದು ಜಿಲ್ಲಾದ್ಯಂತ ಶೇ.6ರಷ್ಟಿದೆ. ಹಿರಿಯ ನಾಗರಿಕರಿಗೆ ಬೂಸ್ಟರ್ ಡೋಸ್ ಶೇ.60ರಷ್ಟಾಗಿದೆ. ಪ್ರಸ್ತುತ 75 ದಿನ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮ ನಡೆಯುತ್ತಿದೆ.
80 ಸಕ್ರಿಯ ಪ್ರಕರಣ :
ಈವರೆಗೆ 80 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಮಂಡ್ಯ 19, ಮದ್ದೂರು, ಮಳವಳ್ಳಿ ತಲಾ 15, ಪಾಂಡವಪುರ 9, ಶ್ರೀರಂಗಪಟ್ಟಣ 17, ಕೆ.ಆರ್.ಪೇಟೆ 2, ನಾಗಮಂಗಲ 3 ಪ್ರಕರಣಗಳಿವೆ. ಇದರಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆಯೇ ಮೊದಲ ಹಾಗೂ ಎರಡನೇ ಅಲೆಯಲ್ಲಿ ಒಟ್ಟು 16,76,493ಮಂದಿಗೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ12,98,177 ಮಂದಿಗೆ ಆರ್‌ಟಿಪಿಸಿಆರ್ ಹಾಗೂ 3,78,316 ಮಂದಿಗೆ ರ್ಯಾಪಿಡ್ ಪರೀಕ್ಷೆ ನಡೆಸಲಾಗಿದೆ.
ಚಳಿ ಜ್ವರಕ್ಕೆ ನಲುಗಿದ ಸಾರ್ವಜನಿಕರು:
ಕಳೆದ ಒಂದು ತಿಂಗಳಿನಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿರುವ ಹಿನ್ನೆಲೆ ಚಳಿ, ಜ್ವರ, ಕೆಮ್ಮು, ನೆಗಡಿ ಹಾಗೂ ಮೈಕೈ ನೋವು ಹೆಚ್ಚಾಗಿದೆ. ನಗರದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಕ್ಲಿನಿಕ್‌ಗಳು ರೋಗಿಗಳಿಂದ ತುಂಬಿವೆ. ಪ್ರತಿದಿನ ಮೋಡ ಕವಿದ ವಾತಾವರಣವಿದ್ದು, ಸಂಜೆಯಾಗುತ್ತಲೇ ಸೋನೆ ಮಳೆಯಾಗುತ್ತಿದೆ. ಅಲ್ಲದೆ, ಒಂದು ದಿನ ಬಿಡುವು ನೀಡಿದರೆ ಮತ್ತೆ ಒಂದು ವಾರ ಸೂರ್ಯನ ಬೆಳಕೆ ಇಲ್ಲದಂತಾಗಿದೆ. ಇದರಿಂದ ಶೀತಗಾಳಿ ಬೀಸುತ್ತಿದೆ. ಇದು ಜ್ವರ, ನೆಗಡಿ, ಕೆಮ್ಮು ಬರಲು ಕಾರಣವಾಗುತ್ತಿದೆ.
ಡೆಂಗ್ಯೂ, ಚಿಕೂನ್‌ಗುನ್ಯಾಕ್ಕೆ ದಾರಿ :
ಶೀತಗಾಳಿ ವಾತಾವರಣದಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿದೆ. ಇದು ಡೆಂಗ್ಯೂ, ಚಿಕೂನ್‌ಗುನ್ಯಾ ಬರಲುಕಾರಣವಾಗಬಹುದು. ಆದ್ದರಿಂದ ಸಾರ್ವಜನಿಕರು ಜ್ವರ, ಶೀತ, ಕೆಮ್ಮು, ನೆಗಡಿ ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಮೆಡಿಕಲ್ ಸ್ಟೋರ್‌ನಲ್ಲಿ ಮಾತ್ರೆ ಪಡೆದು ಸುಮ್ಮನಾಗಬಾರದು. ಅಲ್ಲದೆ, ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಬೂಸ್ಟರ್ ಡೋಸ್ ಪಡೆಯಬೇಕು. 75 ದಿನಗಳಅಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಟಿ.ಎನ್.ಧನಂಜಯ ತಿಳಿಸಿದರು.