Advertisement

ಮತ್ತೆ 86 ಜನರಲ್ಲಿ ಸೋಂಕು ದೃಢ

03:11 PM Aug 04, 2020 | Suhan S |

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು ಜಿಲ್ಲೆಯಲ್ಲಿ ಇದೀಗ ಸಾವುಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಜು.31ರಂದು ಸೋಂಕು ದೃಢವಾಗಿದ್ದ 70 ವರ್ಷದ ಪುರುಷ ಪಿ-136698 ಆ.1ರಂದು ಸಾವನ್ನಪ್ಪಿದ್ದು, ಸೋಮವಾರದ ರಾಜ್ಯ ಆರೋಗ್ಯ ಬುಲೆಟಿನ್‌ನ ಮರಣ ವರದಿಯಿಂದ ತಿಳಿದು ಬಂದಿದ್ದು, ಮರಣ ಹೊಂದಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

Advertisement

ಜಿಲ್ಲೆಯಲ್ಲಿ ಸೋಂಕಿನ ಸಂಪರ್ಕವೇ ಪತ್ತೆಯಾಗದ ಜನರಲ್ಲಿ ವೈರಸ್‌ ವ್ಯಾಪಕವಾಗಿ ಹರಡುತ್ತಿದ್ದು, 7 ಐಎಲ್‌ಐ ಗುಣಲಕ್ಷಣ ಇರುವವರು ಸೇರಿ ಸೋಮವಾರ ಮತ್ತೆ 86 ಜನರಲ್ಲಿ ಹೊಕ್ಕಿರುವ ವೈರಸ್‌ ತಲ್ಲಣ ಸೃಷ್ಟಿಸಿದೆ. ಇಂದಿಗೆ 2511 ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕಿತರಲ್ಲಿ 41 ಮಹಿಳೆಯರು ಮತ್ತು 45 ಪುರುಷರಿದ್ದಾರೆ.

ಯಾದಗಿರಿ ನಗರ ಮತ್ತು ಗ್ರಾಮೀಣದ 43, ಶಹಾಪುರ ವ್ಯಾಪ್ತಿಯ 33ಹಾಗೂ 9 ಜನ ಸುರಪುರ ತಾಲೂಕಿನ ವಿವಿಧ ಗ್ರಾಮಗಳ ಜನರಿಗೆ ಸೋಂಕು ಹರಡಿದ್ದು 1 ಅಂತರ ಜಿಲ್ಲೆಯ ನಂಟು ಹೊಂದಿರುವವರಲ್ಲಿ ಸೋಂಕು ಪತ್ತೆಯಾಗಿದೆ.

415 ಹೊಸ ಮಾದರಿ ಸಂಗ್ರಹ: ಮಹಾಮಾರಿ ಕೋವಿಡ್ ವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಸೋಮವಾರ 415 ಜನರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದೆ. 275 ಜನರ ವರದಿ ನೆಗೆಟಿವ್‌ ಬಂದಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 4453 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 6562 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಜಿಲ್ಲೆಯಲ್ಲಿ 223 ಕಂಟೇನ್ಮೆಂಟ್‌ ಝೋನ್‌ಗಳನ್ನು ರಚಿಸಲಾಗಿದೆ. ಹೊಸ ಜಿಲ್ಲಾಸ್ಪತ್ರೆಯಲ್ಲಿ 177 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ 85, ಸುರಪುರ 113 ಜನ ಹಾಗೂ ಬಂದಳ್ಳಿ ಏಕಲವ್ಯ ಕೋವಿಡ್ ಕೇರ್‌ ಸೆಂಟರ್‌ನಲ್ಲಿ 96 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಎಸ್‌.ಸೋಮನಾಳ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next