Advertisement

ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಕೊರೊನಾ ಸ್ಫೋಟ!

01:41 PM Jan 15, 2022 | Team Udayavani |

ಚಿಕ್ಕನಾಯಕನಹಳ್ಳಿ: ಕೋವಿಡ್‌ ಮೂರನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಶುಕ್ರವಾರ 36 ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿದೆ. 1,046 ಜನಕ್ಕೆ ಕೋವಿಡ್‌ ಪರೀಕ್ಷೆನಡೆಸಲಾಗಿತ್ತು. ಒಟ್ಟು ಇದುವರೆಗೂ 100 ಸಕ್ರಿಯ ಕೋವಿಡ್‌ ಪ್ರಕರಣ ದಾಖಲಾಗಿದೆ.

Advertisement

ತಾಲೂಕಿನಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಬೂಸ್ಟರ್‌ಡೋಸ್‌ ಲಸಿಕೆಗೆ ಅಭಿಯಾನಕ್ಕೂ ಚಾಲನೆ ನೀಡಲಾಗಿದೆ. ಆದರೆ, ತಾಲೂಕಿನಲ್ಲಿ ಸರ್ಕಾರದಕೋವಿಡ್‌ ನಿಯಮ ಪಾಲನೆಯಾಗುತ್ತಿಲ್ಲ. ಸಾರ್ವಜನಿಕರು ಮಾಸ್ಕ್ ಮರೆತಿದ್ದು ಒಂದುಕಡೆಯಾದರೆ, ಸಾರ್ವಜನಿಕರಿಗೆ ಬುದ್ಧಿ ಹೇಳುವ ಅಧಿಕಾರಿಗಳು ಸುಮ್ಮನಾಗಿ ಬಿಟ್ಟಿದ್ದಾರೆ.

ಒಂದು ವಾರದಲ್ಲಿ 100 ಕೋವಿಡ್‌ ಪ್ರಕರಣ ದಾಖಲಾಗಿದ್ದು, ಇದರಲ್ಲಿ 83 ಸೋಂಕಿತರು ತಮ್ಮ ಮನೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆ ಮಂದಿಗೆಲ್ಲ ಸೋಂಕು ಹರಡುವಸಾಧ್ಯತೆ ಇದ್ದು, ತಾಲೂಕು ಆಡಳಿತ ಇದನ್ನು ಗಂಭಿರವಾಗಿ ಪರಿಗಣಿಸಬೇಕಿದೆ. ಸೋಂಕುಹೆಚ್ಚಾಗುವ ಮೊದಲೇ ಅಗತ್ಯ ಕ್ರಮ ಕೈಗೊಳ್ಳುವುದುಉತ್ತಮ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಸೋಂಕಿತರಿಗೆ ಊಟ ನೀಡಿ: ತಾಲೂಕು ಆಸ್ಪತ್ರೆಯಲ್ಲಿ ಕೆಲ ಕೋವಿಡ್‌ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸೋಂಕಿತರಿಗೆ ಊಟ, ಸರಿಯಾಗಿನೀರಿನ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಂದಅಥವಾ ಹೋಟಲ್‌ಗ‌ಳಿಂದ ತಿಂಡಿ ಊಟ ನೀಡಬೇಕಾಗಿದೆ. ಇದರಿಂದ ಮನೆಯವರಿಗೂಸೋಂಕು ತಗುಲುವ ಅತಂಕವಿದ್ದು, ತಾಲೂಕು ಆಡಳಿತ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆದುಕೊಳ್ಳುತ್ತಿರುವ ಸೋಂಕಿತರಿಗೆ ಅಗತ್ಯಸೌಕರ್ಯ ನೀಡಬೇಕು ಎಂದು ಸೋಂಕಿತರ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿ, ಶಿಕ್ಷಕನಿಗೆ ಸೋಂಕು: ತಾಲೂಕಿನ ಬೆಳ್ಳಾರ ಶಾಲೆಯ ವಿದ್ಯಾರ್ಥಿಗೆ ಕೋವಿಡ್‌ಸೋಂಕು ದೃಢಪಟ್ಟಿದ್ದು, ವಿದ್ಯಾರ್ಥಿ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆ ಶಾಲೆಯ ಎಲ್ಲ ಮಕ್ಕಳಿಗೂ ಕೋವಿಡ್‌ ಪರೀಕ್ಷೆ ನಡೆಸಿದ್ದು, ನೆಗೆಟಿವ್‌ ಬಂದಿದೆ. ತಾಲೂಕಿನಲ್ಲಿ ಒಬ್ಬ ಶಿಕ್ಷಕರಿಗೂ ಕೋವಿಡ್‌ ಪಾಸಿಟಿವ್‌ ಬಂದಿದೆ. ಶಾಲೆಗಳಲ್ಲಿ ಕೋವಿಡ್‌ ನಿಯಮ ಕಡ್ಡಾಯವಾಗಿ ಪಾಲನೆ ಯಾಗುತ್ತಿರುವ ಬಗ್ಗೆ ಪೋಷಕರಲ್ಲಿ ಅನುಮಾನ ವಿದ್ದು, ಸೋಂಕು ಹರಡುವ ಮೊದಲೇ ಅಗತ್ಯ ಕ್ರಮವನ್ನು ಬಿಇಒ ಕೈಗೊಳ್ಳಬೇಕಿದೆ.

Advertisement

ಖಾಸಗಿ ಕ್ಲಿನಿಕ್‌ಗಳಿಗೆ ನೋಟಿಸ್‌: ಸದ್ದಿಲ್ಲದೆ ಸೋಂಕು ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯಿಂದ ಬ್ಯಾಂಕ್‌, ಮೆಡಿಕಲ್‌ ಶಾಪ್‌, ಖಾಸಗಿ ಕ್ಲಿನಿಕ್‌ಗಳಿಗೆ ಕೋವಿಡ್‌ ನಿಯಮ ಪಾಲನೆ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಆದರೆ, ಸರ್ಕಾರಿ ಕಚೇರಿಗಳಲ್ಲಿ, ಅಂಗಡಿಗಳ ಮುಂದೆ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರವಿಲ್ಲವಾಗಿದೆ. ಪುರಸಭೆ ಹಾಗೂ ಪೊಲೀಸ್‌ ಇಲಾಖೆ ಇದರ ಬಗ್ಗೆ ಕ್ರಮಕೈಗೊಳ್ಳಬೇಕಾಗಿದ್ದು, ಸೋಂಕು ಕಡಿಮೆ ಇದ್ದಾಗಲೇ ತಾಲೂಕು ಆಡಳಿತ ಗಮನಹರಿಸದಿದ್ದರೆ ಮುಂದಿಗ ದಿನಗಳಲ್ಲಿ ಸೋಂಕು ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೊರೊನಾ ಸೋಂಕಿತರಿಗೆ ಊಟದ ವ್ಯವಸ್ಥೆ ಮಾಡುವ ಬಗ್ಗೆಮೇಲಾಧಿಕಾರಿಗಳಿಂದ ಆದೇಶ ಬಂದಿಲ್ಲ.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಜೊತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. -ತೇಜಸ್ವಿನಿ, ತಹಶೀಲ್ದಾರ್‌

ತಾಲೂಕು ಆಸ್ಪತ್ರೆಯಲ್ಲಿ ಹಲವಾರು ಕೊರೊನಾ ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಸೋಂಕಿತರಿಗೆ ಯಾವುದೇ ತಿಂಡಿ , ಊಟ ನೀಡಲಾಗುತ್ತಿಲ್ಲ. ಮನೆ ಹಾಗೂ ಹೋಟಲ್‌ಗ‌ಳಿಂದತಿಂಡಿ ಊಟ ತೆಗೆದುಕೊಂಡು ಹೋಗಲುಕೊರೊನಾ ಭಯವಿದ್ದು, ಕೊರೊನಾಕಡಿಮೆ ಇದ್ದಾಗಲೇ ತಾಲೂಕು ಆಡಳಿತಮುಂಜಾಗೃತ ಕ್ರಮ ಕೈಗೊಳ್ಳಬೇಕು. -ಸಿ.ಡಿ.ಸುರೇಶ್‌, ಪುರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next