ಹೊಸದಿಲ್ಲಿ: ಜಗತ್ತಿನ ಎಲ್ಲ ದೇಶಗಳು ಕೊರೊನಾದಿಂದ ಯಾವಾಗ ಮುಕ್ತವಾ ಗುತ್ತೇ ವೆಂದು ಚಿಂತಿಸುತ್ತಿರುವಾಗ, ದಕ್ಷಿಣ ಆಫ್ರಿಕಾ ಹಾಗೂ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಕೊರೊನಾದ ಹೊಸ ಸ್ವರೂಪದಲ್ಲಿ ಕಾಣಿಸಿಕೊಂಡಿದೆ.
ದಕ್ಷಿಣ ಆಫ್ರಿಕಾದ ನ್ಯಾಶನ್ ಇನ್‌ಸ್ಟಿ ಟ್ಯೂಟ್ ಫಾರ್ ಕಮ್ಯೂನಿಕೆಬಲ್ ಡಿಸೀಸಸ್ (ಎನ್‌ಐಸಿಡಿ) ಹಾಗೂ ಖ್ವಾಝುಲು- ನೇಟಲ್ ರಿಸರ್ಚ್ ಇನೋವೇಶನ್ ಆ್ಯಂಡ್ ಸೀಕ್ವೆ ನ್ಸಿಂಗ್ ಪ್ಲಾಟ್‌ಫಾರಂ (ಕೆಆರ್‌ಐಎಸ್‌ಪಿ) ಸಂಸ್ಥೆಗಳ ವಿಜ್ಞಾನಿಗಳು ಈ ವೈರಾಣುವನ್ನು ಪತ್ತೆ ಮಾಡಿದ್ದಾರೆ. ಇದಕ್ಕೆ ಸಿ.1.2 ಎಂಬ ಹೆಸರನ್ನಿಡಲಾಗಿದೆ. ಈ ಮೊದಲು ದಕ್ಷಿಣ ಆಪ್ರಿಕಾದಲ್ಲಿ ಸಿ.1 ಎಂಬ ಕೊರೊನಾ ರೂಪಾಂತರಿ ಪತ್ತೆಯಾಗಿತ್ತು.
ವಿಶೇಷಗಳೇನು?: ಈ ಹೊಸ ತಳಿಯ ವೈರಾಣು, ಜಗತ್ತಿನಲ್ಲಿ ಈಗ ಲಭ್ಯವಿರುವ ಯಾವುದೇ ಲಸಿಕೆಗೂ ಜಗ್ಗುವುದಿಲ್ಲ ಹಾಗೂ ಈ ಹಿಂದಿನ ಕೊರೊನಾದ ಎಲ್ಲ ರೂಪಾಂ ತರಿಗಳಿಂತ ಹೆಚ್ಚು ವೇಗವಾಗಿ ಹರಡ ಬಲ್ಲದು. ಈ ವೈರಾಣು, ಮುಂದೆ ಅನೇಕ ಮಾದರಿಯಾಗಿ ರೂಪಾಂತರಗೊಳ್ಳುವ ಸ್ವಭಾವ ಹೊಂದಿದೆ.
42,909 ಹೊಸ ಪ್ರಕರಣ: ರವಿವಾರ ದಿಂದ ಸೋಮವಾರದ ಅವಧಿಯಲ್ಲಿ ದೇಶ ದಲ್ಲಿ 42,909 ಹೊಸ ಸೋಂಕು ಪ್ರಕರಣ ಮತ್ತು 380 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಸಂಖ್ಯೆ 3,76,324ಕ್ಕೆ ಏರಿಕೆ ಯಾಗಿದೆ. ಚೇತರಿಕೆ ಪ್ರಮಾಣ ಶೇ.97.51 ಆಗಿದೆ.
64 ಕೋಟಿ ಮಂದಿಗೆ ಲಸಿಕೆ: ಕೇಂದ್ರ: ದೇಶಾದ್ಯಂತ ನಡೆಯುತ್ತಿರುವ ಲಸಿಕೆ ಅಭಿಯಾನದಡಿ, ಸೋಮವಾರದ ಹೊತ್ತಿಗೆ 64 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸೋಮವಾರ ಸಂಜೆ 7 ಗಂಟೆ ಸುಮಾರಿಗೆ 63,93,05,611 ಜನರು ಲಸಿಕೆ ಪಡೆದಿದ್ದಾರೆ.
ಮತ್ತಷ್ಟು ಇಳಿಕೆ :
ಕೇರಳದಲ್ಲಿ ಸೋಮವಾರ 19,622 ಹೊಸ ಸೋಂಕು ಪ್ರಕರಣ ದೃಢಪಟ್ಟಿದೆ. 132 ಮಂದಿ ಅಸುನೀಗಿದ್ದಾರೆ. ರಾಜ್ಯ ದಲ್ಲಿ ಸೋಂಕು ಪಾಸಿಟಿವಿಟಿ ಪ್ರಮಾಣ ಶೇ.16.74 ಆಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ರವಿವಾರ 29,836 ಸೋಂಕು ಪ್ರಕರಣ ದೃಢಪಟ್ಟಿತ್ತು. ತೃಶೂರ್, ಎರ್ನಾಕುಳಂ, ಕಲ್ಲಿಕೋಟೆಯಲ್ಲಿ ಸೋಂಕು ಸಂಖ್ಯೆ ಹೆಚ್ಚಾಗಿಯೇ ಇದೆ.