Advertisement
ಸಚಿವರಿಗೆ ಕಂಟಕ: ಮಹಿಳೆ ಆತ್ಮಹತ್ಯೆ ಪ್ರಕರಣ ವಿವಾದದ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದ ಸಚಿವ, ಶಿವಸೇನೆ ಮುಖಂಡ ಸಂಜಯ್ ರಾಥೋಡ್‌ಗೆ ಕಂಟಕ ಎದುರಾಗಿದೆ. ಕರಾಂಜದ ಪೊಹರಾದೇವಿ ದೇಗುಲಕ್ಕೆ ಸಚಿವ ಭೇಟಿ ನೀಡಿದ್ದ ವೇಳೆ, ಒಬ್ಬ ಅರ್ಚಕ ಸೇರಿದಂತೆ 18 ಭಕ್ತರಿಗೆ ಪಾಸಿಟಿವ್ ದೃಢಪಟ್ಟಿರುವುದು ತಿಳಿದುಬಂದಿದೆ. 8 ಜಿಲ್ಲೆಗಳಲ್ಲಿನ ಲಾಕ್‌ಡೌನ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲು ಸರಕಾರ ಹಿಂದೇಟು ಹಾಕುತ್ತಿದೆ. ಬದಲಾಗಿ, ರೈಲು- ಬಸ್‌ಗಳ ಸಂಖ್ಯೆ ಕಡಿತಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ- ತರಗತಿಗಳನ್ನು ಆನ್‌ಲೈನ್ ಮೂಲಕ ಮುಂದುವರಿಸಲು ನಿರ್ಧರಿಸಿದೆ.
Related Articles
Advertisement
ಕೋವಿಡ್ ಸೋಂಕು ದೃಢಪಡಿಸಲು ವಿಜ್ಞಾನಿಗಳು ಸ್ಟಾಂಪ್ ಗಾತ್ರದ ಚಿಪ್ ಸಿದ್ಧಗೊಳಿಸಿದ್ದು, ಸ್ಮಾರ್ಟ್‌ಫೋನ್ ಮೂಲಕ ಕೇವಲ 55 ನಿಮಿಷಗಳಲ್ಲಿ ಇದು ಫಲಿತಾಂಶ ಪ್ರಕಟಿಸುತ್ತದೆ. ಚಿಪ್‌ನಲ್ಲಿನ ಎಲೆಕ್ಟ್ರೊಕೆಮಿಕಲ್ ಸೆನ್ಸಾರ್ ಬಯೋಮಾರ್ಕರ್‌ಗೆ ಅಂಟಿಕೊಂಡ ವ್ಯಕ್ತಿಯ ರಕ್ತದ ಕಣವನ್ನು ಸ್ಕ್ಯಾನ್ ಮಾಡುವ ಮೂಲಕ ಕೊರೊನಾ ವೈರಾಣುವನ್ನು ದೃಢಪಡಿಸುತ್ತವೆ ಅಮೆರಿಕದ ರೈಸ್ ವಿವಿಯ ವಿಜ್ಞಾನಿಗಳ ಸಮರ್ಥನೆ.
ಮತ್ತೆ ಎದ್ದ ಕೋವಿಡ್ ಭೀತಿ :
ಕೇರಳ: ಗುರುವಾರದ 24 ಗಂಟೆಗಳಲ್ಲಿ 3,677 ಪ್ರಕರಣಗಳು ದೃಢಪಟ್ಟಿವೆ.
ಒಡಿಶ್ಸಾ: ಕೇರಳ, ಕರ್ನಾಟಕ ಸೇರಿದಂತೆ 12 ರಾಜ್ಯಗಳ ಪ್ರಯಾಣಿಕರಿಗೆ ಸ್ಕ್ರೀನಿಂಗ್ ಕಡ್ಡಾಯ: ಒಡಿಸ್ಸಾ
ರಾಜಸ್ಥಾನ: ಮಹಾರಾಷ್ಟ್ರ, ಕೇರಳದಿಂದ ಆಗಮಿಸುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ತಮಿಳುನಾಡು: ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಒಂದು ವಾರ ಕ್ವಾರಂಟೈನ್
ಮೋದಿ ಕೊಂಡಾಡಿದ ಡಬ್ಲ್ಯುಎಚ್‌ಒ :
“ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವದ 60ಕ್ಕೂ ಅಧಿಕ ರಾಷ್ಟ್ರಗಳಿಗೆ ಲಸಿಕೆ ಪೂರೈಸಿದೆ. ಜಗತ್ತಿನ ಇತರ ರಾಷ್ಟ್ರಗಳೂ ಭಾರತವನ್ನು ಅನುಸರಿಸಬೇಕು’ ಎಂದು ಡಬ್ಲ್ಯುಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರಾಸ್ ಅಧಾನಾಮ್ ಘೆಬ್ರೆಯೆಸುಸ್ ಟ್ವೀಟ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.