Advertisement
ಉಡುಪಿಯಲ್ಲಿ 262, ಕುಂದಾಪುರದಲ್ಲಿ 29, ಕಾರ್ಕಳದಲ್ಲಿ 49 ಮಂದಿಗೆ ಸೋಂಕು ಕಂಡುಬಂದಿದೆ. ಉಡುಪಿಯಲ್ಲಿ ಶೇ. 4.88, ಕುಂದಾಪುರದಲ್ಲಿ ಶೇ.1.90, ಕಾರ್ಕಳದಲ್ಲಿ ಶೇ.2.56 ಪಾಸಿಟಿವಿಟಿ ದರ ಕಂಡು ಬಂದಿದೆ. ಉಡುಪಿಯಲ್ಲಿ 5,373, ಕುಂದಾಪುರದಲ್ಲಿ 1,530, ಕಾರ್ಕಳದಲ್ಲಿ 1,916 ಸಹಿತ ಒಟ್ಟು 8,819 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ಲಕ್ಷಣ ಕಂಡುಬಂದ 279 ಮಂದಿಯನ್ನು ಹೋಂ ಐಸೊಲೇಶನ್‌ಗೆ, 52 ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ, 9 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. 77 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 979 ಪ್ರಕರಣಗಳು ಸಕ್ರಿಯವಾಗಿವೆ.
ಕೋವಿಡ್ ಆರೈಕೆಗೆ ಮುನ್ನೆಚ್ಚರಿಕೆ ಕ್ರಮವಾಗಿ 30 ಸಾಮಾನ್ಯ ಬೆಡ್‌ಗಳು, 4 ಹೈ ಡಿಪೆಂಡೆನ್ಸಿ ಯುನಿಟ್, ವೆಂಟಿಲೇಟರ್ ಇಲ್ಲದ 6 ಐಸಿಯು ಬೆಡ್‌ಗಳು, ವೆಂಟಿಲೇಟರ್ ಇರುವ ಒಂದು ಬೆಡ್ ಸಹಿತ ಒಟ್ಟು 41 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಇದನ್ನೂ ಓದಿ : ನಾಟಿ ಖರ್ಚು ಕಡಿವಾಣಕ್ಕೆ ಡ್ರಮ್ ಸೀಡರ್ : ಖರ್ಚು ಕಡಿಮೆ ಮಾಡಲು ಕೃಷಿ ವಿವಿ ಸಂಶೋಧನೆ