Advertisement

ಕೋವಿಡ್ ಕಳವಳ-ಆಗಸ್ಟ್ 05: 5619 ಹೊಸ ಪ್ರಕರಣಗಳು ; 5407 ಡಿಸ್ಚಾರ್ಜ್ ; 100 ಸಾವು

08:32 PM Aug 05, 2020 | sudhir |

ಬೆಂಗಳೂರು: ಮಂಗಳವಾರ ಸಾಯಂಕಾಲದಿಂದ ಬುಧವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5619 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.

Advertisement

ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5407 ಸೋಂಕಿತರು ಗುಣಮುಖರಾಗಿರುವುದು ಆಶಾದಾಯಕ ವಿಚಾರವಾಗಿದೆ. ಮತ್ತು ಈ ಅವಧಿಯಲ್ಲಿ 100 ಸೋಂಕಿತರು ಮೃತಪಟ್ಟಿದ್ದಾರೆ.

ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ 1,51,449 ಆಗಿದೆ. 74,679 ಸೊಂಕಿತರು ಚೇತರಿಸಿಕೊಂಡಿದ್ದಾರೆ ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 2804 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 08 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 633 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 73958 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.

ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ1848 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಬಳ್ಳಾರಿ (631), ಬೆಳಗಾವಿ (293), ಮೈಸೂರು (261), ದಾವಣಗೆರೆ (224),ಧಾರವಾಡ (199 ), ಕಲಬುರಗಿ (197),ಉಡುಪಿ (173), ಕೊಪ್ಪಳ (154 ),ದಕ್ಷಿಣ ಕನ್ನಡ (149 ),ಬಾಗಲಕೋಟೆ (149),ಹಾಸನ (137),ಚಿಕ್ಕಬಳ್ಳಾಪುರ (129 ), ಉತ್ತರ ಕನ್ನಡ (125 ), ಮಂಡ್ಯ (123 ), ಮತ್ತು ಬೆಂಗಳೂರು ಗ್ರಾಮಾಂತರ (110) ಜಿಲ್ಲೆಗಳಿವೆ.

ಇನ್ನುಳಿದಂತೆ, ರಾಯಚೂರು (91), ಗದಗ (78 ), ಯಾದಗಿರಿ (76 ),ಹಾವೇರಿ (71 ), ವಿಜಯಪುರ (66), ಬೀದರ್ (52), ಕೋಲಾರ (49), ಚಿಕ್ಕಮಗಳೂರು (48), ರಾಮನಗರ (45), ಚಾಮರಾಜನಗರ (38), ಶಿವಮೊಗ್ಗ (35), ತುಮಕೂರು (31 ) ಚಿತ್ರದುರ್ಗ (24) ಮತ್ತು ಕೊಡಗು (13 ) ಸೇರಿದಂತೆ ರಾಜ್ಯದ ಒಟ್ಟು 30 ಜಿಲ್ಲೆಗಳಲ್ಲಿ ಇಂದು ಮೂರಂಕಿ ಹಾಗೂ ಎರಡಂಕಿಯ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next