Advertisement

ರಾಜ್ಯದಲ್ಲಿಂದು ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ದುಪ್ಪಟ್ಟು

08:29 PM May 22, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿಂದು ಕೋವಿಡ್ ಸೋಂಕಿತರಿಗಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ದುಪ್ಪಟ್ಟು ಆಗಿದೆ.

Advertisement

ಇಂದು ಸಂಜೆ ( ಮೇ.22) ಕರ್ನಾಟಕ ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ :21.05.2021, 00:00 ರಿಂದ 23:59 ರವರೆಗೆ) ಹೊಸದಾಗಿ 31183 ಜನರು ಕೋವಿಡ್ ಸೋಂಕಿತರಾಗಿದ್ದಾರೆ. ಆದರೆ, ನೆಮ್ಮದಿದಾಯಕ ವಿಷಯ ಏನಂದರೆ ಇದೆ ಅವಧಿಯಲ್ಲಿ 61766 ಜನರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯ ಬಿಡುಗಡೆ ಹೊಂದಿದ್ದಾರೆ.

ಇನ್ನ ಕರ್ನಾಟಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 451 ಜನರು ಮಹಾಮಾರಿ ಸೋಂಕಿನಿಂದ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಇಂದಿನವರೆಗೆ ಕೋವಿಡ್-19 ಸೋಂಕಿನಿಂದ ಮೃತ ಪಟ್ಟವರ ಒಟ್ಟು ಸಂಖ್ಯೆ 24658 ಕ್ಕೆ ಏರಿಕೆಯಾಗಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ:

ಬಾಗಲಕೋಟೆ-285, ಬಳ್ಳಾರಿ-2157, ಬೆಳಗಾವಿ-1026, ಬೆಂಗಳೂರು ಗ್ರಾಮಾಂತರ-716,ಬೆಂಗಳೂರು ನಗರ-8214, ಬೀದರ್-58, ಚಾಮರಾಜನಗರ-412, ಚಿಕ್ಕಬಳ್ಳಾಪುರ-720, ಚಿಕ್ಕಮಗಳೂರು-652, ಚಿತ್ರದುರ್ಗ-722, ದಕ್ಷಿಣ ಕನ್ನಡ-913, ದಾವಣಗೆರೆ-478, ಧಾರವಾಡ-973,  ಗದಗ-443, ಹಾಸನ-1641,ಹಾವೇರಿ-342,ಕಲಬುರಗಿ-277,ಕೊಡಗು-345,ಕೋಲಾರ-708, ಕೊಪ್ಪಳ-377, ಮಂಡ್ಯ-798, ಮೈಸೂರು-2526,  ರಾಯಚೂರು-584, ರಾಮನಗರ-335, ಶಿವಮೊಗ್ಗ-971,  ತುಮಕೂರು-1545, ಉಡುಪಿ-849,ಉತ್ತರ ಕನ್ನಡ-1357,ವಿಜಯಪುರ-437, ಯಾದಗಿರಿ-322.

Advertisement
Advertisement

Udayavani is now on Telegram. Click here to join our channel and stay updated with the latest news.

Next