-ಇದು ಆರೋಗ್ಯ ವಲಯದ ತಜ್ಞರ ವಿಶ್ಲೇಷಣೆ. ಒಂದು ವೇಳೆ 2ನೇ ಅಲೆ ಎದುರಾದರೂ ಅದು ಮೊದಲಿನದರಷ್ಟು ತೀವ್ರವಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
Advertisement
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಂದು ಕೋಟಿ ದಾಟಿದ ಬೆನ್ನಲ್ಲೇ ಆರೋಗ್ಯ ತಜ್ಞರಿಂದ ಈ ಹೇಳಿಕೆ ಹೊರಬಿದ್ದಿದೆ. ಜತೆಗೆ ಇತ್ತೀಚೆಗೆ ದಿನನಿತ್ಯ ದೃಢವಾಗುತ್ತಿರುವ ಸೋಂಕು ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿರುವುದರಿಂದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 ಕೋಟಿ ದಾಟಿದೆ. ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗ್ಗೆಯವರೆಗೆ ದೇಶದಲ್ಲಿ 25,152 ಪ್ರಕರಣಗಳು ದೃಢ ಪಟ್ಟಿವೆ. 347 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಒಟ್ಟು ಸೋಂಕುಪೀಡಿತರ ಸಂಖ್ಯೆ 1,00,04,599ಕ್ಕೆ ಮುಟ್ಟಿತು. ಸಮಾಧಾನಕರ ವಿಷಯವೆಂದರೆ, ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 95.50 ಲಕ್ಷ ದಾಟಿದೆ.