Advertisement

ದ.ಕ: ಕೋವಿಡ್ ಗೆ ಐವರ ಸಾವು, 316 ಪಾಸಿಟಿವ್‌

06:44 AM Sep 16, 2020 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ ಒಂದು ವಾರದಿಂದ ಪ್ರತಿದಿನ 300ಕ್ಕೂ ಮೇಲ್ಪಟ್ಟು ಪ್ರಕರಣಗಳು ದಾಖಲಾಗುತ್ತಿವೆ. ಮಂಗಳವಾರ 316 ಮಂದಿಗೆ ಕೋವಿಡ್ ದೃಢಪಟ್ಟಿದೆ. 322 ಮಂದಿ ಗುಣಮುಖರಾಗಿದ್ದಾರೆ. ಐದು ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 452ಕ್ಕೇರಿದೆ.

Advertisement

108 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ, 166 ಮಂದಿಗೆ ಇನ್‌ಫ್ಲೂಯೆನಾl ಲೈಕ್‌ ಇಲ್‌ನೆಸ್‌, 11 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ತಗಲಿದೆ. 31 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ. ಪೀಡಿತರಲ್ಲಿ 148 ಮಂದಿ ಮಂಗಳೂರು, 44 ಮಂದಿ ಬಂಟ್ವಾಳ, 42 ಮಂದಿ ಪುತ್ತೂರು, 20 ಮಂದಿ ಸುಳ್ಯ, 37 ಮಂದಿ ಬೆಳ್ತಂಗಡಿ ಹಾಗೂ 25 ಮಂದಿ ಹೊರ ಜಿಲ್ಲೆಯವರು.

117 ಮಂದಿ ಪುರುಷರು, 69 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 62 ಮಂದಿ ಪುರುಷರು, 68 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಮೂವರು ಮಂಗಳೂರು, ಓರ್ವ ಬಂಟ್ವಾಳ, ಓರ್ವ ಪುತ್ತೂರಿನವರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next