Advertisement

ಸೋಂಕು ಬೆಳವಣಿಗೆ: ರಾಜ್ಯ ಮುಂಚೂಣಿ : ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕಕ್ಕೆ 6ನೇ ಸ್ಥಾನ

09:44 AM Jul 11, 2020 | sudhir |

ಬೆಂಗಳೂರು: ದೇಶದಲ್ಲಿ ಕೋವಿಡ್ ವೈರಸ್‌ ಸೋಂಕಿನ ಬೆಳವಣಿಗೆ ದರದಲ್ಲಿ ರಾಜ್ಯವು ಮುಂಚೂಣಿಯಲ್ಲಿದ್ದು, ಗುಣಮುಖ ಪ್ರಮಾಣದಲ್ಲಿ ಹಿಂದುಳಿದಿದೆ. ಪರಿಣಾಮ ರಾಜ್ಯದಲ್ಲಿ ಸೋಂಕಿನ ಸ್ಫೋಟ ನಿತ್ಯ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.

Advertisement

ಸದ್ಯ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ. ಕಳೆದ ಒಂದು ವಾರದ ಸೋಂಕಿನ ಬೆಳವಣಿಗೆ ದರ ನೋಡಿದಾಗ ಎರಡು ಲಕ್ಷಕ್ಕೂ ಅಧಿಕ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರದಲ್ಲಿ ಶೇ.3ರಷ್ಟಿದೆ. ಅನಂತರ ಸ್ಥಾನಗಳಲ್ಲಿರುವ ತಮಿಳುನಾಡಿನಲ್ಲಿ ಶೇ.4, ದಿಲ್ಲಿಯಲ್ಲಿ ಶೇ.4, ಗುಜರಾತ್‌ ಶೇ.2 ಹಾಗೂ ಉತ್ತರ ಪ್ರದೇಶ ಶೇ.4 ಇದೆ. ಆದರೆ, ಕರ್ನಾಟಕದಲ್ಲಿಯೇ ಅತಿ ಹೆಚ್ಚು ಶೇ.10ರಷ್ಟಿದೆ. ಇದರಿಂದ ಕಳೆದ ವಾರ ಸಾವಿರ ಗಡಿಯಲ್ಲಿದ್ದ ಸೋಂಕು ಪ್ರಕರಣಗಳು, ನಾಲ್ಕು ದಿನದಿಂದ ಏರಿಕೆ ಹಾದಿಯಲ್ಲಿಯೇ ಸಾಗಿ ಸದ್ಯ 2000ಕ್ಕೂ ಅಧಿಕ ವರದಿಯಾಗುತ್ತಿವೆ.

ಕರ್ನಾಟಕ ಗುಣಮುಖ ದರವೂ ಕಡಿಮೆ ಇದೆ. ಒಟ್ಟಾರೆ 33,418 ಸೋಂಕಿತರ ಪೈಕಿ ಈವರೆಗೂ 13,836 ಮಂದಿ ಮಾತ್ರ ಗುಣ ಮುಖ ರಾಗಿದ್ದಾರೆ. ಇನ್ನೂ19,035 ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ. ಈ ಮೂಲಕ ಗುಣಮುಖ ದರ ಶೇ. 41.4ರಷ್ಟಿದೆ. ಆದರೆ, ಟಾಪ್‌ ಹತ್ತರಲ್ಲಿರುವ ಯಾವ ರಾಜ್ಯವೂ ಶೇ.50ಕ್ಕೂ ಕಡಿಮೆ ಗುಣಮುಖ ದರವಿಲ್ಲ. ಕರ್ನಾಟಕದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಶೇ. 22ರಷ್ಟಿದೆ.

ಈ ನಡುವೆ ಶುಕ್ರವಾರ ಮೊದಲ ಬಾರಿ ದಿನದ ಗುಣಮುಖದಾದವರ ಸಂಖ್ಯೆ 1,000 ಗಡಿ ದಾಟಿರುವುದು ಆಶಾದಾಯಕವೆನಿಸಿದೆ. ಕರ್ನಾ ಟಕದಲ್ಲಿ ಸೋಂಕಿತರ ಮರಣದರ ಶೇ. 1.6ರಷ್ಟಿದ್ದು ಅತಿ ಹೆಚ್ಚು ಕೊರೊನಾ ಪೀಡಿತ 10 ರಾಜ್ಯಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next