Advertisement
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಮುಖ ವಾಗುತ್ತಿದೆ. ಆದರೆ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುವಂತಿಲ್ಲ.ಜಿಲ್ಲೆಯಲ್ಲಿ ಕೊರೊನಾ ಹರಡುವಿಕೆ ಆರಂಭ ವಾದಂದಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಯೂ ಏರಿಕೆಯಾಗತೊಡಗಿತ್ತು. ಎಪ್ರಿಲ್ 18ರ ಬಳಿಕ ನಿರಂತರವಾಗಿ ಏರಿದ್ದ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಆತಂಕವನ್ನೇ ಸೃಷ್ಟಿಸಿತ್ತು. ಡಿ. 17ರ ವರೆಗೆ 732 ಮಂದಿ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾಗಿದ್ದಾರೆ.
Related Articles
ಜಿಲ್ಲೆಯಲ್ಲಿ ಕೊರೊನಾ ದೃಢಪಟ್ಟು ಸಾವನ್ನಪ್ಪಿದವರ ಸಂಖ್ಯೆ ಇಲ್ಲಿಯವರೆಗೆ 732ಕ್ಕೆ ತಲುಪಿದ್ದರೂ ಇದರಲ್ಲಿ ಕೇವಲ ಕೊರೊನಾದಿಂದಾಗಿಯೇ ಸಾವನ್ನಪ್ಪಿದವರ ಸಂಖ್ಯೆ 17. ಉಳಿದ 715 ಮಂದಿ ಹೃದಯ ಸಂಬಂಧಿ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹ, ಬಹು ಅಂಗಾಂಗ ವೈಫಲ್ಯ, ಕಿಡ್ನಿಯಲ್ಲಿನ ತೊಂದರೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಸಹಿತ ಇತರ ದೀರ್ಘಕಾಲಿಕ ತೊಂದರೆಗಳಿಂದ ಬಳಲುತ್ತಿದ್ದವರು. ಈ ಸಂಖ್ಯೆ ಯನ್ನು ಗಮನಿಸಿದರೆ ಆರೋಗ್ಯವಂತ ವ್ಯಕ್ತಿಗೆ ಕೊರೊನಾ ಮಾರಣಾಂತಿಕವಲ್ಲ ಎಂಬುದು ಸ್ಪಷ್ಟವಾಗುತ್ತದೆ.
Advertisement
ಕೊನೆ ಕ್ಷಣದ ಚಿಕಿತ್ಸೆ: ಸಾವಿಗೆ ಕಾರಣಕೊರೊನಾ ಲಕ್ಷಣ ಆರಂಭದ ಮುನ್ಸೂಚನೆ ಲಭಿಸಿದಾಗಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರೆ ಸಾವಿನ ಪ್ರಮಾಣ ಇನ್ನಷ್ಟು ತಗ್ಗುತ್ತಿತ್ತು. ಉಡುಪಿ, ಶಿವಮೊಗ್ಗ, ಕೊಡಗು, ಉ.ಕ., ದಾವಣಗೆರೆ ಮುಂತಾದೆಡೆಗಳಿಂದ ಕೊರೊನಾ ಚಿಕಿತ್ಸೆಗೆಂದು ರೋಗಿಗಳು ದ.ಕ. ಜಿಲ್ಲೆಗೆ ಆಗಮಿಸುತ್ತಾರೆ. ಆದರೆ ಹೀಗೆ ಬರುವವರೆಲ್ಲರೂ ತಮ್ಮ ಜಿಲ್ಲೆಗಳಲ್ಲಿ ಚಿಕಿತ್ಸೆಗೆ ತೆರಳಿ ಫಲಿಸದಾಗ ಕೊನೆ ಕ್ಷಣದಲ್ಲಿ ದ.ಕ. ಜಿಲ್ಲೆಯ ಆಸ್ಪತ್ರೆಗಳಿಗೆ ಬರುತ್ತಾರೆ. ಆದರೆ, ಆ ಹೊತ್ತಿಗಾಗಲೇ ರೋಗ ಉಲ್ಬಣಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಸಾವು ಸಂಭವಿಸುತ್ತಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾತು. ಪರೀಕ್ಷೆಗೊಳಪಡಿ
ಕೆಲವು ದಿನಗಳಿಂದೀಚೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ ಶೂನ್ಯಕ್ಕಿಳಿದಿರುವುದು ಜಿಲ್ಲೆಯ ಮಟ್ಟಿಗೆ ಸಮಾಧಾನಕರ ಸಂಗತಿಯಾಗಿದೆ. ಜಿಲ್ಲೆ ಮತ್ತು ಹೊರ ಜಿಲ್ಲೆಯ ರೋಗಿಗಳು ಆರಂಭಿಕ ಲಕ್ಷಣ ಗೋಚರಿಸಿದಾಗಲೇ ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು. ಕೊನೆಯ ಕ್ಷಣದವರೆಗೆ ಕಾಯಬಾರದು. ಇದರಿಂದ ಆರೋಗ್ಯನಷ್ಟ, ಸಾವು ತಡೆಯಬಹುದು.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ