Advertisement
ಸೋಂಕಿನಿಂದಲೇ ಹೆಚ್ಚು ಸಾವುಕರ್ತವ್ಯದಲ್ಲಿರುವಾಗಲೇ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ.90. ಉಳಿದಂತೆ ಶೇ.10 ಮಂದಿ ಹೃದಯಾಘಾತ, ಅಪಘಾತ ಮತ್ತಿತರ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಸರಕಾರದ ಬಳಿ ಖಚಿತ ಮಾಹಿತಿ ಇಲ್ಲ. ವಿವಿಧ ಇಲಾಖೆಗಳು ಮತ್ತು ಸಂಘ- ಸಂಸ್ಥೆಗಳಿಂದ “ಉದಯವಾಣಿ’ ಈ ಮಾಹಿತಿ ಕಲೆ ಹಾಕಿದೆ.
ವೈದ್ಯರು, ನರ್ಸ್ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರು, ಅಗ್ನಿಶಾಮಕ ದಳ ಸಿಬಂದಿ, ಶಿಕ್ಷಣ ಇಲಾಖೆ ಸಿಬಂದಿ, ಪೌರ ಕಾರ್ಮಿಕರು, ಸಾರಿಗೆ ಇಲಾಖೆ ಸಿಬಂದಿ. ಒಬ್ಬರಿಗೆ ಮಾತ್ರ ಪರಿಹಾರ!
ಸರಕಾರ ಇದುವರೆಗೆ ಒಬ್ಬರಿಗೆ ಮಾತ್ರ 30 ಲಕ್ಷ ರೂ. ಪರಿಹಾರ ನೀಡಿದೆ. ಮೃತ ಉಪವಿಭಾಗಾಧಿಕಾರಿ ಗಂಗಾಧರಯ್ಯ ಅವರ ಕುಟುಂಬಕ್ಕೆ ಕೋವಿಡ್ ನಿಧಿಯಿಂದ 30 ಲಕ್ಷ ರೂ. ನೀಡಲಾಗಿದೆ. ಕೊರೊನಾ ಸೇನಾನಿಗಳಾಗಿ ಮೃತಪಟ್ಟ ಇಲಾಖೆಯ ಅಧಿಕಾರಿ-ಸಿಬಂದಿಗೆ 30 ಲಕ್ಷ ರೂ. ಜತೆಗೆ ಪೊಲೀಸ್ ಇಲಾಖೆಯಿಂದ ಎಲ್ಲ ಪರಿಹಾರ ಸೌಲಭ್ಯ ದೊರೆಯುತ್ತವೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ) ಡಾ| ಎಂ.ಎ. ಸಲೀಂ ಹೇಳಿದ್ದಾರೆ.
Related Articles
– ಕೋವಿಡ್ ಕರ್ತವ್ಯ ನಿರ್ವಹಣೆಯಲ್ಲಿ ಸೋಂಕಿನಿಂದ ಮೃತಪಟ್ಟರೆ 30 ಲಕ್ಷ ರೂ. ಪರಿಹಾರ.
– ಸರಕಾರಿ ನೌಕರನಿಗೆ ಆತನ ಮಾಮೂಲಿ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕೋವಿಡ್ ಕಾಣಿಸಿಕೊಂಡರೆ ಅದರ ಚಿಕಿತ್ಸಾ ವೆಚ್ಚವನ್ನಷ್ಟೇ ಸರಕಾರ ಭರಿಸಲಿದ್ದು, 30 ಲಕ್ಷ ರೂ. ಪರಿಹಾರಕ್ಕೆ ಅರ್ಹತೆ ಇರುವುದಿಲ್ಲ.
– ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡು ಕೋವಿಡ್ ಬದಲಿಗೆ ಬೇರೆ ಕಾರಣಕ್ಕೆ ಮೃತಪಟ್ಟರೆ ಅವರಿಗೆ ಪರಿಹಾರ ಸಿಗದು.
Advertisement
ದ.ಕ., ಉಡುಪಿ ಎಷ್ಟು?ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಸೇನಾನಿಗಳು ಮೃತಪಟ್ಟಿದ್ದಾರೆ ಎಂಬುದು ಸದ್ಯಕ್ಕಿರುವ ಮಾಹಿತಿ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೇನಾನಿಗಳ ಸಾವು ಸಂಭವಿಸಿಲ್ಲ. ಸಾವಿಗೀಡಾದವರು: ಯಾರ್ಯಾರು? ಎಷ್ಟು?
ವೈದ್ಯರು
ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರ ಪಾಲಿಗೆ ಇವರೇ ದೈವೀ ಸ್ವರೂಪರು. ಆದರೆ ಚಿಕಿತ್ಸೆ ನೀಡುತ್ತಲೇ ಸೋಂಕಿನಿಂದ ಪ್ರಾಣ ತೆತ್ತ ವೈದ್ಯರ ಸಂಖ್ಯೆ 60. ಇದು ವೈದ್ಯಕೀಯ ಸಂಘದ ಮಾಹಿತಿ. ಆದರೆ ಆರೋಗ್ಯ ಇಲಾಖೆಯ ಬಳಿ ಕೇವಲ 9 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ. ನರ್ಸ್‌ಗಳು
ವೈದ್ಯರ ಜತೆಗೆ ಬೆನ್ನೆಲುಬಾಗಿ ನಿಂತವರು ನರ್ಸ್ ಗಳು ಅಥವಾ ಅರೆ ವೈದ್ಯಕೀಯ ಸಿಬಂದಿ. ಇವರೂ ತಮ್ಮ ಜೀವ ಪಣಕ್ಕಿಟ್ಟು ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇವರಲ್ಲಿ 19 ನರ್ಸ್‌ಗಳು, ಒಬ್ಬ ವಾರ್ಡ್ ಬಾಯ್ ಸಾವನ್ನಪ್ಪಿದ್ದಾರೆ. ಇವರಿಗೂ ಪರಿಹಾರ ಸಿಕ್ಕಿರುವ ಮಾಹಿತಿ ಇಲ್ಲ. ಪೊಲೀಸರು
ಸುಮಾರು 82 ಅಧಿಕಾರಿಗಳು, ಸಿಬಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಪರಾಧಿಗಳ ಬಂಧನ, ಲಾಕ್‌ಡೌನ್ ಸಂದರ್ಭದಲ್ಲಿ ಬಂದೋಬಸ್ತ್, ರಾತ್ರಿ ಪಾಳಿಗೆ ನಿಯೋಜನೆ ವೇಳೆ ಸೋಂಕು ತಗುಲಿ ಮೃತರಾಗಿದ್ದಾರೆ. ಚಾಲಕ, ನಿರ್ವಾಹಕರು
96 ಚಾಲಕರು ಮತ್ತು ನಿರ್ವಾಹಕರು ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾದಿಂದ ಮೃತಪಟ್ಟ ಸಾರಿಗೆ ನೌಕರರನ್ನು ಕೊರೊನಾ ಸೇನಾನಿಗಳು ಎಂದು ಪರಿಗಣಿಸಿ ಪರಿಹಾರ ನೀಡಲಾಗುವುದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಶಿಕ್ಷಕ , ಉಪನ್ಯಾಸಕರು
ಕೊರೊನಾ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಮತ್ತಿತರ ಸಮೀಕ್ಷೆ ಕಾರ್ಯಗಳಿಗೆ ನಿಯೋಜಿತರಾಗಿದ್ದ ಶಿಕ್ಷಕರು, ವಿದ್ಯಾಗಮ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದವರು, ಮೌಲ್ಯಮಾಪನ ಕಾರ್ಯದ ನಿಯೋ ಜನೆ ವೇಳೆ ಒಟ್ಟು 200 ಶಿಕ್ಷ ಕರು, 35 ಮಂದಿ ಉಪನ್ಯಾಸಕರು ಪ್ರಾಣ ಕಳೆದುಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರು
ಕೊರೊನಾ ತಡೆಯಲ್ಲಿ ಮತ್ತು ಸೋಂಕು ಪರೀಕ್ಷೆ ಪ್ರಕ್ರಿಯೆಯಲ್ಲಿ ಆಶಾ ಕಾರ್ಯಕರ್ತೆಯರ ಕೆಲಸ ಮರೆಯುವಂತಿಲ್ಲ. ಹಳ್ಳಿ ಹಳ್ಳಿಗಳಲ್ಲೂ ಇವರೇ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದಾರೆ. ಇವರಲ್ಲೂ ಸುಮಾರು 10 ಮಂದಿ ಮೃತರಾಗಿದ್ದಾರೆ. ಸೋಂಕಿನಿಂದ ಒಬ್ಬರು ಮೃತರಾಗಿದ್ದರೆ, ಇತರ ಕಾರಣಗಳಿಂದ 9 ಮಂದಿ ಸಾವನ್ನಪ್ಪಿದ್ದಾರೆ. ಪೌರ ಕಾರ್ಮಿಕರು
ಕೊರೊನಾ ಕಾಲದಲ್ಲಿ ಅಂಜದೆ ಕೆಲಸ ಮಾಡಿದವರಲ್ಲಿ ಪೌರ ಕಾರ್ಮಿಕರೂ ಮೊದಲಿಗರು. ಇವರನ್ನೂ ಕೊರೊನಾ ಸೋಂಕು ಬಿಡಲಿಲ್ಲ. ಇಲ್ಲೂ 4 ಪೌರ ಕಾರ್ಮಿಕರು, 4 ಗುತ್ತಿಗೆ ಪೌರ ಕಾರ್ಮಿಕರು ಮತ್ತು ಇಬ್ಬರು ನೋಡಲ್ ಅಧಿಕಾರಿಗಳು ಸಾವಿಗೀಡಾಗಿದ್ದಾರೆ.