Advertisement

ದೆಹಲಿ ಹೈಕೋರ್ಟ್ ನ್ಯಾಯಾಧೀಶರಿಗೆ 5 ಸ್ಟಾರ್ ಹೋಟೆಲ್ ನಲ್ಲಿ ಕೋವಿಡ್ ಕೇರ್ ಸೆಂಟರ್

08:10 AM Apr 27, 2021 | Team Udayavani |

ದೆಹಲಿ :  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರು ಮತ್ತು ನ್ಯಾಯಾಂಗ ಅಧಿಕಾರಿಗಳು ಹಾಗೂ ಅವರ ಕುಟುಂಬದವರಿಗೆ 5 ಸ್ಟಾರ್ (ಪಂಚತಾರಾ ಹೋಟೆಲ್) ಹೋಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳ ವ್ಯವಸ್ಥೆ ಮಾಡಲಾಗಿದೆ. ದೆಹಲಿಯ ಅಶೋಕ ಹೋಟೆಲ್ ನಲ್ಲಿ 100 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಎಂದು ಚಾಣಕ್ಯಪುರಿ ಉಪವಿಭಾಗ ಮ್ಯಾಜಿಸ್ಟ್ರೇಟ್ ಗೀತಾ ಗ್ರೋವರ್ ತಿಳಿಸಿದ್ದಾರೆ.

Advertisement

ಇನ್ನು ಪ್ರಿಮಸ್ ಆಸ್ಪತ್ರೆಯು ಕೋವಿಡ್ ಕೇರ್ ಸೇವೆಗಳನ್ನು ಪಂಚತಾರಾ ಹೋಟೆಲ್‌ನಲ್ಲಿ ನಡೆಸಲಿದೆ ಎಂದು ತಿಳಿಸಲಾಗಿದೆ. ವೈದ್ಯಕೀಯ ತ್ಯಾಜ್ಯ ವಿಲೇವಾರಿ ಆಸ್ಪತ್ರೆಯ ಜವಾಬ್ದಾರಿಯಾಗಿದೆ. ಹೋಟೆಲ್ ಸಿಬ್ಬಂದಿಗೆ ಎಲ್ಲಾ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು ಮತ್ತು  ಅವರಿಗೆ ತರಬೇತಿಯನ್ನು ನೀಡಬೇಕು. ರೋಗಿಗಳ ವರ್ಗಾವಣೆಗೆ ಆಂಬ್ಯುಲೆನ್ಸ್ ಗಳನ್ನು ಪ್ರಿಮಸ್ ಆಸ್ಪತ್ರೆಯಿಂದ ಒದಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೆಲಸಕ್ಕೆ ಹೋಟೆಲ್ ಸಿಬ್ಬಂದಿಗಳ ಕೊರತೆಯಾದರೆ ಆಸ್ಪತ್ರೆಯಿಂದಲೂ ಸಿಬ್ಬಂದಿಗಳನ್ನು ಒದಗಿಸಲಾಗುವುದು. ಕೊಠಡಿಗಳು, ಆಹಾರ, ಸ್ವಚ್ಛತೆ ಸೇರಿದಂತೆ ಹೋಟೆಲ್ ನಲ್ಲಿ ಇರುವ ನ್ಯಾಯಾಂಗ ಸಿಬ್ಬಂದಿಗೆ ಎಲ್ಲಾ ಸೇವೆಗಳನ್ನು ಹೋಟೆಲ್ ಒದಗಿಸುತ್ತದೆ ಎಂದು ತಿಳಿಸಲಾಗಿದೆ. ಹೋಟೆಲ್ ನಲ್ಲಿ ಇರುವ ರೋಗಿಗಳ ವೈದ್ಯಕೀಯ ಖರ್ಚನ್ನು ಆಸ್ಪತ್ರೆಯೇ ಭರಿಸುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next