ನೆಲಮಂಗಲ: ತಾಲೂಕಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಬವಿಸದಂತೆ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕು ಕಚೇರಿ ಆವರಣದಲ್ಲಿ ನಗರಸಭೆ ಹಾಗೂತಾಲೂಕಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಾಲೂಕಿನಮಾಹಿತಿ ಪಡೆದು ಮಾತನಾಡಿದರು. ತಾಲೂಕಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು,ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿಆಕ್ಸಿಜನ್ ಶೇಖರಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗಿದೆ.
ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಯಾವುದೇ ರೀತಿಯ ಸಮಸ್ಯೆಗಳುಎದುರಾಗದಂತೆ ಎಚ್ಚರಿಕೆವಹಿಸಬೇಕು ಎಂದರು.ನಗರಸಭೆ ಸಿಬ್ಬಂದಿ ನಗರಸಭೆ ವ್ಯಾಪ್ತಿಯಲ್ಲಿರುವಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರನ್ನುಕ್ವಾರಂಟೈನ್‌ನಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.
ಪರಿಶೀಲನೆ: ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕಜಿಲ್ಲಾಧಿಕಾರಿ ಶ್ರೀನಿವಾಸ್ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಶೇಖರಣಾ ಘಟಕ ಮತ್ತು ಕೋವಿಡ್ ಕೇರ್‌ಸೆಂಟರ್, ಪ್ರಾಥಮಿಕ ಶಾಲೆಯಲ್ಲಿರುವ ಲಸಿಕಾ ಕೇಂದ್ರ ಮತ್ತುವಿಶ್ವೇಶ್ವರ ಪುರದಲ್ಲಿರುವ ಟಿಬೇಟಿಯನ್ ವಸತಿವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಟಿಬೇಟಿಯನ್ ಹಾಸ್ಟೆಲ್ ಆವರಣದಲ್ಲಿ ಹೆಚ್ಚುವರಿಯಾಗಿಶೌಚಾಲಯ ನಿರ್ಮಿಸಿ ಉತ್ತಮ ಸೌಲಭ್ಯ ಕಲ್ಪಿಸಬೇಕು. ಪಟ್ಟಣಪೊಲೀಸ್ ಠಾಣೆ ಪಕ್ಕದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ತೆರಳುವದಾರಿ ಕಿರಿದಾಗಿದ್ದು, ರಸ್ತೆ ವಿಸ್ತರಣೆ ಮಾಡಬೇಕು ಎಂದರು.ಈ ವೇಳೆ ತಾಲೂಕು ಕೋವಿಡ್ ನೋಡೆಲ್ ಅಧಿಕಾರಿಪೂರ್ಣಿಮಾ, ತಹಶೀಲ್ದಾರ್ ಕೆ.ಮಂಜುನಾಥ್, ತಾಲೂಕುಆರೋಗ್ಯಾಧಿಕಾರಿ ಡಾ.ಹರೀಶ್, ಆಸ್ಪತ್ರೆ ಆಡಳಿತಾಧಿಕಾರಿಡಾ.ನರಸಿಂಹಯ್ಯ, ಆರೋಗ್ಯರಕ್ಷಾ ಸಮಿತಿ ಸದಸ್ಯ ಎಚ್.ಬೈಲಪ್ಪ, ಆರೋಗ್ಯ ನಿರೀಕ್ಷಕ ಬಸವರಾಜು, ಉಮೇಶ್,ನಾಗೇಶ್,ರಾಜಸ್ವ ನಿರೀಕ್ಷಕರಾದ ಸುದೀಪ್, ರವಿಕುಮಾರ್,ನಗರಸಭೆ ಕಂದಾಯ ಅಧಿಕಾರಿ ಸವಿತಾ ಇತರರಿದ್ದರು.