Advertisement

ಶೀಘ್ರವೇ ಕೋವಿಡ್‌ ಕೇರ್‌ ಸೆಂಟರ್‌

01:31 PM Apr 29, 2020 | Suhan S |

ಧಾರವಾಡ:  ಕೋವಿಡ್ 19 ವೈರಾಣು ಸೋಂಕಿತರಲ್ಲದ ಸ್ವಲ್ಪ ಮಟ್ಟಿಗಿನ ಜ್ವರ ಹಾಗೂ ಇತರೆ ಆರೋಗ್ಯ ತೊಂದರೆಗಳಿಂದ ಬಾಧಿತರಾದ ಜನರಿಗೆ ಆರೈಕೆ ನೀಡಲು ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಅವಳಿ ನಗರದಲ್ಲಿ ಆರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸಿ ದೀಪಾ ಚೋಳನ್‌ ಅವರು ಹಿರಿಯ ಅಧಿಕಾರಿಗಳೊಂದಿಗೆ ಹುಬ್ಬಳ್ಳಿ ಮತ್ತು ಧಾರವಾಡದ ವಿವಿಧ ಆಸ್ಪತ್ರೆ ಮತ್ತು ಖಾಸಗಿ ಕಟ್ಟಡಗಳಿಗೆ ಮಂಗಳವಾರ ಸಂಜೆ ಭೇಟಿ ನೀಡಿ ಮೂಲಸೌಲಭ್ಯಗಳನ್ನು ಪರಿಶೀಲಿಸಿದರು.

Advertisement

ಜಿಪಂ ಸಿಇಒ ಡಾ| ಬಿ.ಸಿ. ಸತೀಶ್‌, ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶ್‌ ಇಟ್ನಾಳ, ಡಿಎಚ್‌ಒ ಡಾ| ಯಶವಂತ ಮದೀನಕರ, ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸಂಗಮೇಶ ಕಲಹಾಳ, ಜಿಲ್ಲಾ ಆರ್‌ಸಿಎಚ್‌ ಅಧಿ ಕಾರಿ ಡಾ|ಎಸ್‌.ಎಂ. ಹೊನಕೇರಿ, ಜಿಲ್ಲಾ ಸರ್ವೆಕ್ಷಣಾ ಅಧಿಕಾರಿ ಡಾ| ಸುಜಾತಾ ಹಸವಿಮಠ, ಡಾ| ಶಶಿ ಪಾಟೀಲ, ಪ್ರಾಚಾರ್ಯ ಡಾ| ಆನಂದ ಕುಲಕರ್ಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next