Advertisement

ಕೋವಿಡ್ ಲಸಿಕೆ ನೀಡಲು ಕ್ಯಾಂಪ್‌

09:07 PM Mar 31, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕಳೆದ 15 ದಿನದಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ಕೊರೊನಾ ಲಸಿಕೆ ನೀಡುವತ್ತ ಹೆಚ್ಚಿನ ಗಮನ ಹರಿಸಬೇಕು. ಅಗತ್ಯವಿದ್ದರೆ ಕ್ಯಾಂಪ್‌ ಆಯೋಜಿಸಿ ಕೊರೊನಾ ನೀಡುವ ಕೆಲಸವಾಗಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಕೊರೊನಾ ಸ್ಥಿತಿಗತಿ ಕುರಿತು ಮಂಗಳವಾರ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಕಳೆದ ವರ್ಷ ಕೊರೊನಾ ಸೋಂಕು ಕಂಡು ಕೂಡಲೇ ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಲಾಗಿತ್ತು. ಈಗಿನ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಘೋಷಿಸುವ ಸಂಭವ ಕಡಿಮೆ. ಈಗಾಗಲೇ ಕೊರೊನಾ ಲಸಿಕೆ ದೊರೆತಿರುವುದರಿಂದ ಎಲ್ಲ ಅರ್ಹರಿಗೂ ಲಸಿಕೆ ನೀಡುವತ್ತ ಹೆಚ್ಚ ಗಮನ ಹರಿಸುವುದೇ ಮುಖ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ 16,337 ಆರೋಗ್ಯ ಕಾರ್ಯಕರ್ತರು ಮತ್ತು 7,787 ಮುಂಚೂಣಿ ಕಾರ್ಯಕರ್ತರು ಪ್ರಥಮ ಡೋಸ್‌ ಪಡೆದಿದ್ದಾರೆ. ಎರಡನೇ ಡೋಸ್‌ ಪಡೆದವರ ಸಂಖ್ಯೆ ಕ್ರಮವಾಗಿ 9,531 ಮತ್ತು 2927 ಆಗಿದೆ. ಎರಡನೇ ಡೋಸ್‌ ಪಡೆಯಲು ನಿರಾಸಕ್ತಿ ಕುರಿತು ಪ್ರಶ್ನಿಸಿದ ಅವರು, ಎರಡನೇ ಡೋಸ್‌ ಹಾಕಿಸಿಕೊಳ್ಳದವರಿಗೆ ಕೂಡಲೇ ಲಸಿಕೆ ಹಾಕಿಸಿಕೊಳ್ಳುವಂತೆ ಸೂಚನೆ ಕೊಡಬೇಕು. ಜತೆಗೆ ಲಸಿಕೆ ಪಡೆಯಲು ಪ್ರೇರೇಪಿಸಿ ಎಂದು ತಾಕೀತು ಮಾಡಿದರು. ಕಳೆದ ವರ್ಷ ಗ್ರಾಮೀಣ ಪ್ರದೇಶದಲ್ಲಿ ಜನಪ್ರತಿನಿಧಿಗಳು ಒಳಗೊಂಡಂತೆ ಟಾಸ್ಕ್ ´ಪೋರ್ಸ್‌ ರಚಿಸಿ ಜಾಗೃತಿ ಮೂಡಿಸಿದ್ದು ಫಲಪ್ರದವಾಗಿದೆ. ಇದನ್ನು ಮತ್ತೆ ರಚಿಸಿ ಕಾರ್ಯಗತಗೊಳಿಸಬೇಕೆಂದು ಅವರು, ಜಿಪಂ ಸಿಇಒ ಡಾ| ದಿಲೀಷ್‌ ಸಸಿ ಅವರಿಗೆ ನಿರ್ದೇಶಿಸಿದರು.

ಸೋಂಕಿತರ ಕೈಗೆ ಮುದ್ರೆ: ಕೊರೊನಾದೊಂದಿಗೆ ಬದುಕು ಸಾಗಿಸುವುದು ಅನಿವಾರ್ಯವಾಗಿದ್ದು, ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪರಿಪಾಲನೆ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಿರಂತರ ಸಾಗಬೇಕು. ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರು ಮನೆಯಿಂದ ಹೊರಗಡೆ ತಿರುಗಾಡಿದರೆ, ಅವರ ಕೈಗೆ ಹ್ಯಾಂಡ್‌ ಸ್ಟಾಂಪ್‌ ಹಾಕಿ ಹೊರಗಡೆ ತಿರುಗದಂತೆ ಎಚ್ಚರ ನೀಡಬೇಕು. ಇದಕ್ಕೂ ಕೇಳದಿದ್ದರೆ ಪ್ರಕರಣ ದಾಖಸಬೇಕೆಂದು ಮುಖ್ಯ ಕಾರ್ಯದರ್ಶಿ ಹೇಳಿದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ° ಮಾತನಾಡಿ, ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಶೇ.1.09ರಷ್ಟು ಕೊರೊನಾ ಪಾಸಿಟಿವ್‌ ಪ್ರಮಾಣವಿದ್ದರೆ, ಮಾರ್ಚ್‌ ನಾಲ್ಕನೇ ವಾರದಲ್ಲಿ ಇದರ ಪ್ರಮಾಣ ಶೇ.2.2ಕ್ಕೆ ಹೆಚ್ಚಳಗೊಂಡಿದೆ. ಕಳೆದ ಒಂದು ವಾರದಲ್ಲಿ 805 ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು, ಇದರಲ್ಲಿ ಕಲಬುರಗಿ ನಗರದಲ್ಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದರು. ಕೊರೊನಾ ಮಾದರಿಗಳ ಪರೀಕ್ಷೆ ಗುರಿ ಪ್ರತಿದಿನ ಗುರಿ 2 ಸಾವಿರ ಇದ್ದರೂ, 5 ಸಾವಿರ ಮಾದರಿಗಳನ್ನು ಪಡೆದು ತಪಾಸಣೆ ಮಾಡಲಾಗುತ್ತಿದೆ. ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿ ಬಂದ 25 ರಿಂದ 30 ಜನರನ್ನು ಪತ್ತೆ ಹಚ್ಚಿ ಅವರನ್ನು ಸಹ ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಎರಡನೇ ಅಲೆಯಲ್ಲಿ ಯಾವುದೇ ಪ್ರಯಾಣದ ಇತಿಹಾಸ ಕಂಡುಬರುತ್ತಿಲ್ಲ ಎಂದರು. ಸಭೆಯಲ್ಲಿ ಪ್ರಾದೇಶಿಕ ಆಯುಕ್ತ ಡಾ| ಎನ್‌.ವಿ.ಪ್ರಸಾದ, ನಗರ ಪೊಲೀಸ್‌ ಆಯುಕ್ತ ಎನ್‌.ಸತೀಷಕುಮಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿಮಿ ಮರಿಯಂ ಜಾರ್ಜ್‌, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್‌ ಸುಧಾಕರ ಲೋಖಂಡೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಪಾಂಡ್ವೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಣಾ ಕಾರಿ ಡಾ| ರಾಜಶೇಖರ ಮಾಲಿ, ಜಿಮ್ಸ್‌ ನಿರ್ದೇಶಕಿ ಡಾ| ಕವಿತಾ ಪಾಟೀಲ, ವೈದ್ಯಕೀಯ ಅ ಧೀಕ್ಷಕ ಡಾ| ಶμಯೋದ್ದಿನ್‌ ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ಆರೋಗ್ಯಾಧಿ ಕಾರಿಗಳು ಇದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next