Advertisement

ಕೋವಿಡ್ ಸೋಂಕಿಗೆ 1 ದಿನದ ಅಂತರದಲ್ಲಿ ಸೋದರರ ಸಾವು!

02:10 AM May 19, 2021 | Team Udayavani |

ಮೀರತ್‌ (ಉತ್ತರಪ್ರದೇಶ): ಕೊರೊನಾ ಶುರುವಾದಾಗಿನಿಂದ ಲಕ್ಷಾಂತರ ವ್ಯಕ್ತಿಗಳ ಖಾಸಗಿ ಬದುಕಲ್ಲಿ ಬಿರುಗಾಳಿಯೇ ಬೀಸಿಹೋಗಿದೆ. ಅಂಥ‌ದ್ದೊಂದು ವಿದ್ರಾವಕ ಕಥೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದಿದೆ.

Advertisement

ಎಪ್ರಿಲ್‌ 23ಕ್ಕೆ ಜೋಫ್ರೆಡ್‌ ಮತ್ತು ರಾಲ್ಫೆ†ಡ್‌ ಎಂಬ ಅವಳಿ ಸಹೋದರರು ತಮ್ಮ 24ನೇ ವರ್ಷದ ಜನ್ಮದಿನ ಆಚರಿಸಿಕೊಂಡರು. ಅದರ ಮರುದಿನವೇ ಅವರಿಗೆ ಕೊರೊನಾ ಸೋಂಕು ತಗಲಿತು. ಇಬ್ಬರೂ ಹಾಸಿಗೆ ಹಿಡಿದರು. ಮೇ 13ರಂದು ಜೋಫ್ರೆಡ್‌ ಅವರು ಮೀರತ್‌ನ ಆನಂದ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನವೇ ರಾಲ್ಫೆಡ್‌ ಕೂಡಾ ಇಹಲೋಕ ತ್ಯಜಿಸಿದರು!

ಮೀರತ್‌ನಲ್ಲಿ ಶಾಲಾ ಶಿಕ್ಷಕರಾಗಿರುವ ಗ್ರೆಗೊರಿ ರೇಮಂಡ್‌ ಮತ್ತು ಸೊಜಾ ರಾಫೆಲ್‌ ದಂಪತಿಗಳಿಗೆ ಈಗುಳಿದಿರುವುದು ನೆಲ್ಫೆಡ್‌ ಎಂಬ ಹಿರಿಯ ಮಗ ಮಾತ್ರ. ಅಂದಹಾಗೆ ಸಹೋದರರಿಬ್ಬರ ಸಾವಿಗೆ ಕಾರಣ ಆಮ್ಲಜನಕದ ಕೊರತೆ!

Advertisement

Udayavani is now on Telegram. Click here to join our channel and stay updated with the latest news.

Next