Advertisement

ಮಾವು ಬೆಳೆಗಾರರು-ಮಾರಾಟಗಾರರಿಗೆ ಕೋವಿಡ್ ಕಹಿ

06:28 AM May 28, 2020 | mahesh |

ಹುಬ್ಬಳ್ಳಿ: ಇಳುವರಿಯೂ ಕಡಿಮೆ.. ನೆಲಕಚ್ಚಿದ ವ್ಯಾಪಾರ.. ತೋಟದ ಗುತ್ತಿಗೆ ಕೈಬಿಟ್ಟ ಗುತ್ತಿಗೆದಾರರು.. ತೋಟದವರಿಂದಲೇ ಮಾರಾಟ.. ಸಿಕ್ಕವರಿಗೆ
ಗುತ್ತಿಗೆ… ದರವೂ ಅಷ್ಟಕಷ್ಟೇ.. ಇದು ಕೋವಿಡ್ ಹೊಡೆತ್ತಕ್ಕೆ ತತ್ತರಿಸಿದ ಧಾರವಾಡ ತಾಲೂಕು ಜೋಗೆಲ್ಲಾಪುರ ಗ್ರಾಮದ ಮಾವಿನ ವಹಿವಾಟಿನ ಕಥೆ-ವ್ಯಥೆ. ಲಾಕ್‌ಡೌನ್‌ ಕಾರಣ ಎರಡೂವರೆ ತಿಂಗಳಿಂದ ಮಾವಿನ ಹಣ್ಣುಗಳ ವಹಿವಾಟು ನೆಲಕಚ್ಚಿದೆ. ಮಾರುಕಟ್ಟೆಗೆ ಆಗಮಿಸಿರುವ ಹಣ್ಣುಗಳ ಖರೀದಿಗೆ ಜನ ನಿರೀಕ್ಷಿತ ಮಟ್ಟದಲ್ಲಿ ಮುಂದಾಗುತ್ತಿಲ್ಲ. ಹೀಗಾಗಿ ಸಾಕಷ್ಟು ಹಣ್ಣುಗಳು ಹಾಳಾಗಿದ್ದರೆ, ಕೆಲವೊಮ್ಮೆ ಸಿಕ್ಕ ಸಿಕ್ಕ ದರಕ್ಕೆ ಮಾರಾಟಗೊಂಡಿವೆ.

Advertisement

ಆರಂಭದಲ್ಲಿ ಒಂದು ಸಾವಿರ ರೂ.ಗಳಿಗೆ ಎರಡು ಡಜನ್‌ ಆಲ್ಪೋನ್ಸೊ ಮಾವಿನ ಹಣ್ಣಿನ ಬಾಕ್ಸ್‌ ಮಾರಾಟವಾಗುತ್ತಿತ್ತು. ಈಗ ಕೇವಲ 200-500 ರೂ. ಗಳಿಗೆ ದರ ಕುಸಿದಿದೆ. ಕಲ್ಮಿ, ಕರೇ ಈಶಾಡಿ, ಸಿಂಧೂರ ಸೇರಿದಂತೆ ವಿವಿಧ ತಳಿಗಳ ಹಣ್ಣುಗಳದ್ದೂ ಇದೇ ಕಥೆ. ಪ್ರತಿ ವರ್ಷ ಸೀಜನ್‌ ಆರಂಭವಾಗುವುದಕ್ಕಿಂತ
ಮುಂಚಿತವಾಗಿ ಕಾಯಿ ಬಿಡುವ ಸಮಯದಲ್ಲಿ ತೋಟಗಳಿಗೆ ಆಗಮಿಸುತ್ತಿದ್ದ ಗುತ್ತಿಗೆದಾರರು, ಇಡೀ ತೋಟದ ಹಣ್ಣುಗಳಿಗೆ ದರ ನಿಗದಿ ಮಾಡುತ್ತಿದ್ದರು.
ಈ ಬಾರಿ ಗುತ್ತಿಗೆ ಹೊಂದಿಸಿಕೊಂಡು ಹೋದವರು ತೋಟದತ್ತ ತಲೆ ಹಾಕಿಲ್ಲ. ಇದರಿಂದ ತೋಟದ ಮಾಲೀಕರಿಗೆ ದಿಕ್ಕು ತೋಚದಂತಾಗಿ ನಂತರ ಬಂದ
ದರಗಳಿಗೆ ಹಣ್ಣುಗಳನ್ನು ನೀಡಿದ್ದಾರೆ. ಇನ್ನು ಕೆಲವೆಡೆ ತೋಟದ ಮಾಲೀಕರೇ ಬಂದ ದರಕ್ಕೆ ಮಾವಿನ ಕಾಯಿಗಳ ಮಾರಾಟವನ್ನೂ ಮಾಡಿದ್ದಾರೆ.

ಧಾರವಾಡ ತಾಲೂಕಿನ ಜೋಗೆಲ್ಲಾಪುರ ಗ್ರಾಮದಲ್ಲಿ ನೂರಾರು ಎಕರೆ ಮಾವಿನ ತೋಟಗಳಿದ್ದು, ಪ್ರತಿವರ್ಷ ಮಾವಿನ ಹಣ್ಣುಗಳು ಸ್ಥಳೀಯ ಮಾರುಕಟ್ಟೆ ಜತೆಗೆ
ಹೊರರಾಜ್ಯ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ಹೋಗುತ್ತಿದ್ದವು. ಆದರೆ ಈ ಸಲ ಖರೀದಿಗೆ ಗುತ್ತಿಗೆದಾರರು ಆಗಮಿಸದ ಕಾರಣ ಸ್ಥಳೀಯ ಹಣ್ಣು ಮಾರಾಟಗಾರ ಕುಟುಂಬಗಳೇ ಮಾವಿನ ಹಣ್ಣುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಹಣ್ಣಿನ ಸೀಜನ್‌ ಸಂಪೂರ್ಣ ಹಾಳಾಗಿ ಹೋಗಿದೆ. ಲಕ್ಷಾಂತರ ರೂ. ಬಂಡವಾಳ ಹಾಕಿ ತೋಟಗಳನ್ನು ಗುತ್ತಿಗೆ ಪಡೆದು ಹಣ್ಣುಗಳನ್ನು ತೆಗೆದುಕೊಂಡು ಬಂದು
ಮಾರಾಟಕ್ಕೆ ಹಚ್ಚಿದರೆ ಕೊಳ್ಳಲು ಜನರೇ ಇಲ್ಲ. ಪ್ರತಿ ವರ್ಷ ಜೋಗೆಲ್ಲಾಪುರ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಜನರು
ಮಾವಿನ ಹಣ್ಣುಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಖರೀದಿದಾರರೇ ಇಲ್ಲ ಎಂದು ದ್ಯಾಮವ್ವ ಹನುಮಂತಪ್ಪ ತಳವಾರ ಹೇಳುತ್ತಾರೆ.

ಕೋವಿಡ್ ಹಿನ್ನೆಲೆಯಲ್ಲಿ ಜನರು ಹಣ್ಣುಗಳ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ಈ ಹಿಂದೆ ಇಲ್ಲಿಗೆ ಬಂದವರು ಒಂದೆರಡು ಬಾಕ್ಸ್‌ ನೋಡಿ ಹಣ್ಣುಗಳು ಚೆನ್ನಾಗಿವೆ ಎಂದು ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿ ಹಣ್ಣು ನೋಡಿದರೂ

ಈ ಹಿಂದೆ ಕೆಲವರಷ್ಟೇ ಮಾವಿನ ಹಣ್ಣುಗಳ ಮಾರಾಟ ಮಾಡುತ್ತಿದ್ದರು. ಆದರೆ ಈಗ ತರಕಾರಿ ಮಾರುವವರಿಂದ ಹಿಡಿದು ಬಟ್ಟೆ ಮಾರುವವರು ಸಹ ಮಾವಿನ
ಸೀಜನ್‌ನಲ್ಲಿ ಹಣ್ಣುಗಳನ್ನು ಮಾರಾಟ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ಹಣ್ಣುಗಳ ಮಾರಾಟಗಾರರಿಗೆ ಕೊಂಚ ಹೊಡೆತ ಬಿದ್ದಿದೆ.
ದ್ಯಾಮವ್ವ ತಳವಾರ, ಹಣ್ಣಿನ ವ್ಯಾಪಾರಿ

Advertisement

ಕಳೆದ ಹದಿನೈದು ವರ್ಷಗಳಿಂದ ವಿವಿಧ ಹಣ್ಣುಗಳ ಮಾರಾಟ ಮಾಡುತ್ತಿದ್ದೇವೆ. ಮಾವಿನ ಹಣ್ಣುಗಳ ಸೀಜನ್‌ನಲ್ಲಿ ಹಣ್ಣುಗಳು ಭರಪೂರವಾಗಿ ಮಾರಾಟವಾಗುತ್ತಿದ್ದವು. ಆದರೆ ಈ ವರ್ಷ ಅಂಥ ವ್ಯಾಪಾರವೇ ಇಲ್ಲ. ಈಗ ಇರುವ ಹಣ್ಣುಗಳನ್ನು ಖಾಲಿ ಮಾಡುವುದಾದರೂ ಹೇಗೆ ಎನ್ನುವುದೇ ಚಿಂತೆಯಾಗಿದೆ. ಇಂಥ ಸ್ಥಿತಿ ಎಂದೂ ಬಂದಿರಲಿಲ್ಲ.
 ಹನುಮವ್ವ ಹುಬ್ಬಳ್ಳಿ ಮಾವಿನ ಹಣ್ಣಿನ ವ್ಯಾಪಾರಿ

 ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next