Advertisement

ಕೋವಿಡ್‌ ತಡೆಗೆ ಸ್ವರಕ್ಷಣೆ ಅಗತ್ಯ

05:10 AM Jun 20, 2020 | Lakshmi GovindaRaj |

ಚಾಮರಾಜನಗರ: ಕೋವಿಡ್‌-19 ತಡೆಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ನಗರದಲ್ಲಿ ಆಚರಿಸಿದ ಮಾಸ್ಕ್ ದಿನ ಗಮನ ಸೆಳೆಯಿತು. ನಗರದ ಚಾಮರಾಜೆಶ್ವರ ದೇವಾಲಯದ ಮುಂದೆ ಆಯೋಜಿಸಿದ್ದ  ಆರೋಗ್ಯ ಜಾಗೃತಿ ಪಾದಯಾತ್ರೆಗೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಚಾಲನೆ ನೀಡಿದರು.

Advertisement

ಬಳಿಕ ಆರೋಗ್ಯ ಜಾಗೃತಿ ಪಾದಯಾತ್ರೆಯಲ್ಲಿ ಕೋವಿಡ್‌-19ರ ಮುಂಜಾಗ್ರತಾ ಕ್ರಮಗಳ ಪಾಲನೆ ಕುರಿತು ಭಿತ್ತಿಪತ್ರ ಹಿಡಿದು ಅಧಿಕಾರಿಗಳು ಪಾಲ್ಗೊಂಡಿದ್ದರು. ಶಾಸಕ ನಿರಂಜನಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ, ಜಿಪಂ ಸಿಇಒ ನಾರಾಯಣರಾವ್‌, ಎಸ್ಪಿ ಆನಂದಕುಮಾರ್‌ ಇತರ ಹಿರಿಯ ಅಧಿಕಾರಿಗಳು ಕಾಲ್ನಡಿಗೆಯಲ್ಲಿ ನಗರದ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿದರು.

ಕೋವಿಡ್‌ ನಿಯಂತ್ರಣಕ್ಕಾಗಿ ಜನರು ಮಾಸ್ಕ್ ಧರಿಸುವುದು, ಆಗಿಂದಾಗ್ಗೆ ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್‌ ಬಳಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಎಎಸ್ಪಿ ಅನಿತಾ, ಡಿಎಚ್‌ಒ ಡಾ.ಎಂ.ಸಿ ರವಿ, ತಹಶೀಲ್ದಾರ್‌ ಮಹೇಶ್‌,  ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next