Advertisement

ಸುರಕ್ಷತೆಯಿಂದ ಮಾತ್ರ ಕೋವಿಡ್ ತಡೆ ಸಾಧ್ಯ

05:13 PM Apr 10, 2021 | Team Udayavani |

ಬ್ಯಾಡಗಿ: ಕೋವಿಡ್ ತಡೆಗಟ್ಟಲುಸುರಕ್ಷತಾ ಕ್ರಮಗಳಿಂದ ಮಾತ್ರ ಸಾಧ್ಯ ಎಮದು ಹಾವೇರಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

Advertisement

ಹಾವೇರಿ ಜಿಲ್ಲಾ ಪೊಲೀಸ್‌, ಹಾವೇರಿ ಉಪವಿಭಾಗ ಹಾಗೂ ಬ್ಯಾಡಗಿ ಪೊಲೀಸ್‌ ಇಲಾಖೆ ವತಿಯಿಂದ ಪಟ್ಟಣದಲ್ಲಿ ನಡೆದ ಕೋವಿಡ್ ಜಾಗೃತಿ ಬೈಕ್‌ ಜಾಥಾದಲ್ಲಿ ಅವರುಮಾತನಾಡಿದರು. ಸಾರ್ವಜನಿಕರುಸ್ವಯಂ ಪ್ರೇರಿತರಾಗಿ ಮುಂಜಾಗ್ರತಾಕ್ರಮಗಳನ್ನು ಅನುಸರಿಸಿದಲ್ಲಿ ಮಾತ್ರಹೆಚ್ಚುತ್ತಿರುವ ಕೋವಿಡ್ ತಡೆಗಟ್ಟಲು ಸಾಧ್ಯ ಎಂದರು.

ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಳೆದೊಂದು ವರ್ಷದಿಂದ ಕೋವಿಡ್ ಹಾವಳಿಯಿಂದ ಜಗತ್ತುತಲ್ಲಣಿಸಿದೆ. ಭಾರತದಲ್ಲಿಯೇಇದಕ್ಕೆ ಲಸಿಕೆ ತಯಾರಿಸಲಾಗಿದ್ದು,ಇನ್ನೇನು ಕೋವಿಡ್ ದಿಂದ ಜಗತ್ತುಮುಕ್ತವಾಯಿತು ಎನ್ನುವಷ್ಟರಲ್ಲಿಎರಡನೇ ಅಲೆ ಆರಂಭವಾಗಿದ್ದುಆತಂಕದ ವಿಷಯ. ಈ ನಿಟ್ಟಿನಲ್ಲಿಸರಕಾರ ಸಾರ್ವಜನಿಕರ ಆರೋಗ್ಯದೃಷ್ಟಿಯಿಂದ ಕೆಲವು ನಿಯಮಗಳನ್ನುಜಾರಿಗೆ ತಂದಿದೆ. ಅವುಗಳ ಪಾಲನೆಮಾಡುವ ಮೂಲಕ ಸರಕಾರದಜೊತೆಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಜಾಥಾದಲ್ಲಿ ಡಿವೈಎಸ್‌ಪಿ ಶಂಕರಮಾರಿಹಾಳ, ಸಿಪಿಐ ಬಸವರಾಜಪಿ.ಎಸ್‌., ಹಾವೇರಿ ಶಹರದ ಸಿಪಿಐಪ್ರಲ್ಹಾದ ಚನ್ನಗಿರಿ, ಸಿಪಿಐ ಚಿದಾನಂದ,ಪಿಎಸ್‌ಐ ಮಾಹಾಂತೇಶ ಎಂ.ಎಂ.,ತಹಸೀಲ್ದಾರ್‌ ರವಿಕುಮಾರಕೊರವರ, ಪುರಸಭೆ ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಬ್ಯಾಡಗಿ ಹಾಗೂಕಾಗಿನೆಲೆ ಪೊಲೀಸ್‌ ಠಾಣೆ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next