Advertisement

ಕೋವಿಡ್‌ ತಡೆಗೆ ಎಲ್‌ಇಡಿ ಪರದೆ ಮೂಲಕ ಜಾಗೃತಿ

07:20 PM Nov 15, 2020 | Suhan S |

ಚಾಮರಾಜನಗರ: ಕೋವಿಡ್‌ ತಡೆ ಕುರಿತು ಆಧುನಿಕ ತಂತ್ರಜ್ಞಾನದ ಬೃಹತ್‌ ಎಲ್‌ಇಡಿ ಪರದೆಯ ವಾಹನಗಳಲ್ಲಿ ದೃಶ್ಯ-ಶ್ರಾವ್ಯದಮೂಲಕ ಜನಜಾಗೃತಿ ಮೂಡಿಸುವ ವಿಶೇಷಜಾಗೃತಿ ಪ್ರಚಾರ ಕಾರ್ಯಕ್ಕೆ ನಗರದಲ್ಲಿ ಶನಿವಾರ ಚಾಲನೆ ನೀಡಲಾಯಿತು.

Advertisement

ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದಕೋವಿಡ್‌ ತಡೆ ಸಂಬಂಧ ಆಯೋಜಿಸಲಾಗಿದ್ದ ವಿಶೇಷ ಜಾಗೃತಿ ಪ್ರಚಾರದ ಎಲ್‌ಇಡಿ ವಾಹನಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಹಸಿರು ನಿಶಾನೆ ತೋರಿದರು.

ಈ ವೇಳೆ ಮಾತನಾಡಿದ ಹೆಚ್ಚುವರಿಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌, ಜಿಲ್ಲೆಯನ್ನುಕೋವಿಡ್‌ ಮುಕ್ತಗೊಳಿಸುವ ನಿಟ್ಟಿನಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಎಲ್‌ಇಡಿವಾಹನಗಳ ಮೂಲಕ ಹಮ್ಮಿಕೊಳ್ಳಲಾಗಿದೆ. ಈ ಪ್ರಚಾರ ವಾಹನಗಳು 18 ದಿನಗಳ ಕಾಲಜಿಲ್ಲಾದ್ಯಂತ ಸಂಚರಿಸಿ ಜನರಲ್ಲಿಕೋವಿಡ್‌ ಬಗ್ಗೆ ಅರಿವು ಮೂಡಿಸಲಿವೆ ಎಂದರು.

ಕೊರೊನಾ ವೈರಸ್‌ ಹರಡದಂತೆ ಜನರು ವಹಿಸಬೇಕಿರುವ ಮುಂಜಾಗ್ರತಾ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಜಿಲ್ಲೆಯ 180 ಗ್ರಾಮಗಳಲ್ಲಿ ಪ್ರತಿದಿನ10 ಗ್ರಾಮಗಳಂತೆ ತಲಾ ಎರಡು ವಾಹನಗಳು ಎಲ್‌ಇಡಿ ಪರದೆಯ ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ಮುನ್ನೆಚ್ಚರಿಕ ವಹಿಸಬೇಕಾದ ಕ್ರಮಗಳ ಕುರಿತ ಚಿತ್ರಣವನ್ನು ಪ್ರದರ್ಶಿಸಿ ಜನಜಾಗೃತಿ ಮೂಡಿ ಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಯಾವುದೇ ಬಗೆಯ ಜ್ವರವಿದ್ದರೂ ಸಹ ಜನರು ಅತಂಕಕ್ಕೆ ಒಳಗಾಗದೇ ಆಸ್ಪತ್ರೆ ಹಾಗೂ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡು ತಾವು ಆರೋಗ್ಯವಾಗಿರುವದನ್ನು ಖಚಿತಪಡಿಸಿಕೊಳ್ಳಬೇಕು. ಮನೆ ಅಥವಾ ಮನೆಯ ಹೊರಗಡೆ

Advertisement

ಇದ್ದರೂ ಸಹ ಜನತೆ ಕಡ್ಡಾಯವಾಗಿ ಮಾಸ್ಕ್ಧರಿಸಬೇಕು. ಸ್ಯಾನಿಟೈಸ್‌ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋವಿಡ್‌ ವಿರುದ್ಧ ಹೋರಾಟಕ್ಕೆ ಮುಂದಾಬೇಕು. ಜನರು ಜಾಗೃತರಾಗುವುದಲ್ಲದೇ ಇತರರನ್ನೂ ಜಾಗೃತಗೊಳಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಎ.ರಮೇಶ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಪನಿರ್ದೇಶಕ ಬಸವರಾಜು, ಪೊಲೀಸ್‌ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next