ಹೊನ್ನಾಳಿ: ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಕೋವಿಡ್ ಜಾಗೃತಿ ಮೂಡಿಸಿದರು.
ಪೊಲೀಸ್ ಠಾಣೆಯಿಂದ ಪ್ರಾರಂಭವಾದ ಜಾಥಾ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ತುಮ್ಮಿನಕಟ್ಟೆ ರಸ್ತೆ, ಕೆನರಾ ಬ್ಯಾಂಕ್, ದುರ್ಗಿಗುಡಿ ಸರ್ಕಲ್, ಕುರಿ ಮಾರುಕಟ್ಟೆ ಹಾಗೂ ನ್ಯಾಮತಿ ರಸ್ತೆಗಳಲ್ಲಿ ಸಂಚರಿಸಿತು. ಜಾಥಾದುದ್ದಕ್ಕೂ ಮಾಸ್ಕ್ ಧರಿಸದವರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ, ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.
ಸಿಪಿಐ ದೇವರಾಜ್ ಮಾತನಾಡಿ, ಕೇವಲ ಸರ್ಕಾರಿ ಅಧಿಕಾರಿಗಳು ಮಾತ್ರ ಕೊರೊನಾ ವಿರುದ್ಧ ಜಾಗೃತಿಮೂಡಿಸಿದರೆ ಸಾಲದು, ಸಾರ್ವಜನಿಕರು ಸಹ ನಮ್ಮ ಜೊತೆಕೈಜೋಡಿಸಬೇಕು. ಆಗ ಮಾತ್ರ ಕೋವಿಡ್ ಸೋಂಕು ಕಡಿಮೆಯಾಗಬಹುದು. ಈ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಇರಬೇಕು ಎಂದರು. ಇನ್ನು ಮುಂದೆ ಮಾಸ್ಕ್ ದರಿಸದವರಿಗೆ ದಮಡ ವಿಧಿಸಲಾಗುವುದು. ಯಾರ ಮುಲಾಜಿಗೂ ನಾವುಒಳಗಾಗುವುದಿಲ್ಲ, ಬೈಕ್ ಸವಾರರು ಸಹ ಮಾಸ್ಕ್ ಧರಿಸಿರಬೇಕು, ಸುಖಾಸುಮ್ಮನೆ ಪಟ್ಟಣಕ್ಕೆ ಬಂದರೆ ಅಂತಹವರ ವಿರುದ್ಧ ಸಹ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ತುಷಾರ್ ಬಿ. ಹೊಸೂರು ಮಾತನಾಡಿ, ಅವಳಿ ತಾಲೂಕಿನ ಹಲವು ಪ್ರಮುಖ ಸ್ಥಳಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ, ಸಾರ್ವಜನಿಕರು ತಮ್ಮ ಸಮೀಪ ಇರುವ ಪ್ರಮುಖ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಮಾತನಾಡಿ, ಈವರೆಗೆ ಅವಳಿ ತಾಲೂಕಿನಲ್ಲಿ 2610 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು,ಅವರಲ್ಲಿ 2485 ಕೋವಿಡ್ ಸೋಂಕಿತರು ವಾಸಿಯಾಗಿ ಮನೆಗಳಿಗೆ ತೆರಳಿದ್ದಾರೆ. 66 ಪ್ರಕರಣಗಳು ಸಕ್ರೀಯವಾಗಿವೆ. ಅವಳಿ ತಾಲೂಕಿನಲ್ಲಿ 59 ಜನ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದರು. ಪಿಎಸ್ ಐ ತಿಪ್ಪೇಸ್ವಾಮಿ ಮಾತನಾಡಿದರು.
ಎಎಸ್‌ಐ ಮಾಲ್ತೇಶ್, ಮುಖ್ಯಪೇದೆಗಳಾದ ದೊಡ್ಡಬಸಪ್ಪ, ಹರೀಶ್, ಪ.ಪಂ.ನ ನಾಗೇಶ್, ರವಿಕುಮಾರ್ ಹಾಗೂ ಇತರರು ಇದ್ದರು.