Advertisement

ಭೂಕೋಡಿಹಳ್ಳಿಯಲ್ಲಿ ಕೋವಿಡ್ ಜಾಗೃತಿ-ಮಾಸ್ಕ್ ವಿತರಣೆ

05:21 AM May 17, 2020 | Team Udayavani |

ಹಾವೇರಿ: ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಉನ್ನತ ಭಾರತ ಅಭಿಯಾನ ಮತ್ತು ಎನ್‌ಎಸ್‌ಎಸ್‌ ಘಟಕಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಭೂಕೋಡಿಹಳ್ಳಿ ಗ್ರಾಮದಲ್ಲಿ ಕೋವಿಡ್ ಮಹಾಮಾರಿ ರೋಗದ ಕುರಿತಾಗಿ ಅರಿವು ಕಾರ್ಯಕ್ರಮ ನಡೆಯಿತು.

Advertisement

ಗ್ರಾಮಸ್ಥರು ಕೋವಿಡ್ ಸೋಂಕು ಹರಡದಂತೆ ವಹಿಸಬೇಕಾದ ಮುಂಜಾಗ್ರತಾ ಕ್ರಮ, ಶುದ್ಧ ಪರಿಸರ ನಿರ್ಮಾಣ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಲಾಯಿತು. ಪ್ರಾಚಾರ್ಯ ಡಾ| ಎಂ.ಎಸ್‌. ಯರಗೊಪ್ಪ, ಪ್ರೊ| ಮಲ್ಲಿಕಾರ್ಜುನಪ್ಪ ಬಿ.ಎಂ., ಡಾ| ಸಿ. ಮಲ್ಲಣ್ಣ, ಡಾ| ಎಸ್‌.ಆರ್‌. ಕೋರಿಶೆಟ್ಟರ್‌, ಪ್ರೊ| ಶಿವಯೋಗಿ ಅಂಗಡಿ, ಪ್ರೊ| ರಮೇಶ ನಾಯ್ಕ, ಪ್ರೊ| ಎಸ್‌.ಎಸ್‌. ಸಣ್ಣಶಿವಣ್ಣವರ, ಸ್ವಯಂಸೇವಕರಾದ ಮಂಜು ಗಾಣಿಗೇರ, ಕರಿಯಪ್ಪ ಕಂಬಳಿ, ಬಸವರಾಜ ಬ್ಯಾಡಗಿ, ಹರೀಶ ಶಿರಸಪ್ಪನವರ, ಯಲ್ಲಪ್ಪ ಉಟೇಲನವರ ಹಾಗೂ ಗ್ರಾಮದ ನಾಗರಿಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next