Advertisement

ಕುರುಬರ ಸಂಘದಿಂದ ಕೋವಿಡ್ ಜಾಗೃತಿ

11:54 AM Jun 08, 2020 | Suhan S |

ಬಾಗಲಕೋಟೆ: ಕೋವಿಡ್ ವೈರಸ್‌ ತಡೆಗಟ್ಟುವಲ್ಲಿ ಸಂಘಟನೆಯವರು ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಡಿ.ಬಿ. ಸಿದ್ದಾಪುರ ಹೇಳಿದರು.

Advertisement

ರಾಂಪುರದಲ್ಲಿ ಅಖೀಲ ಕರ್ನಾಟಕ ಯುವ ಕುರುಬರ ಸಂಘದಿಂದ ನಡೆದ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧ್ಯಕ್ಷ ಆರ್‌.ಬಿ ಜಾನಮಟ್ಟಿ ಮಾತನಾಡಿ, ಕೋವಿಡ್ ವೈರಸ್‌ ದೇಶದಲ್ಲಿ ಅತಿ ಹೆಚ್ಚಾಗುತ್ತರುವುದರಿಂದ ಜನರು ಸ್ವಯಂ ಪ್ರೇರಿತವಾಗಿ ಜಾಗೃತರಾಗಬೇಕಾಗಿದೆ. ಸರ್ಕಾರ ಜನತೆಗೆ ಅವಶ್ಯಕತೆ ಇರುವ ಕಡೆ ಮಾತ್ರ ಪ್ರಮಾಣ ಮಾಡಲು ಅನುವು ಮಾಡಿ ಕೊಟ್ಟಿದೆ. ಜನರು ಹೊರಗೆ ಹೋಗುವಾಗ ಹೊರಗೆ ಬರುವ ಮುಖಕ್ಕೆ ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್‌ ಬಳಸಬೇಕು. ಇದರಿಂದ ಕೋವಿಡ್ ಹೋಗಲಾಡಿಸುವಲ್ಲಿ ಹೊರಾಡಿದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಾಧ್ಯಕ್ಷ ಅನೀಲ ಮೇಟಿ ಮಾತನಾಡಿ, ಕೋವಿಡ್ ವೈರಸ್‌ ಇದು ರೋಗವಲ್ಲ ತಯಾರು ಮಾಡಿದ ವೈರಸ್‌ ಹಾಗಾಗಿ ಜನರಿಗೆ ಭಯ ಹುಟ್ಟಿಸುಂತಾಗಿದೆ. ಜನರಲ್ಲಿ ಭಯ ಬೇಡ ಎಚ್ಚರಿಕೆಯಿಂದ ಈ ವೈರಸ್‌ನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಬೇಕಿದೆ ಎಂದರು.

ವಿಠಲ ಉಪನಾಳ, ರವಿ ಒಡ್ಡೋಡಗಿ, ಮಲ್ಲು ವಡಗೆರಿ ಲಕ್ಷ್ಮಣ ಪುಂಡೆ, ರಮೇಶ ಬಗನ್ನವರ, ಹನುಮಂತ ಬಿಲ್ಲಾರ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next