Advertisement

ಜೇಮ್ಸ್ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

11:45 AM Nov 18, 2020 | sudhir |

ಗಂಗಾವತಿ: ವಿಶ್ವವನ್ನು ಕಾಡುತ್ತಿರುವ ಕೋವಿಡ್ ರೋಗದ ಹರಡುವಿಕೆಯನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಖ್ಯಾತ ಚಿತ್ರನಟ ಪವರ್ ಸ್ಟಾರ್ ಪುನೀತರಾಜಕುಮಾರ್ ಜಾಗೃತಿ ಮೂಡಿಸಿದರು.

Advertisement

ಅವರು ತಾಲೂಕಿನ ಮಲ್ಲಾಪೂರ ವಾಣೀಭದ್ರೇಶ್ವರ ಬೆಟ್ಟದಲ್ಲಿ ಜೇಮ್ಸ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಆಯೋಜಿಸಿದ್ದ ಕೋವಿಡ್ ಜನಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.

ದಿನ ನಿತ್ಯದ ಕೆಲಸಗಳ ಜತೆಗೆ ಸಾರ್ವಜನಿಕರು ಜಾಗೃತಿಯಿಂದ ಮಾಸ್ಕ್ ಧರಿಸಬೇಕು. ಸ್ಯಾನಿಟೈಜರ್ ಬಳಕೆ ಸಾಮಾಜಿಕ ಅಂತರ ಕಾಪಾಡಬೇಕು. ಹೆಚ್ಚು ಜನ‌ ಗುಂಪು ಕೂಡಬಾರದು ಕೊರೊನಾ ರೋಗದ ಬಗ್ಗೆ ನಿರ್ಲಕ್ಷ್ಯ ಮಾಡದೇ ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಇದನ್ನೂ ಓದಿ:ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

ಗ್ರಾಮೀಣ ಪಿಎಸ್ಐ ಜೆ.ದೊಡ್ಡಪ್ಪ ಸೇರಿ ಇತರ ಪೊಲೀಸರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next