Advertisement

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

01:43 AM Oct 18, 2021 | Team Udayavani |

ಮಂಗಳೂರು: ಕೋವಿಡ್‌ 2ನೇ ಅಲೆಯ ಬಳಿಕ ಲಾಕ್‌ ತೆರವಾದ ಬಳಿಕ ಸ್ವರ್ಣಾಭರಣ ವ್ಯವಹಾರ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

Advertisement

ಕಳೆದ ಮೇ ಮತ್ತು ಜೂನ್‌ನಲ್ಲಿ 2 ತಿಂಗಳ ಲಾಕ್‌ಡೌನ್‌ ಬಳಿಕ ಜುಲೈನಲ್ಲಿ ಚಿನ್ನಾಭರಣ ಮಳಿಗೆಗಳನ್ನು ತೆರೆಯಲು ಸರಕಾರ ಅನುಮತಿ ನೀಡಿದ್ದರೂ, ಈ ಅವಕಾಶ ಹೆಚ್ಚು ದಿನಗಳಿಗೆ ಲಭಿಸಿಲ್ಲ; ಮೂರು ವಾರಗಳಲ್ಲಿ ಮತ್ತೆ ಕರ್ಫ್ಯೂ ಜಾರಿಯಾಗಿ ಚಿನ್ನಾಭರಣ ಮಳಿಗೆಗಳನ್ನು ಪುನಃ ಮುಚ್ಚ ಬೇಕಾಗಿ ಬಂದಿತ್ತು. ಆ ಬಳಿಕ ಇದೀಗ ಸೆಪ್ಟಂಬರ್‌ನಲ್ಲಿ ಚಿನ್ನಾಭರಣ ಮಳಿಗೆ ತೆರೆದಿಟ್ಟು ವ್ಯವಹಾರ ನಡೆಸಲು ಅವಕಾಶ ಲಭಿಸಿದೆ. ಈ ಹಿನ್ನೆಲೆಯಲ್ಲಿ ವ್ಯವಹಾರ ನಿಧಾನವಾಗಿ ಚೇತರಿಸುತ್ತಿದೆ.

ಪ್ರಸ್ತುತ ಚಿನ್ನದ ಬೆಲೆ ತಕ್ಕ ಮಟ್ಟಿಗೆ ಇದ್ದು, ಗ್ರಾಹ ಕರು ಅಗತ್ಯಕ್ಕೆ ತಕ್ಕಂತೆ ಖರೀದಿಸು ತ್ತಿದ್ದಾರೆ. ಇದು ಸ್ವರ್ಣೋದ್ಯಮ ಕ್ಷೇತ್ರದಲ್ಲಿ ವ್ಯಾಪಾರ ವೃದ್ಧಿ ಸುವ ನಿರೀಕ್ಷೆ ಮೂಡಿಸುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 132 ಹಾಗೂ ಉಡುಪಿ ಜಿಲ್ಲೆಯಲ್ಲಿ 150 ಮಂದಿ ನೋಂದಾಯಿತ ಸ್ವರ್ಣ ವ್ಯಾಪಾರಿಗಳಿದ್ದಾರೆ.

ಇತ್ತೀಚೆಗಷ್ಟೇ ಚಿನ್ನಾಭರಣ ವ್ಯವಹಾರ ಪುನರಾರಂಭಗೊಂಡಿದ್ದು, 4 ತಿಂಗಳ ಬ್ಯಾಕ್‌ಲಾಗ್‌ ವ್ಯವ‌ಹಾರ ಈಗ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯವಹಾರ ಕಡಿಮೆ. ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ಶೇ. 25ರಷ್ಟು ವ್ಯವಹಾರ ಕಡಿಮೆಯಾಗಿದ್ದರೆ ಈ ವರ್ಷ ಸುಮಾರು ಶೇ. 40ರಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ ಎನ್ನುವುದು ಸ್ವರ್ಣಾಭರಣ ವ್ಯಾಪಾರಿಗಳ ಅಭಿಪ್ರಾಯ.

ಚಿನ್ನಾಭರಣ ಖರೀದಿಗೆ ಸಕಾಲ
ಆದರೆ ಚಿನ್ನಾಭರಣ ಖರೀದಿಸುವವರಿಗೆ ಈಗ ಸಕಾಲ ಎನ್ನ ಬಹುದು. ಏಕೆಂದರೆ ಚಿನ್ನದ ಬೆಲೆ ಈಗ ಕಡಿಮೆಯಾಗಿದೆ. ಕಳೆದ ಜೂನ್‌ನಲ್ಲಿ ಚಿನ್ನದ ಬೆಲೆ ಗ್ರಾಂ ಗೆ 5,200 ರೂ. ದಾಟಿತ್ತು. ಈಗ ಒಂದು ಗ್ರಾಂ ಚಿನ್ನಕ್ಕೆ 700ರಿಂದ 800 ರೂ.ಗಳಷ್ಟು ಕಡಿಮೆಯಾ ಗಿದ್ದು, 4,500 ರೂ. ಹಂತದಲ್ಲಿದೆ.

Advertisement

ಭಾರತದಲ್ಲಿ ಚಿನ್ನದ ಬೆಲೆ ವಾರ್ಷಿಕವಾಗಿ ಶೇ. 7ರಿಂದ 8ರಷ್ಟು ಏರಿಕೆ ಆಗುತ್ತಿದೆ. ಕೆಲವು ಬಾರಿ ಕಡಿಮೆಯೂ ಆಗುತ್ತದೆ. ಹಣ ದುಬ್ಬರಕ್ಕೆ ಅನುಗುಣವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗು ತ್ತಿರುತ್ತದೆ. ಹಾಗಾಗಿ ಈಗ ಚಿನ್ನ ಖರೀದಿದಾರರಿಗೆ ಬೆಲೆ ದೊಡ್ಡ ಸಮಸ್ಯೆಯಲ್ಲ. ಸ್ವರ್ಣಾಭರಣ ವ್ಯಾಪಾರದಲ್ಲಿ ನಷ್ಟ ಎಂಬುದಿಲ್ಲ ಎನ್ನುವುದು ಚಿನ್ನಾಭರಣ ವ್ಯಾಪಾರಿಗಳ ಅಭಿಪ್ರಾಯ.

ಇದನ್ನೂ ಓದಿ:ಆರ್​​ಎಸ್​ಎಸ್​​​  ಬಾಂಬ್ ಹಾಕುವವರನ್ನ ತಯಾರು ಮಾಡುವುದಿಲ್ಲ : ಗೃಹ ಸಚಿವ ಆರಗ ಜ್ಞಾನೇಂದ್ರ

ಅಗತ್ಯಕ್ಕೆ ಬೇಕಿರುವಷ್ಟು ಮಾತ್ರ ಖರೀದಿ
ಅನ್‌ಲಾಕ್‌ ಬಳಿಕ ಇದೀಗ ಮದುವೆ, ನಿಶ್ಚಿತಾರ್ಥ, ಸೀಮಂತ, ಮಗುವಿನ ನಾಮಕರಣ ಮತ್ತಿತರ ಶುಭ ಸಮಾರಂಭಗಳು ನಡೆಯುತ್ತಿವೆ. ಹಬ್ಬಗಳ ಸೀಸನ್‌ ಕೂಡ ಆರಂಭವಾಗಿದೆ. ಆದರೂ ಚಿನ್ನದ ಮಾರುಕಟ್ಟೆಯನ್ನು ಗಮನಿಸಿದರೆ, ಜನರು ತಮಗೆ ಅಗತ್ಯ ಇರುವಷ್ಟು ಪ್ರಮಾಣದ ಚಿನ್ನವನ್ನು ಮಾತ್ರ ಖರೀದಿಸುತ್ತಿದ್ದಾರೆ.

ಅನಗತ್ಯವಾಗಿ ಅಥವಾ ಹೆಚ್ಚುವರಿಯಾಗಿ ಚಿನ್ನ ಖರೀದಿ ಮಾಡುವ ವರ ಸಂಖ್ಯೆ ಕಡಿಮೆ. ಕೆಲವು ಮಂದಿ ಸ್ಥಿತಿವಂತರು ಹೂಡಿಕೆಗಾಗಿಯೂ ಚಿನ್ನ ಖರೀದಿ ಮಾಡುತ್ತಿದ್ದಾರೆ.

ವ್ಯವಹಾರ ಇನ್ನೂ ಯಥಾ ಸ್ಥಿತಿಗೆ ಬಾರದಿರಲು ಮುಖ್ಯ ಕಾರಣ ಕೋವಿಡ್‌. ಒಂದೆಡೆ ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿ ಸರಕಾರದ ನಿಯಮಾವಳಿಗಳಲ್ಲಿ ಪೂರ್ತಿ ಸಡಿಲಿಕೆ ಇನ್ನೂ ಆಗಿಲ್ಲ. ನೈಟ್‌ ಕರ್ಫ್ಯೂ ಇನ್ನೂ ಮುಂದು ವರಿದಿದೆ. ಅಂತಾರಾಜ್ಯ ಸಂಚಾರದ ಮೇಲಣ ಷರತ್ತು ಗಳು ಇನ್ನೂ ಚಾಲ್ಲಿಯಲ್ಲಿವೆ. ಅಧಿಕ ಜನ ಸೇರುವ ಬಗೆಗಿನ ನಿರ್ಬಂಧಗಳು, ಸಾಮಾಜಿಕ ಅಂತರ ಪಾಲನೆ ಮುಂದು ವರಿಯುತ್ತಿದೆ. ಇನ್ನೊಂದು ಕಡೆ ಜನರ ಕೈಯಲ್ಲಿ ಹಣವೂ ಸಾಕಷ್ಟು ಪ್ರಮಾಣದಲ್ಲಿ ಇಲ್ಲ. ಬಹಳಷ್ಟು ಜನರು ಕೊರೊನಾ ಹಾವಳಿಯ ತತ್ತರಿಕೆಯಿಂದ ಇನ್ನೂ ನಲುಗುವ ಸ್ಥಿತಿ ಯಲ್ಲಿಯೇ ಇದ್ದಾರೆ. ಹಾಗಾಗಿ ಅಂಥವರು ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಇನ್ನೂ ದೂರವೇ ಇದ್ದಾರೆ.

ವ್ಯಾಪಾರ ತೀರಾ ಕಡಿಮೆಯಾಗಿಲ್ಲ
ಚಿನ್ನದ ವ್ಯಾಪಾರ ತೀರಾ ಕಡಿಮೆ ಆಗಿಲ್ಲ; ಮದುವೆ, ನಿಶ್ಚಿತಾರ್ಥ, ಸೀಮಂತ, ನಾಮಕರಣ ಮತ್ತಿತರ ಶುಭ ಸಮಾರಂಭಗಳಿಗೆ ಅಗತ್ಯ ಇರುವಷ್ಟು ಚಿನ್ನವನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ.
– ಪ್ರಶಾಂತ್‌ ಶೇಟ್‌,
ಕಾರ್ಯದರ್ಶಿ, ದ.ಕ. ಸ್ವರ್ಣ ವ್ಯಾಪಾರಿಗಳ ಸಂಘ

ಹಬ್ಬಗಳ ಸೀಸನ್‌ನಲ್ಲಿ ಚೇತರಿಕೆ
ಕಳೆದ ವರ್ಷ ಕೋವಿಡ್‌ದಿಂದ ವ್ಯಾಪಾರ ಬಹಳ ಕಡಿಮೆ ಇತ್ತು. ಅನ್‌ಲಾಕ್‌ ಬಳಿಕ ವ್ಯವಹಾರ ಚೇತರಿಕೆ ಕಂಡರೂ ಪೂರ್ಣ ವಾಗಿ ಚೇತರಿಕೆ ಕಾಣು ವಷ್ಟರಲ್ಲಿ ಮತ್ತೆ ಲಾಕ್‌ಡೌನ್‌ ಬಂತು. ಈಗ ತಕ್ಕ ಮಟ್ಟಿಗೆ ವ್ಯಾಪಾರ ಆಗು ತ್ತಿದೆ. 2019ನೇ ವರ್ಷಕ್ಕೆ ಹೋಲಿಸಿದರೆ ಸರಿ ಸುಮಾರು ಶೇ. 40ರಷ್ಟು ವ್ಯಾಪಾರ ಕಡಿಮೆ ಇದೆ. ಮುಂದೆ ಹಬ್ಬಗಳ ಸೀಸನ್‌ನಲ್ಲಿ ಪೂರ್ಣ ಚೇತರಿಕೆ ‌ ನಿರೀಕ್ಷೆ ಇದೆ.
– ಅಗಸ್ಟಿನ್‌, ಮಂಗಳೂರಿನ ಚಿನ್ನಾಭರಣ ಮಳಿಗೆಯ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next