ನವದೆಹಲಿ: ಕೋವಿಡ್ 19 ಎರಡನೇ ಅಲೆಯಲ್ಲಿ ದೇಶಾದ್ಯಂತ 719 ವೈದ್ಯರು ಸಾವನ್ನಪ್ಪಿದ್ದು, ಇದರಲ್ಲಿ ಅತೀ ಹೆಚ್ಚು ಸಾವು ಬಿಹಾರದಲ್ಲಿ ಸಂಭವಿಸಿರುವುದಾಗಿ ಭಾರತೀಯ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಶನಿವಾರ(ಜೂನ್ 12) ತಿಳಿಸಿದೆ.
ಇದನ್ನೂ ಓದಿ:ದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶ ಇಲ್ಲ: ಶಾಸಕ ಅರವಿಂದ ಬೆಲ್ಲದ
ಐಎಂಎ ಮಾಹಿತಿ ಪ್ರಕಾರ, ಬಿಹಾರದಲ್ಲಿ 111 ಮಂದಿ ವೈದ್ಯರು, ದೆಹಲಿಯಲ್ಲಿ 109 ಮಂದಿ ವೈದ್ಯರು ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿರುವುದಾಗಿ ವಿವರಿಸಿದೆ. ಉತ್ತರಪ್ರದೇಶದಲ್ಲಿ 79, ಪಶ್ಚಿಮಬಂಗಾಳದಲ್ಲಿ 63 ಮತ್ತು ರಾಜಸ್ಥಾನದಲ್ಲಿ 43 ವೈದ್ಯರು ಸಾವನ್ನಪ್ಪಿರುವುದಾಗಿ ಐಎಂಎ ತಿಳಿಸಿದೆ.
ಜಾರ್ಖಂಡ್ ನಲ್ಲಿ 39, ಕರ್ನಾಟಕದಲ್ಲಿ 09, ಕೇರಳದಲ್ಲಿ 24, ಮಹಾರಾಷ್ಟ್ರದಲ್ಲಿ 23, ಒಡಿಶಾದಲ್ಲಿ 28, ತಮಿಳುನಾಡಿನಲ್ಲಿ 32, ತೆಲಂಗಾಣದಲ್ಲಿ 36 ಮಂದಿ ವೈದ್ಯರು ಸಾವನ್ನಪ್ಪಿರುವುದಾಗಿ ಐಎಂಎ ವರದಿ ಹೇಳಿದೆ.
ಜೂನ್ 7ರಂದು ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ವೈದ್ಯಕೀಯ ವೃತ್ತಿಪರರ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ವೈದ್ಯ ಮಂಡಳಿ ಮುಂದಿಟ್ಟ ಮನವಿಯನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿಕೊಂಡಿತ್ತು.