Advertisement
ಈ ಹಿಂದೆ ಸೋಂಕು ಲಕ್ಷಣ ಇಲ್ಲದವರು ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌ನಿಂದ ಬಿಡುಗಡೆಯಾದ ಬಳಿಕ ಕಡ್ಡಾಯವಾಗಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಿತ್ತು. ಸದ್ಯ ಏಳು ದಿನಗಳ ಐಸೊಲೇಶನ್‌ಗೆ ಸೂಚಿಸಲಾಗಿದೆ. 14 ದಿನಗಳ ಹೋಂ ಕ್ವಾರಂಟೈನ್ ನಿಯಮ ಕೈಬಿಡಲಾಗಿದೆ.
ಸೋಂಕು ಲಕ್ಷಣ ಇಲ್ಲದ ಮತ್ತು ಅಲ್ಪ ಪ್ರಮಾಣದ ಲಕ್ಷಣ ಹೊಂದಿರುವ ಪ್ರಕರಣಗಳಲ್ಲಿ ಪರೀಕ್ಷೆ ನಡೆದ ದಿನದಿಂದ 10ನೇ ದಿನಕ್ಕೆ ಬಿಡುಗಡೆ ಮಾಡಲು ಸೂಚಿಸಲಾಗಿದೆ. ಹಿಂದೆ ಸೋಂಕುಪೀಡಿತರು ಆಸ್ಪತ್ರೆ, ಕೊರೊನಾ ಕೇರ್ ಸೆಂಟರ್‌ಗೆ ದಾಖಲಾಗಿ 10 ದಿನದ ಬಳಿಕ ಬಿಡುಗಡೆ ಮಾಡಲಾಗುತ್ತಿತ್ತು. ಬಿಡುಗಡೆ ವೇಳೆ ಸೋಂಕು ಪರೀಕ್ಷೆ ಅಗತ್ಯವಿಲ್ಲ ಎಂದು ಮತ್ತೂಮ್ಮೆ ಸ್ಪಷ್ಟಪಡಿಸಲಾಗಿದೆ. ಒಂದು ವೇಳೆ ಬಿಡುಗಡೆ ಬಳಿಕ ಲಕ್ಷಣ ಕಾಣಿಸಿಕೊಂಡರೆ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದೆ. ಆರಂಭದಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಗುಣಮುಖರಾದವರಿಗೆ ಕೊನೆಯ ಮೂರು ದಿನ ಸೋಂಕು ಲಕ್ಷಣ ಇಲ್ಲದಿದ್ದರೆ 10ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು. ಒಂದು ವೇಳೆ 14 ದಿನ ಸೋಂಕು ಲಕ್ಷಣ ಇದ್ದರೆ ಮೂರು ದಿನಗಳ ಬಳಿಕ, ಅಂದರೆ 17ನೇ ದಿನ ಸೋಂಕು ಪರೀಕ್ಷೆ ಮಾಡದೆ ಬಿಡುಗಡೆ ಮಾಡಬಹುದು. ಸೋಂಕುಪೀಡಿತರ ಬಿಡುಗಡೆಗೆ ಮುನ್ನ ಮೂರು ದಿನ ಸೋಂಕಿನ ಲಕ್ಷಣವಿರಬಾರದು. ಉಳಿದಂತೆ ಎಚ್‌ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕುಪೀಡಿತರಿಗೆ ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
Related Articles
ಸೋಂಕು ದೃಢಪಟ್ಟು ಲಕ್ಷಣ ಇಲ್ಲದೆ ಮನೆಯಲ್ಲಿಯೇ ಆರೈಕೆಯಲ್ಲಿದ್ದರೆ ಅದನ್ನು “ಹೋಂ ಕೇರ್’ ಎಂದು ನಮೂದಿಸಬೇಕು. ಲಕ್ಷಣ ಕಾಣಿಸಿಕೊಂಡ ಅನಂತರದ ಹತ್ತು ದಿನ ಅಥವಾ ಪರೀಕ್ಷೆಗೆ ಒಳಗಾದ ಅನಂತರದ 10 ದಿನ ಹೋಂ ಕೇರ್‌ನಲ್ಲಿರಬೇಕು. ಅನಂತರ 7 ದಿನ ಹೋಂ ಐಸೊಲೇಶನ್‌ನಲ್ಲಿರಬೇಕು. ಜತೆಗೆ 60 ವರ್ಷ ಮೇಲ್ಪಟ್ಟ ಸೋಂಕುಪೀಡಿತರಿಗೂ ವೈದ್ಯರ ತಪಾಸಣೆ ಬಳಿಕ ಹೋಂ ಕೇರ್‌ಗೆ ಅವಕಾಶ ನೀಡಲಾಗಿದೆ. ಸೋಂಕುಪೀಡಿತ ಗರ್ಭಿಣಿಯರು ಹೆರಿಗೆ ದಿನಾಂಕದ ಎರಡು ವಾರದ ವರೆಗೆ ಹೋಂ ಕೇರ್‌ನಲ್ಲಿರಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
Advertisement
ವ್ಯತ್ಯಾಸ ಏನು?ಕ್ವಾರಂಟೈನ್ ಎಂದರೆ ಸೋಂಕುಪೀಡಿತನ ಸಂಪರ್ಕ, ಸೋಂಕು ಲಕ್ಷಣ ಇದ್ದಾಗ ಬಾಹ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧ್ಯವಾಗಬಾರದು ಎಂದು ಮನೆಯಲ್ಲಿಯೇ ಇರುವುದು. ಸ್ವಯಂ ಐಸೊಲೇಶನ್ ಎಂದರೆ ಮನೆಯಲ್ಲಿ ಆರೈಕೆಯಲ್ಲಿರುವ ಜತೆಗೆ ಸ್ವಯಂ ಆರೋಗ್ಯದ ಮೇಲೆ ನಿಗಾ ವಹಿಸುವುದು ಎಂದರ್ಥ ಎಂದು ಆರೋಗ್ಯ ಇಲಾಖೆ ವೈದ್ಯರು ತಿಳಿಸಿದ್ದಾರೆ.