Advertisement

3ನೇ ಅಲೆಯ ತೀವ್ರತೆ ಕಡಿಮೆ?

11:50 PM Jul 15, 2021 | Team Udayavani |

ಹೊಸದಿಲ್ಲಿ: ಆಗಸ್ಟ್‌ ಅಂತ್ಯದ ವೇಳೆಗೆ ದೇಶಕ್ಕೆ ಕೊರೊನಾ 3ನೇ ಅಲೆ ಅಪ್ಪಳಿಸಲಿದ್ದು, ಇದು ಎರಡನೇ ಅಲೆಯಷ್ಟು ಭೀಕರವಾಗಿರುವ ಸಾಧ್ಯತೆ ಕಡಿಮೆ ಎಂದು ಭಾರತೀಯ ವೈದ್ಯಕೀಯ ಸಂಶೋ­ಧನ ಮಂಡಳಿ(ಐಸಿಎಂಆರ್‌) ಹೇಳಿದೆ.

Advertisement

ಮೊದಲ ಮತ್ತು 2ನೇ ಅಲೆಯಲ್ಲಿ ಗಳಿಸಿದ ರೋಗನಿರೋಧಕ ಶಕ್ತಿಯು ಈಗ ಕುಗ್ಗಿರುವುದು, ಕೊರೊನಾದ ಹೊಸ ರೂಪಾಂತರಿಯು ವೇಗವಾಗಿ ಹಬ್ಬುತ್ತಿರುವುದು, ನಿರ್ಬಂಧಗಳು ತೆರವಾಗಿರುವುದು ಮತ್ತಿತರ ಕಾರಣಗಳಿಂದಾಗಿ ರಾಷ್ಟ್ರಮಟ್ಟದಲ್ಲಿ 3ನೇ ಅಲೆ ವ್ಯಾಪಿಸುವುದಂತೂ ಖಚಿತ. ಹಾಗೆಂದು ಅದರ ಅಬ್ಬರ ಹೆಚ್ಚಿರುತ್ತದೆ ಎಂದು ಹೇಳ­ಲಾಗದು ಎಂದು ಐಸಿಎಂಆರ್‌ ಹೇಳಿದೆ.

ಜಾಗತಿಕ ಪ್ರಕರಣ ಹೆಚ್ಚಳ: 3ನೇ ಅಲೆ ಭೀತಿಯ ನಡುವೆಯೇ, ಜಾಗತಿಕ ಕೊರೊನಾ ಪ್ರಕರಣ, ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸಾವಿನ ಪ್ರಮಾಣ ಶೇ.3ರಷ್ಟು ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ ಶೇ.10ರಷ್ಟು ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲಿ ಬುಧವಾರದಿಂದ ಗುರುವಾರಕ್ಕೆ 41,806 ಪ್ರಕರಣಗಳು ಪತ್ತೆಯಾಗಿ, 581 ಮಂದಿ ಮೃತಪಟ್ಟಿದ್ದಾರೆ.

20 ಮಕ್ಕಳಿಗೆ ಪಾಸಿಟಿವ್‌: ಪುದುಚೇರಿಯಲ್ಲಿ ಗುರುವಾರ ಒಂದೇ ದಿನ 20 ಮಕ್ಕಳಿಗೆ ಕೊರೊನಾ ಪಾಸಿಟಿವ್‌ ಆಗಿದ್ದು, ಎಲ್ಲ ಮಕ್ಕಳನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಕೇರಳದಲ್ಲಿ ಮತ್ತೆ 5 ಮಂದಿಗೆ ಝೀಕಾ ವೈರಸ್‌ ತಗುಲಿದ್ದು, ಝೀಕಾ ಪ್ರಕರಣಗಳ ಸಂಖ್ಯೆ 28ಕ್ಕೇರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next