Advertisement

ಮೂರನೇ ಅಲೆ ಭೀತಿ: ಎಲ್ಲೆಡೆ ಕಟ್ಟೆಚ್ಚರ

11:12 PM Aug 03, 2021 | Team Udayavani |

ಮಹಾರಾಷ್ಟ್ರ ಹಾಗೂ ಕೇರಳ ರಾಜ್ಯಗಳಲ್ಲಿ ಕೋವಿಡ್‌ 3ನೇ ಅಲೆ ಹೆಚ್ಚಳವಾಗುತ್ತಿದ್ದು ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಾರಾಜ್ಯ ಪ್ರಯಾಣಿಕರಿಗೆ 72 ಗಂಟೆಗಳ ನೆಗೆಟಿವ್‌ ಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ. ದಾವಣಗೆರೆ ಯಲ್ಲಿ ಆ.16ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

Advertisement

ದಾವಣಗೆರೆ: ರಾತ್ರಿ ಕರ್ಫ್ಯೂ ಜಾರಿ

ದಾವಣಗೆರೆ: ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದ್ದು ಆ. 16ರ ವರೆಗೆ ಪ್ರತಿದಿನ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಾತ್ರವಲ್ಲದೇ ಆ. 31ರ ವರೆಗೆ ಪ್ರತಿ ಶನಿವಾರ ಹಾಗೂ ರವಿವಾರ ದೇವಾಲಯಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಲಾಗಿದೆ. ಉಳಿದ ದಿನಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ರಾತ್ರಿ ಕರ್ಫ್ಯೂ ವೇಳೆ ಅನುಮತಿಸಿದ ಚಟುವಟಿಕೆಗೆ ಮಾತ್ರ ಅವಕಾಶವಿರುತ್ತದೆ. ಮಹಾರಾಷ್ಟ್ರ-ಕೇರಳದಿಂದ ಬರುವ ವ್ಯಕ್ತಿಗಳ ವಿಶೇಷ ಕಣ್ಗಾವಲು ಇಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

ಬೀದರ್‌ ಗಡಿಯಲ್ಲೂ ಕಟ್ಟುನಿಟ್ಟು :

ಬೀದರ: ಜಿಲ್ಲೆಯ ಗಡಿ ಭಾಗದಲ್ಲೂ ಬಿಗಿ ಕ್ರಮ ಕೈಗೊಳ್ಳಲಾಗಿದ್ದು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಇದ್ದರೆ ಮಾತ್ರ ಅಂತಾರಾಜ್ಯ ಪ್ರಯಾಣಿಕರ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ತಿಳಿಸಿದ್ದಾರೆ. ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ತೆರೆದು ಗಡಿ ರಾಜ್ಯದಿಂದ ಬರುತ್ತಿರುವ ಪ್ರಯಾಣಿಕರನ್ನು ಪರಿಶೀಲಿಸಿ ಬಿಡಲಾಗುತ್ತಿದೆ.

Advertisement

ನೆಗೆಟಿವ್‌ ವರದಿ ಇದ್ದರೆ ಗೋವಾ ಪ್ರವೇಶ:

ಪಣಜಿ: ಹೊರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ನಾಗರಿಕರ ಮೇಲೆ ಸರಕಾರ ಹದ್ದಿನ ಕಣ್ಣಿಟ್ಟಿದೆ. ಗಡಿಯಲ್ಲಿ ಅಧಿಕ ಕಟ್ಟೆಚ್ಚರ ವಹಿಸಲಾಗಿದ್ದು, ಕೇರಳದಿಂದ ಗೋವಾಕ್ಕೆ ರೈಲ್ವೇ ಮೂಲಕ ಆಗಮಿಸುವವರಿಗೆ ರೈಲ್ವೇ ನಿಲ್ದಾಣದಲ್ಲಿ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ. ಕರ್ನಾಟಕದಿಂದ ಗೋವಾಕ್ಕೆ ಕೆಎಸ್ಸಾರ್ಟಿಸಿ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಆಗಮಿಸುವವರಿಗೆ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ.

ಮಾರ್ಗಸೂಚಿ ಪಾಲಿಸದ ಜನತೆ:

ಎಚ್‌.ಡಿ.ಕೋಟೆ: ಕೇರಳದ ಗಡಿಭಾಗಕ್ಕೆ ಹೊಂದಿಕೊಂಡಿರುವ ಎಚ್‌.ಡಿ.ಕೋಟೆ ತಾಲೂಕಿನ ಬಹುತೇಕ ಕಡೆ ಜನರು ಮಾರ್ಗಸೂಚಿ ಪಾಲನೆ ಮಾಡದಿರುವುದು ಆತಂಕಕ್ಕೆ  ಕಾರಣವಾಗಿದೆ. ಗಡಿಗಳ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಅಕ್ರಮ ಪ್ರವೇಶ: 10 ಮಂದಿ ಸೆರೆ

ಸಂಬರಗಿ: ಸಮೀಪದ ಬಮನಾಳ ಗ್ರಾಮದಲ್ಲಿ ಸೋಮವಾರ ಕೊರೊನಾ ನಿಯಮ ಉಲ್ಲಂಘಿಸಿ ಶ್ವಾನಗಳ ಸ್ಪರ್ಧೆ ಆಯೋಜಿಸಿದ್ದ ಓರ್ವ ಆರೋಪಿ ಹಾಗೂ ಸ್ಪರ್ಧೆಗೆ ನೆರೆಯ ಮಹಾರಾಷ್ಟ್ರದಿಂದ ಅಕ್ರಮವಾಗಿ ಬಂದ 10 ಜನರನ್ನು ಅಥಣಿ ಪೊಲೀಸರು ಬಂ ಧಿಸಿ, ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬಮನಾಳ ಗ್ರಾಮದ ಲಖನ್‌ ಐನಾಪುರೆ ಶ್ವಾನಗಳ ಸ್ಪರ್ಧೆ ಆಯೋಜಿಸಿದ್ದ ಆರೋಪಿ.

Advertisement

Udayavani is now on Telegram. Click here to join our channel and stay updated with the latest news.

Next