ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರಸಂಖ್ಯೆ ಬರೋಬ್ಬರಿ 25 ಸಾವಿರ ಗಡಿದಾಟಿದೆ. ಈವರೆಗಿನ ಸಾವಿನಲ್ಲಿಅರ್ಧದಷ್ಟು ಮಂದಿ ಮೊದಲ ಅಲೆಯ400 ದಿನಗಳಲ್ಲಿ ಇನ್ನರ್ಧದಷ್ಟುಮಂದಿ ಎರಡನೇ ಅಲೆಯ40 ದಿನಗಳಲ್ಲಿ ಮೃತಪಟ್ಟಿದ್ದಾರೆ!ಕೊರೊನಾ ಎರಡನೇ ಅಲೆ ಏಪ್ರಿಲ್ ಎರಡನೇ ವಾರದಿಂದ ಆರಂಭವಾಗಿದ್ದು, ಮೊದಲ ಅಲೆಯು ಬರೋಬ್ಬರಿ 400 ದಿನಗಳು ಬಾಧಿಸಿತು.
2020ರ ಮಾರ್ಚ್ 8ರಿಂದ ಏ.12ವರೆಗೂ ಒಟ್ಟಾರೆಸೋಂಕಿತರ ಸಾವಿನ ಶೇ.50 ರಷ್ಟು 12,949 ಸೋಂಕಿತರುಮೃತಪಟ್ಟಿದ್ದರು. ಬಾಕಿ 13,030 ಮಂದಿ ಏ.13 ರಿಂದ ಮೇ 23ರನಡುವೆ 40 ದಿನಗಳಲ್ಲಿ ಸಾವಿಗೀಡಾಗಿದ್ದಾರೆ. ಇದರೊಂದಿಗೆಕೊರೊನಾ ಮೊದಲ ಅಲೆಗಿಂತ, ಎರಡನೇ ಅಲೆಯಲ್ಲಿ ಸೋಂಕಿನ ಹೊಸ ಪ್ರಕರಣಗಳು ಮಾತ್ರವಲ್ಲದೇ ಸೋಂಕಿತರ ಸಾವೂ ಕೂಡಾಹತ್ತು ಪಟ್ಟು ಹೆಚ್ಚಳವಾಗಿದೆ.
ಈ ಹಿಂದೆ ಸೋಂಕು ಪ್ರಕರಣಗಳು ಕೂಡ ಮೊದಲ ಹತ್ತು ಲಕ್ಷ 400 ದಿನಗಳಲ್ಲಿ ಎರಡನೇ ಹತ್ತು ಲಕ್ಷ (10-20ಲಕ್ಷ)40 ದಿನಗಳಲ್ಲಿ ಪತ್ತೆಯಾಗಿದ್ದವು. ಒಟ್ಟಾರೆ ಸಾವಿನಲ್ಲಿ ಬೆಂಗಳೂರಿನಲ್ಲಿಯೇ 11,216 , ಮೈಸೂರಿನಲ್ಲಿ1496, ಬಳ್ಳಾರಿಯಲ್ಲಿ 1223, ತುಮಕೂರು, ಶಿವಮೊಗ್ಗ, ಕಲಬುರಗಿ,ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರದಲ್ಲಿ 500ಕ್ಕೂ ಅಧಿಕವಿದೆ. ಕೊಡಗು, ಯಾದಗಿರಿ, ಚಿತ್ರದುರ್ಗ 200ಕ್ಕಿಂತ ಕಡಿಮೆ ಇದೆ.ಬೆಂಗಳೂರಿನಲ್ಲಿ ಮೊದಲ ಅಲೆಗೆ ಹೋಲಿಸಿದರೆ ಎರಡನೇ ಅಲೆಯಲ್ಲಿಸೋಂಕಿತರ ಸಾವು ಶೇ.20ರಷ್ಟು ಹೆಚ್ಚಾಗಿವೆ. ಮೊದಲ ಅಲೆಯಲ್ಲಿ4613,ಎರಡನೇ ಅಲೆಯಲ್ಲಿ6613ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
80ರಷ್ಟು 50 ವರ್ಷ ಮೇಲ್ಪಟ್ಟವರು: ಈವರೆಗೂ ಸೋಂಕಿಗೆಬಲಿಯಾದವರಲ್ಲಿ ಶೇ.80ರಷ್ಟು ಅಂದರೆ, 20 ಸಾವಿರ ಮಂದಿ 50ವರ್ಷ ಮೇಲ್ಪಟ್ಟವರೇ ಇದ್ದಾರೆ. ಇನ್ನು ಮೊದಲ ಅಲೆಯ ಮತ್ತು ಎರಡನೇ ಅಲೆಯಲ್ಲಿ ಹಿರಿಯರ ಸಾವಿನ ಸಂಖ್ಯೆಯಲ್ಲಿ ಬಾರೀ ವ್ಯತ್ಯಾಸವಿರಬಹುದು.
ಒಟ್ಟಾರೆ ಸಾವಿನಲ್ಲಿ ಹಿರಿಯರ ಪಾಲು ವ್ಯತ್ಯಾಸವಾಗಿಲ್ಲ.ಎರಡೂ ಬಾರಿಯೂ ಶೇ.80 ರಷ್ಟು ಮಂದಿ 50 ವರ್ಷ ಮೇಲ್ಪಟ್ಟವರೇಸಾವಿಗೀಡಾಗಿದ್ದಾರೆ. 19 ವರ್ಷದೊಳಗಿನ ಸಾವಿನ ಪ್ರಮಾಣಶೇ0.3ರಷ್ಟಿದ್ದು, 20 ರಿಂದ 49 ವರ್ಷದವರು ಶೇ19.7 ರಷ್ಟು ಇದ್ದಾರೆ.
ಜಯಪ್ರಕಾಶ್ ಬಿರಾದಾರ್