Advertisement

COVID 19 :ರಾಜ್ಯದಲ್ಲಿ ಮೆಟ್ರೋ ರೈಲುಗಳು ಖಾಲಿ ಖಾಲಿ, 300 ಬಸ್‌ ಸಂಚಾರ ಸ್ಥಗಿತ

10:16 AM Mar 15, 2020 | sudhir |

ಬೆಂಗಳೂರು: ಕೊರೊನಾ ನಿಯಂತ್ರಣ ಸಲುವಾಗಿ ರಾಜ್ಯ ಘೋಷಿತ ಬಂದ್‌ಗೆ ಸರಕಾರ ಕರೆ ನೀಡಿದೆ. ಈ ಹಿನ್ನೆಲೆ ಕಾರ್ಪೋರೆಟ್‌ ಉದ್ಯೋಗಿಗಳು ಮನೆಯತ್ತ ಮುಖ ಮಾಡಿದರೆ, ಬೆಂಗಳೂರು ನಿವಾಸಿಗಳು ಕಟ್ಟುನಿಟ್ಟಾಗಿ ಸರಕಾರ ಆಜ್ಞೆಯನ್ನು ಪಾಲಿಸುತ್ತಿದ್ದಾರೆ. ಪರಿಣಾಮ ರಾಜ್ಯ ರಾಜಧಾನಿಯ ರೋಡ್‌ಗಳು, ಬಸ್‌ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಖಾಲಿ ಹೊಡೆಯುತ್ತಿವೆ.

Advertisement

ರಸ್ತೆಗಿಳಿಯದ 300 ಬಸ್‌ಗಳು
ಕೊರೊನಾ ಭೀತಿಗೆ ಬೆಚ್ಚಿ ಬಿದ್ದಿರುವ ಸಾರ್ವಜನಿಕರು ಸಾರಿಗೆ ಸೇವೆಗಳಿಗೆ ವಿದಾಯ ಹೇಳುತ್ತಿದ್ದಾರೆ. ಕೊರೊನಾ ಕಾರಣ ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 300 ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳಿಗ್ಗೆಯಿಂದ 300 ಬಸ್‌ಗಳನ್ನು ನಿಲ್ಲಿಸಲಾಗಿದ್ದು, ಪರಿಸ್ಥಿತಿ ನೋಡಿಕೊಂಡು ಬಸ್‌ಗಳ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ
ಬೆಂಗಳೂರಿನಲ್ಲಿ ಕೊರೊನಾ ಭೀತಿಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ಸುಮಾರು ಶೇ. 70 ರಿಂದ 80% ಪ್ರಯಾಣಿಕರ ಪ್ರಮಾಣ ಕುಸಿದಿದೆ. ಕಳೆದ ಎರಡು ದಿನಗಳಿಂದ ಮೆಟ್ರೋ ಬೋಗಿಗಳು ಖಾಲಿ ಖಾಲಿಯಾಗಿದ್ದು, ಇಂದು ಕೂಡ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ನಿತ್ಯ 4 ಲಕ್ಷ ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದರು, ಆದರೆ ಎರಡು ಮೂರು ದಿನಗಳಿಂದ 3 ಲಕ್ಷ 20 ಸಾವಿರ ಮಂದಿ ಪ್ರಯಾಣಿಕರು ಬರುತ್ತಿದ್ದಾರೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ ಹಿನ್ನಲೆ ಎಚ್ಚೆತ್ತುಕೊಂಡ ಬೆಂಗಳೂರು ಮೆಟ್ರೋ ನಿಗಮ, ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾದ ಕಾರಣ ಮೆಟ್ರೋ 8 ನಿಮಿಷಕ್ಕೆ ಬದಲಾಗಿ 10 ನಿಮಿಷಕ್ಕೆ ಒಂದರಂತೆ ಓಡಾಟ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಮೊದಲು ನೇರಳೆ ಹಾಗೂ ಹಸಿರು ಮಾರ್ಗದಲ್ಲಿ 8 ನಿಮಿಷಕ್ಕೊಂದು ಮೆಟ್ರೋ ಓಡಾಟ ಮಾಡಲಾಗುತ್ತಿದ್ದು, ಇದೀಗ ಪ್ರಯಾಣಿಕರು ಬಾರದ ಕಾರಣ 10 ನಿಮಿಷಕ್ಕೊಂದು ಮೆಟ್ರೋ ಓಡಿಸಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next