Advertisement

ಕೆರೆಗಳಿಗೆ ಮರುಜೀವ ನೀಡಿದ ಕೋವಿಡ್‌ 19

05:59 AM Jun 01, 2020 | Lakshmi GovindaRaj |

ಮೈಸೂರು: ಲಾಕ್‌ಡೌನ್‌ ಹಿನ್ನೆಲೆ ಜಿಲ್ಲೆಯ 800ಕ್ಕೂ ಹೆಚ್ಚು ಕೆರೆಗಳು ಮರುಜೀವ ಪಡೆಯುವಂತಾಗಿದ್ದು, ಕೆರೆಗಳ ಪುನಶ್ಚೇತನ ಕಾರ್ಯ ಆರಂಭವಾಗಿದೆ. ಲಾಕ್‌ಡೌನ್‌ ಹಿನ್ನೆಲೆ ನಗರ ಪ್ರದೇಶದಲ್ಲಿ ಉದ್ಯೋಗ ಕಟ್ಟಿಕೊಂಡಿದ್ದ  ಯುವಕರು ತಮ್ಮ ಹಳ್ಳಿ ಸೇರಿದ್ದರು. ಅಲ್ಲದೇ, ಊರಿನಲ್ಲೇ ಸಣ್ಣ ಪುಟ್ಟ ಕೃಷಿ ಕೆಲಸ ಮಾಡಲು ಶುರು ಮಾಡಿ ದ್ದರು. ಹೀಗೆ ನಗರ ಬಿಟ್ಟು ಗ್ರಾಮ ಸೇರಿದ್ದ ಯುವಕರನ್ನು ಕೃಷಿಯತ್ತ ಸೆಳೆಯಬೇಕು.

Advertisement

ಹಳ್ಳಿಯಲ್ಲೇ ಉಳಿಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಗ್ರಾಮಗಳಲ್ಲಿ ಉದ್ಯೋ ಗಾವಕಾಶ ಸೃಷ್ಟಿಸಲು ಸರ್ಕಾರ ನಿರ್ಧರಿಸಿತು. ಅದಕ್ಕಾಗಿ ನರೇಗಾ ಯೋಜನೆಯಡಿ ಕೆರೆಗಳನ್ನು ಸಂರಕ್ಷಣೆ ಮಾಡುವ ಕಾಮಗಾರಿ ಗಳನ್ನು ಕೈಗೆತ್ತಿಕೊಂಡು, ಅಳಿವಿನಂಚಿನಲ್ಲಿದ್ದ ಕೆರೆಗಳಿಗೆ  ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಯುವ ಸಮುದಾಯವನ್ನು ಬಳಕೆ ಮಾಡಿ ಕೊಳ್ಳಲಾಗುತ್ತಿದೆ. ಹಳ್ಳಿಗಳಲ್ಲಿ ಉಳಿದುಕೊಂಡಿರುವ ಯುವ ಜನತೆಗೆ ಆರ್ಥಿಕ, ಜೀವನ ನಿರ್ವಹಣೆಗೆ ಒತ್ತು ನೀಡುವುದರೊಂದಿಗೆ ಜಿಲ್ಲೆಯಲ್ಲಿ ಕೆರೆ, ಗೋಕುಂಟೆ ಅಭಿವೃದ್ಧಿ ಸೇರಿ ದಂತೆ ಒಟ್ಟು 800ಕ್ಕೂ ಹೆಚ್ಚು ಕಾಮಗಾರಿ ಗಳನ್ನು ಕೈಗೆತ್ತಿಕೊಳ್ಳಲಾಗಿದೆ.

10 ಸಾವಿರ ಜಾಬ್‌ಕಾರ್ಡ್‌ ವಿತರಣೆ: ನಗರ ಪ್ರದೇಶದಿಂದ ಯುವಕವರು ಹಳ್ಳಿ ಸೇರಿದರು. ಅಲ್ಲದೆ, ಹಳ್ಳಿಗಳಲ್ಲೂ ಸಾಕಷ್ಟು ಮಂದಿ ಇದ್ದರು. ಇದನ್ನು ಮನಗಂಡು ನರೇಗಾ ಯೋಜನೆಯಡಿ ಕಳೆದ 2 ತಿಂಗಳಿ ನಲ್ಲಿ 10 ಸಾವಿರ ಜನರಿಗೆ  ಜಾಬ್‌ಕಾರ್ಡ್‌ ವಿತರಿಸಲಾಗಿದೆ. ಇದಕ್ಕಾಗಿ 4.5 ಲಕ್ಷ ವ್ಯಯಿಸ ಲಾಗಿದ್ದು, 30 ಲಕ್ಷ ಗುರಿ ತಲುಪುವ ನಿರೀಕ್ಷೆ ಯಿದೆ. ಹೂಳು ಎತ್ತುವುದು, ಕೃಷಿ, ಮೀನು ಹೊಂಡ ನಿರ್ಮಾಣ, ಕೆರೆ ಏರಿ ಬಲವರ್ಧನೆ, ಕೆರೆ ಸರಹದ್ದಿಗೆ ಟ್ರಂಚ್‌ ಹಾಕುವುದು,  ಕೆರೆಯ ಸುತ್ತಮುತ್ತ ಸಸಿ ನೆಡುವುದು ಸೇರಿದಂತೆ ನಾನಾ ಕೆಲಸಗಳನ್ನು ಶುರು ಮಾಡಲಾಗಿದೆ.

ಏನಿದು ಕಾಮಗಾರಿ?: ಕಳೆದ 2 ತಿಂಗಳಿನಿಂದ ನಗರದ ಜನಜೀವನ ಅಸ್ತವ್ಯಸ್ತವಾಗಿತ್ತು. ಕೆಲಸ ಕಾರ್ಯಗಳು ಇಲ್ಲದೆ ಜೀವನ ನಡೆಸು ವುದೇ ಕಷ್ಟವಾಗಿತ್ತು. ಈ ವೇಳೆ ಗ್ರಾಮೀಣ ಪ್ರದೇಶದಿಂದ ವಲಸೆ ಬಂದ ನಗರ ಸೇರಿದ್ದ ಯುವ ಸಮೂಹ  ಪಟ್ಟಣ ಬಿಟ್ಟು ಹಳ್ಳಿ ಕಡೆ ಮುಖ ಮಾಡಿದ್ದರು. ಈ ವೇಳೆ ಯುವಕರು ಏನು ಮಾಡುವುದು ಎಂಬ ಚಿಂತೆಯಲ್ಲಿ ದ್ದರು. ಇದಕ್ಕೆ ಪೂರಕವಾಗಿ ಸರ್ಕಾರ ಯುವ ಮಂದಿಗೆ ನರೇಗಾ ಮೂಲಕ ವಿವಿಧ ಕಾಮ ಗಾರಿಗಳನ್ನು ನಡೆಸಿ, ಅವರಿಗೆ ಕೆಲಸ  ನೀಡಿತು. ಅಂದಾಜು 157 ಕೋಟಿ ರೂ. ವೆಚ್ಚದ ಕಾಮ ಗಾರಿ ಆರಂಭಿಸಲಾಗಿದೆ.

ಯುವ ಜನರ ಸ್ವಾವಲಂಬನೆ ದಾರಿ: ವಿದ್ಯಾವಂತ ಯುವಕರು ಕೆಲಸವಿಲ್ಲದೇ ತಮ್ಮ ಊರು ಸೇರಿದ್ದರು. ಆದರೆ, ಉದ್ಯೋಗ ಮರೀಚಿಕೆಯಾಗಿತ್ತು. ಹೀಗಾಗಿ ಸರ್ಕಾರ ಅವರು ಖಾಲಿ ಕೂರಬಾರದು ಎಂಬ ಉದ್ದೇಶದಿಂದ ನರೇಗಾ  ಯೋಜನೆಯಡಿ ಕೆರೆಗೆ ಸಂರಕ್ಷಣೆಗೆ ಸಂಬಂಧಪಟ್ಟ ನಾನಾ ಕಾಮಗಾರಿ ಹಮ್ಮಿಕೊಂಡಿತು. ಇದರಿಂದ ಹಳ್ಳಿಗಳಲ್ಲಿ ಯುವಜನತೆ ಸ್ವಾವಲಂಬನೆ ಜೀವನ ನಡೆಸಲು ಸಾಧ್ಯವಾಯಿತು. ಅಲ್ಲದೇ, ಜೀವನ ನಿರ್ವಹಣೆ ಹಾಗೂ ಆರ್ಥಿಕ  ಸ್ವಾವಲಂಬನೆ ಸಾಧಿಸಲು ಅವಕಾಶ ದೊರಕಿತು.

Advertisement

ಇದೇ ಮೊದಲ ಬಾರಿಗೆ ನೀರಿಲ್ಲದ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿಗೆ ಸರ್ಕಾರದಿಂದ ಅನು ಮೋದನೆ ದೊರಕಿದೆ. ಪ್ರತಿಯೊಂದು ಗ್ರಾಮದಲ್ಲಿ ಕೆರೆ ಕೆಲಸ ಆರಂಭವಾ ಗಿದ್ದು, ಯುವಕರಿಗೆ ಸ್ಥಳೀಯ ಮಟ್ಟ ದಲ್ಲೇ ಉದ್ಯೋಗವಿದೆ.  ಯುವಕರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. 
-ಕೃಷ್ಣರಾಜ್‌, ಜಿಪಂ ಉಪ ಕಾರ್ಯದರ್ಶಿ

*ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next