Advertisement

ಕಲ್ಪತರು ನಾಡನ್ನು ಬಿಟ್ಟು ತೊಲಗದ ಕೋವಿಡ್‌ 19

06:10 AM Jun 13, 2020 | Lakshmi GovindaRaj |

ತುಮಕೂರು: ಕೋವಿಡ್‌ 19 ವೈರಸ್‌ನಿಂದ ಜಿಲ್ಲೆ ಮುಕ್ತಿ ಹೊಂದಿತು ಎಂದು ಕೊಂಡಿದ್ದ ಜನರಿಗೆ ಈಗ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಹೊರ ರಾಜ್ಯ, ಜಿಲ್ಲೆಗಳಿಂದ ಬರುತ್ತಿರುವವ ರಿಗೆ ಕೋವಿಡ್‌ 19 ಕಾಣಿಸಿಕೊಳ್ಳುತ್ತಿರುವುದರ  ಜೊತೆಗೆ ಸಮುದಾಯದಲ್ಲಿ ಹರಡುವ ಭೀತಿ ಹೆಚ್ಚಿದೆ. ಜಿಲ್ಲೆಯಲ್ಲಿ ಕೋವಿಡ್‌ 19 ಸದ್ಯ ತೊಲಗಿತ್ತಲ್ಲ ಎಂದು ನಿರಾಳರಾಗಿದ್ದ ಜನರಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆಯಾಗಿ ಅರ್ಧ ಶತಕದತ್ತ ಹೋಗುತ್ತಿರುವುದು ಜನರಲ್ಲಿ  ಆತಂಕ ಹೆಚ್ಚುವಂತೆ ಮಾಡಿದೆ.

Advertisement

ಒಂದೇ ಕುಟುಂಬದ 6 ಮಂದಿಗೆ ಕೋವಿಡ್‌ 19: ಈವರೆಗೂ ಒಂದು, ಎರಡು ಕೋವಿಡ್‌ 19 ಪ್ರಕ ರಣ ಪತ್ತೆಯಾಗುತ್ತಿತ್ತು. ಆದರೆ ಗುರುವಾರ ಜಿಲ್ಲೆಯಲ್ಲಿ ಏಳು ಪ್ರಕರಣ ವರದಿಯಾಗಿದೆ. ಆಂಧ್ರ ಪ್ರದೇಶದ ಹಿಂದೂಪುರಕ್ಕೆ ಹೋಗಿ ಬಂದಿದ್ದ  ಒಂದೇ ಕುಟುಂಬದ ಮಕ್ಕಳೂ ಸೇರಿದಂತೆ ಆರು ಜನರಿಗೆ ಕೋವಿಡ್‌ 19 ಧೃಡ ವಾಗಿರುವುದು, ಮುಂದೆ ಸಮುದಾಯದಲ್ಲಿ ಹೆಚ್ಚು ಹರಡುವ ಸಾಧ್ಯತೆ ಕಂಡುಬರುತ್ತಿದೆ.

ಹೊರಗಿನಿಂದಲೇ ಸೋಂಕು: ಈವರೆಗೆ ಅಹ ಮದಾಬಾದ್‌ ನಿಂದ ಬಂದಿರುವ ಮೂವರಿಗೆ ಸೋಂಕು ಕಾಣಿಸಿ ಕೊಂಡಿರುವುದು ಮತ್ತು ಬೆಂಗಳೂರು ಪಾದರಾಯನಪುರದಿಂದ ಶಿರಾ ನಗರಕ್ಕೆ ಬಂದಿದ್ದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿರುವುದು ಗಮನಿಸಿರುವ ಜಿಲ್ಲೆಯ ಜನ ವಿವಿಧ ರಾಜ್ಯ ಹಾಗೂ ಹೊರ ಜಿಲ್ಲೆ ಗಳಿಂದ ಬಂದಿರುವ ಮತ್ತು ಬರುತ್ತಿರುವ ಜನ ರಿಂದ ಮತ್ತೆ ಎಲ್ಲಿ ಕೋವಿಡ್‌ 19 ಸೋಂಕು ಹರಡು ತ್ತದೆಯೋ ಎನ್ನುವ ಆತಂಕ ಮೂಡುತ್ತಿದೆ.

23 ಮಂದಿಗೆ ಚಿಕಿತ್ಸೆ: ಜಿಲ್ಲೆಯಲ್ಲಿ ಈವರೆಗೆ 11402 ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದೆ. ಅದರಲ್ಲಿ 10,703 ಪ್ರಕರಣಗಳು ನೆಗೆಟಿವ್‌ ಬಂದಿದೆ. ಇನ್ನೂ 2212 ಜನರು ಹೋಂ ಕ್ವಾರೆಂ ಟೈನ್‌ನಲ್ಲಿದ್ದಾರೆ. 1,027 ಜನರಲ್ಲಿ ಸೋಂಕು ಗುಣಲಕ್ಷಣ ಇದೆ ಎಂದು ಗುರುತಿಸಲಾಗಿದೆ.  23 ಜನರಿಗೆ ಜಿಲ್ಲಾ ಕೋವಿಡ್‌-19 ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ 587 ಜನರ ಮಾದರಿ ಪರೀಕ್ಷೆ ಲ್ಯಾಬ್‌ ನಿಂದ ಬರ ಬೇಕಾಗಿದ್ದು ಇದು ಜನರನ್ನು ಭೀತಿಗೊಳಿಸಿದೆ ಬರಬೇಕಾಗಿರುವ ವರದಿಯಲ್ಲಿ ಇನ್ನೂ ಎಷ್ಟು  ಜನರಿಗೆ ಸೋಂಕು ಇದೆಯೋ ಎನ್ನುವ ಆತಂಕ ಎದುರಾಗಿದೆ.

ಸಮುದಾಯ ಸೋಂಕಿನ ಭಯ: ಈಗ ಎಲ್ಲಾ ಕಡೆ ಲಾಕ್‌ಡೌನ್‌ ಸಂಪೂರ್ಣ ತೆರವು ಮಾಡಿದ ಮೇಲೆ ಜಿಲ್ಲೆಯಲ್ಲಿ ಅದರಲ್ಲಿಯೂ ನಗರದಲ್ಲಿ ಯಾವುದೇ ಸಾಮಾಜಿಕ ಅಂತರವೂ ಇಲ್ಲದೇ, ಮಾಸ್ಕ್ ಗಳನ್ನೂ ಧರಿಸದೇ ಎಲ್ಲಾ ಕಡೆ ಗುಂಪು  ಗುಂಪಾಗಿ ಜನ ಸಂಚರಿಸುತ್ತಿದ್ದಾರೆ. ಎಲ್ಲಾ ಕಡೆ ವಾಹನ ದಟ್ಟನೆ ಇದೆ, ಕೆಎಸ್‌ಆರ್‌ ಟಿಸಿ ಬಸ್‌ಗಳ ಸಂಚಾರ ಮುಂದುವರಿ ದಿದೆ, ಹೋಟೆಲ್‌, ದೇವಾಲಯಗಳು ತೆರೆದಿವೆ, ವ್ಯಾಪಾರಸ್ಥರು ತಮಗೆ ಉತ್ತಮ ವ್ಯಾಪಾರವಾದರೆ ಸಾಕಪ್ಪ ಎಂದು ಸರ್ಕಾರದ ನಿಯಮ ಮರೆಯುತ್ತಿದ್ದಾರೆ. ಇದರಿಂದ ಇದೆಲ್ಲವನ್ನು ಗಮನಿಸಿದರೆ ಈವ ರೆಗೂ ಸಮುದಾಯದಿಂದ ದೂರವಿದ್ದ ಈ ಕೋವಿಡ್‌ 19 ಎಲ್ಲಿ ಸಮುದಾಯಕ್ಕೆ ಹರಡುತ್ತದೆಯೋ ಎನ್ನುವ ಭೀತಿ ಹೆಚ್ಚಿದೆ.

Advertisement

ಕೋವಿಡ್‌ -19 ಜಿಲ್ಲೆಯಲ್ಲಿ ಸಮುದಾಯಕ್ಕೆ ಹೋಗದಂತೆ ಜಿಲ್ಲಾಡಳಿತದಿಂದ ಈವರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗ ಲಾಕ್‌ಡೌನ್‌ ಪೂರ್ಣಗೊಂಡಿದೆ ಜನ ಸಂಚಾರ ಎಲ್ಲಾ ಕಡೆ ಇದೆ. ಈಗ ಕೋವಿಡ್‌ 19 ಸೋಂಕು ಹೆಚ್ಚಾಗುವ  ಸಂಭವವಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಲೇ ಬೇಕು. ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು. ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬಂದು ತಕ್ಷಣ ಚಿಕಿತ್ಸೆ ಪಡೆಯ ಬೇಕು. ಕೋವಿಡ್‌ 19 ಪಾಸಿಟಿವ್‌  ಬಂದರೂ ಹೆದರಬೇಕಿಲ್ಲ ಗುಣಮುಖರಾಗಬಹುದು.
-ಡಾ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next