Advertisement

ಕೋವಿಡ್ ಸಾಂಕ್ರಮಿಕವೇ ಕೊನೆಯಲ್ಲ, ಪ್ರಸ್ತುತ ಜಗತ್ತು ನಿರ್ಲಕ್ಷ್ಯದಿಂದ ಕೂಡಿದೆ:WHO ಮುಖ್ಯಸ್ಥ

12:20 PM Dec 27, 2020 | Adarsha |

ಜಿನೇವಾ: ವಿಶ್ವದಲ್ಲಿ ಕೋವಿಡ್ ಸಾಂಕ್ರಾಮಿಕ ಒಂದೇ ಕೊನೆಯ ಕಾಯಿಲೆ ಅಲ್ಲ. ಇದರೊಂದಿಗೆ ಹವಾಮಾನ ವೈಪರಿತ್ಯ ಹಾಗೂ ಪ್ರಾಣಿ ಸಂಕುಲಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಾಗತಿಕ ಸಮುದಾಯ ವಿಫಲವಾದರೆ ಮಾನವನ ಆರೋಗ್ಯವನ್ನು ಸುಧಾರಿಸಲು ತೊಂದರೆಯಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್  ತಿಳಿಸಿದ್ದಾರೆ.

Advertisement

ಭಾನುವಾರ ನಡೆದ ಮೊದಲ ‘ಇಂಟರ್ ನ್ಯಾಷನಲ್ ಪೆಂಡಮಿಕ್ ಪ್ರಿಪೇಡ್ ನೆಸ್’ ಕಾರ್ಯಕ್ರಮದಲ್ಲಿ ವಿಡಿಯೋ ಸಂದೇಶದ ಮೂಲಕ  ಅವರು ಮಾತನಾಡಿ, ಜನರು ಅಲ್ಪ ದೃಷ್ಟಿಕೋನದವರಾಗಿದ್ದು, ತಮ್ಮಲ್ಲಿರುವ ಹಣವನ್ನು ಬಳಸುವ ಮೂಲಕ ಈಗ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಯತ್ನಿಸುತ್ತಿದ್ದಾರೆಯೇ ವಿನಃ ಮುಂಬರುವ ಸಮಸ್ಯೆಗಳನ್ನು ಬಗೆಹರಿಸಲು ಯಾವುದೇ ತಯಾರಿಯನ್ನು ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಮಹಾಮಾರಿಯಿಂದ ಜನರು ಪಾಠ ಕಲಿಯಲೇಬೇಕಾಗಿದೆ. ಪ್ರಸ್ತುತ ಜಗತ್ತು ಗೊಂದಲ ಹಾಗೂ ನಿರ್ಲಕ್ಷ್ಯದಿಂದಲೇ ಕೂಡಿದೆ. ನಾವು  ಕೇವಲ ಹಣವನ್ನು ಬಳಸಿಕೊಂಡು ಸಮಸ್ಯೆಯನ್ನು ಪರಿಹರಿಸಲು ಯತ್ನಿಸುತ್ತಿದ್ದೇವೆ ಹಾಗೂ ಅದು ಮುಗಿದ ಮೇಲೆ ಮುಂದೆ ಬರಬಹುದಾದ ಸಮಸ್ಯೆಗಳ ಕುರಿತಾಗಿ ಯಾವುದೇ ಆಲೋಚನೆಗಳನ್ನು ಮಾಡುತ್ತಿಲ್ಲ ಇದು ಬಹಳ ಅಪಾಯಕಾರಿಯಾದ ಅಂಶವಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಮೆಲ್ಬರ್ನ್ ಟೆಸ್ಟ್: ಎರಡನೇ ದಿನದಾರಂಭದಲ್ಲಿ ಭಾರತದ ಎರಡು ವಿಕೆಟ್ ಪತನ

ಜಗತ್ತಿನಲ್ಲಿ ಇದೇ ಕೊನೆಯ ಕಾಯಿಲೆ ಎಂಬುದಿಲ್ಲ ಎನ್ನುವ  ಅಂಶವನ್ನು ಇತಿಹಾಸವು ನಮಗೆ ಈಗಾಗಲೇ ತಿಳಿಸಿಕೊಟ್ಟಿದೆ ಹಾಗೂ ಕಾಯಿಲೆಗಳು ಮುನುಷ್ಯನ ಬದುಕಿನಲ್ಲಿ ಒಂದು ಭಾಗವಾಗಿರುತ್ತದೆ ಎಂಬ ಸತ್ಯವನ್ನು ನಾವು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದ್ದಾರೆ

Advertisement

ಪ್ರತಿಯೊಂದು ಕಾಯಿಲೆಗಳೂ ಕೂಡ ಮನುಷ್ಯ, ಜೀವಸಂಕುಲ ಹಾಗೂ ಜಗತ್ತಿನ ನಡುವಿನ ಕೊಂಡಿಯನ್ನುತಿಳಿಸಿಕೊಡುತ್ತವೆ, ಹವಾಮಾನ ವೈಪರಿತ್ಯಗಳು ಮತ್ತು ಪ್ರಾಣಿಸಂಕುಲಗಳ ನಾಶ ಮನುಷ್ಯನ್ನು ಇನ್ನಷ್ಟು ಸಂಕಷ್ಟಕ್ಕೆ ಎಡೆಮಾಡಿಕೊಡುತ್ತದೆ ಎಂದರು.

ಇದನ್ನೂ ಓದಿ:ಸಂಪ್ರದಾಯಕ್ಕೆ ಸೀಮಿತವಾದ ಮೂಲ್ಕಿ ಸೀಮೆ ಅರಸು ಕಂಬಳ

ಕಳೆದ 12 ತಿಂಗಳುಗಳಿಂದ ಜಗತ್ತನ್ನು ಬಾಧಿಸುತ್ತಿರುವ ಕೋವಿಡ್ ಮಹಾಮಾರಿ ಜಾಗತಿಕ ರೂಪುರೇಷೆಯನ್ನೇ ಬುಡಮೇಲು ಮಾಡಿದೆ. ಇದು ಕೇವಲ ಒಂದು ಕಾಯಿಲೆಯಾಗಿ ಪರಿಣಮಿಸದೆ, ಆರ್ಥಿಕ ಹಾಗೂ ಸಾಮಾಜಿವಾಗಿಯೂ ಬಹಳಷ್ಟು ಪರಿಣಾಮ ಬೀರಿದೆ ಎಂದು ಟೆಡ್ರೊಸ್ ಅಧಾನೊಮ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next